ಫಿಟ್ನೆಸ್‌ ಚರ್ಚೆಗೆ ನಿತ್ಯಾ ಮೆನನ್‌ ಗರಂ

ಸೋಮಾರಿತನದಿಂದ ಯಾರೂ ದಪ್ಪ ಆಗಲ್ಲ ....

Team Udayavani, Aug 22, 2019, 3:01 AM IST

nitya-menon

ಸಾಮಾನ್ಯವಾಗಿ ಚಿತ್ರರಂಗದಲ್ಲಿ ತಾರೆಯರು ಫಿಟ್‌ ಆ್ಯಂಡ್‌ ಫೈನ್‌ ಆಗಿ, ಗ್ಲಾಮರಸ್‌ ಆಗಿ ಇರಲು ಬಯಸುತ್ತಾರೆ. ಅದರಲ್ಲೂ ಹೀರೋಯಿನ್ಸ್‌ ಆಗಿರುವವರಂತೂ ತಮ್ಮ ಫಿಟ್ನೆಸ್‌, ಗ್ಲಾಮರ್‌ ಬಗ್ಗೆ ಇನ್ನಿಲ್ಲದಂತೆ ಕಾಳಜಿ ತೆಗೆದುಕೊಳ್ಳುತ್ತಿರುತ್ತಾರೆ. ಹೀಗಿರುವಾಗ, ಯಾರಾದರೂ ತಮ್ಮ ಫಿಟ್ನೆಸ್‌ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿದರೆ, ನೆಗೆಟಿವ್‌ ಕಾಮೆಂಟ್ಸ್‌ ಮಾಡಿದರೆ ಅವರಿಗೆ ಹೇಗಾಗಬಹುದು? ಅದಕ್ಕೆ ಈಗ ಸಿಗುತ್ತಿರುವ ತಾಜಾ ಉದಾಹರಣೆ ಅಂದ್ರೆ ನಿತ್ಯಾ ಮೆನನ್‌.

ಹೌದು, “ಜೋಶ್‌’ ಚಿತ್ರದ ಮೂಲಕ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಿತ್ಯಾ ಮೆನನ್‌, ಮೊದಲ ಚಿತ್ರದಲ್ಲೇ ಸಿನಿಪ್ರಿಯರ ಗಮನ ಸೆಳೆದ ಹುಡುಗಿ. ಬಳಿಕ “ಮೈನಾ’ ಹಾಗೂ “ಕೋಟಿಗೊಬ್ಬ-2′ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದ ನಿತ್ಯಾಗೆ ಆ ಚಿತ್ರಗಳು ಸಾಕಷ್ಟು ಹೆಸರು ಮತ್ತು ಜನಪ್ರಿಯತೆಯನ್ನು ತಂದುಕೊಟ್ಟಿದ್ದವು. ಕನ್ನಡದ ಜೊತೆಯಲ್ಲೆ ತಮಿಳು, ತೆಲುಗು, ಹಿಂದಿ ಚಿತ್ರರಂಗಗಳಲ್ಲೂ ಸಕ್ರಿಯವಾಗಿದ್ದ ನಿತ್ಯಾ, ಅನೇಕ ಸ್ಟಾರ್‌ ನಟರ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವಾಕೆ.

ಇವೆಲ್ಲದರ ನಡುವೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್‌ ಮೀಡಿಯಾಗಳಲ್ಲಿ ನಿತ್ಯಾ ಮೆನನ್‌ ಅವರ ಫಿಟ್ನೆಸ್‌ ಕುರಿತು ಅವರ ಫ್ಯಾನ್ಸ್‌ ಚರ್ಚೆ ಶುರು ಮಾಡಿದ್ದು, ಇತ್ತೀಚೆಗೆ ನಿತ್ಯಾ ಸ್ವಲ್ಪ ದಪ್ಪ ಆಗುತ್ತಿದ್ದಾರೆ ಎಂದು ಸ್ವತಃ ಅವರ ಅಭಿಮಾನಿಗಳೇ ಕಾಲೆಳೆಯುತ್ತಿದ್ದಾರೆ. ತನ್ನ ಫಿಟ್ನೆಸ್‌ ಬಗ್ಗೆ ದಿನಾ ಬರುತ್ತಿರುವ ನೆಗೆಟಿವ್‌ ಕಾಮೆಂಟ್ಸ್‌ ನಿತ್ಯಾಗೆ ನಿತ್ಯ ಕಿರಿಕಿರಿಯನ್ನುಂಟು ಮಾಡುತ್ತಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ತಮ್ಮ ಫಿಟ್ನೆಸ್‌ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುವುವರ ವಿರುದ್ದ ನಿತ್ಯಾ ಗುಟುರು ಹಾಕಿದ್ದಾರೆ.

“ಜನ ಸಾಮಾನ್ಯರಲ್ಲಿ ಕೆಲವರು ಅಜ್ಞಾನ ಹೊಂದಿದ್ದಾರೆ. ಯಾಕಂದ್ರೆ, ಯಾರಾದರೂ ತೂಕದ ಸಮಸ್ಯೆ ಎದುರಿಸುತ್ತಿದ್ದರೇ ಅವರು ಸೋಮಾರಿ ಅಥವಾ ತಿಂಡಿಪೋತಿ ಅದಕ್ಕೆ ದಪ್ಪಕ್ಕೆ ಆಗಿದ್ದಾರೆ ಎನ್ನುವುದು ತಪ್ಪು. ತಿನ್ನುವುದರಿಂದ, ಸೋಮಾರಿತನದಿಂದ ಯಾರೂ ದಪ್ಪ ಆಗಲ್ಲ. ಸಿನಿಮಾ ಕಲಾವಿದರು ಸೋಮಾರಿಗಳಲ್ಲ. ಕೆಲವು ಹಾರ್ಮೋನ್‌ ಸಮಸ್ಯೆಗಳಿಂದಲೂ ತೂಕ ಹೆಚ್ಚಾಗುತ್ತದೆ. ನಾವು ಸುಮ್ಮನೆ ಕೂತು ಎಂಜಾಯ್‌ ಮಾಡ್ತಿಲ್ಲ. ಇಂಥ ಕಾಮೆಂಟ್ಸ್‌ ನಮಗೆ ಬೇಸರ ಉಂಟು ಮಾಡುತ್ತೆ.

ಮಾತನಾಡುವ ಮೊದಲು ಜನರು ಈ ಬಗ್ಗೆ ಅರಿವು ಹೊಂದಿರಬೇಕು’ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ನಿತ್ಯಾ ಯಾರಿಗೂ ಈ ಥರ ನೆಗೆಟಿವ್‌ ಕಾಮೆಂಟ್ಸ್‌ ಮಾಡಬೇಡಿ ಎಂದಿದ್ದಾರೆ. ಇನ್ನು ನಿತ್ಯಾ, ಹಾರ್ಮೋನ್‌ ಸಮಸ್ಯೆಯಿಂದ ಬಳಲುತ್ತಿದ್ದು, ತಮ್ಮ ದೇಹದ ತೂಕ ಹೆಚ್ಚಿರುವ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಆರಂಭದಿಂದಲೂ ನಿತ್ಯಾ ಮೆನನ್‌ ಎತ್ತರ ಕಡಿಮೆ, ಬೇರೆ ಭಾಷೆಯಲ್ಲಿ ನಿತ್ಯಾಗೆ ಅವಕಾಶಗಳು ಸಿಗುವುದು ಕಷ್ಟ ಎಂಬ ಮಾತುಗಳ ನಡುವೆಯೇ ಸಿನಿ ಜರ್ನಿ ಶುರು ಮಾಡಿರುವ ನಿತ್ಯಾ ಮೆನನ್‌,

ಸದ್ಯ ಕನ್ನಡಕ್ಕಿಂತ ಹೆಚ್ಚಾಗಿ ತಮಿಳು, ತೆಲುಗು, ಹಿಂದಿಯಲ್ಲಿ ಭಾಷೆಗಳಲ್ಲೆ ಬಿಝಿಯಾಗಿದ್ದಾರೆ. ಇತ್ತೀಚೆಗಷ್ಟೆ “ಮಿಷನ್‌ ಮಿಂಗಲ್’ ಚಿತ್ರದಲ್ಲಿ ನಟಿಸಿದ್ದ ನಿತ್ಯಾ, ಮುಂಬರಲಿರುವ “ಕೊಲಾಂಬಿ’, “ದಿ ಐರನ್‌ ಲೇಡಿ’, “ಸೈಕೋ’, “ಅರಾಮ್‌ ತಿರುಕಲ್ಪನಾ’ ಎಂಬ ಚಿತ್ರಗಳಲ್ಲೂ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.  ಅದೇನೆಯಿರಲಿ, ನಿತ್ಯಾ ಮೆನನ್‌ ತಮ್ಮ ಫಿಟ್ನೆಸ್‌ ಕಾಮೆಂಟ್ಸ್‌ಗೆ ನೀಡಿರುವ ಪ್ರತಿಕ್ರಿಯೆಗೆ ಕುರಿತು ಸೋಶಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟು ಮೆಚ್ಚುಗೆಯಂತೂ ವ್ಯಕ್ತವಾಗುತ್ತಿದೆ.

ಟಾಪ್ ನ್ಯೂಸ್

Kharajola

MUDA Scam; ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಂಸದ ಕಾರಜೋಳ

Dravid–gavskar

Indian Cricket; ರಾಹುಲ್‌ ದ್ರಾವಿಡ್‌ಗೆ ಭಾರತ ರತ್ನ ಕೊಡಿ: ಗವಾಸ್ಕರ್‌

rain 21

Heavy Rain; ಉತ್ತರ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಜುಲೈ 8 ರಂದು ಪಿಯುಸಿವರೆಗೆ ರಜೆ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ

1-wqwewewq

T20 ಸರಣಿ ಸಮಬಲ: ಜಿಂಬಾಬ್ವೆ ವಿರುದ್ಧ 100 ರನ್ ಗಳ ಅಮೋಘ ಜಯ ಸಾಧಿಸಿದ ಭಾರತ

renukaacharya

Lok Sabha Elections; ಪಕ್ಷ ವಿರೋಧಿ ಚಟುವಟಿಕೆ ನಡೆಸಿಯೇ ಇಲ್ಲ: ರೇಣುಕಾಚಾರ್ಯ

BSNL ಟವರ್ ಸಮಸ್ಯೆ: ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ ಸಂಸದ ಕಾಗೇರಿ!

BSNL ಟವರ್ ಸಮಸ್ಯೆ: ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಿದ ಸಂಸದ ಕಾಗೇರಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Renukaswamy case: ದರ್ಶನ್‌ ಗ್ಯಾಂಗ್‌ ವಿರುದ್ಧ 200 ಸಾಕ್ಷಿಗಳ ಸಂಗ್ರಹ

Renukaswamy case: ದರ್ಶನ್‌ ಗ್ಯಾಂಗ್‌ ವಿರುದ್ಧ 200 ಸಾಕ್ಷಿಗಳ ಸಂಗ್ರಹ

ಸಾಲು-ಸಾಲು ಹೊಸ ಸಿನೆಮಾ: ಕೋಸ್ಟಲ್‌ವುಡ್‌ಗೀಗ ಪರ್ವ ಕಾಲ!

ಸಾಲು-ಸಾಲು ಹೊಸ ಸಿನೆಮಾ: ಕೋಸ್ಟಲ್‌ವುಡ್‌ಗೀಗ ಪರ್ವ ಕಾಲ!

ರಿಶ್ವಿ‌ಕ್‌ ಶೆಟ್ಟಿ ನಿರ್ಮಾಣದ “ಬಿಲ್ಲಾರಿ” ಮುಹೂರ್ತ

Billari; ರಿಶ್ವಿ‌ಕ್‌ ಶೆಟ್ಟಿ ನಿರ್ಮಾಣದ “ಬಿಲ್ಲಾರಿ” ಮುಹೂರ್ತ

vidyarthi vidyarthiniyare premier show in dubai

ದುಬೈನಲ್ಲಿ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಪ್ರೀಮಿಯರ್‌ ಶೋ

Huccha movie to be re-released with technical update

Huccha; ತಾಂತ್ರಿಕ ಅಪ್ಡೇಟ್ ನೊಂದಿಗೆ ಮರು ಬಿಡುಗಡೆಯಾಗಲಿದೆ ‘ಹುಚ್ಚ’

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Kharajola

MUDA Scam; ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಂಸದ ಕಾರಜೋಳ

Dravid–gavskar

Indian Cricket; ರಾಹುಲ್‌ ದ್ರಾವಿಡ್‌ಗೆ ಭಾರತ ರತ್ನ ಕೊಡಿ: ಗವಾಸ್ಕರ್‌

rain 21

Heavy Rain; ಉತ್ತರ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಜುಲೈ 8 ರಂದು ಪಿಯುಸಿವರೆಗೆ ರಜೆ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ

Bhatkal ಮುಂದುವರಿದ ವರುಣನ ಆರ್ಭಟ; ತಗ್ಗು ಪ್ರದೇಶಗಳು ಜಲಾವೃತ

1-wqwewewq

T20 ಸರಣಿ ಸಮಬಲ: ಜಿಂಬಾಬ್ವೆ ವಿರುದ್ಧ 100 ರನ್ ಗಳ ಅಮೋಘ ಜಯ ಸಾಧಿಸಿದ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.