ನೋ ಡೌಟ್, ಶಿವರಾಜಕುಮಾರ್ ನಟಿಸ್ತಾರೆ!
Team Udayavani, Jul 5, 2017, 10:45 AM IST
“ದಿ ವಿಲನ್ ‘ ಸಿನಿಮಾದಲ್ಲಿ ಶಿವರಾಜಕುಮಾರ್ ನಟಿಸುತ್ತಾರಾ, ಇಲ್ವಾ? ಹೀಗೊಂದು ಪ್ರಶ್ನೆ ಅನೇಕರಲ್ಲಿತ್ತು. ಅದರಲ್ಲೂ ಶಿವರಾಜಕುಮಾರ್ ಅಭಿಮಾನಿಗಳ ಮನದಲ್ಲಿ ಈ ಪ್ರಶ್ನೆ ಇತ್ತು. ಅದಕ್ಕೆ ಕಾರಣ, “ವಿಲನ್’ ಚಿತ್ರೀಕರಣ ಆರಂಭವಾಗಿ ಇಷ್ಟು ದಿನವಾದರೂ ಶಿವರಾಜಕುಮಾರ್, ಚಿತ್ರತಂಡವನ್ನು ಸೇರಿಕೊಂಡಿರಲಿಲ್ಲ.
ಬೆಂಗಳೂರಿನಲ್ಲಿ ಆರಂಭವಾದ ಚಿತ್ರೀಕರಣ ಆ ನಂತರ ಶಿವಮೊಗ್ಗಕ್ಕೆ ಹೋಗಿ, ಬೆಳಗಾವಿಗೆ ಶಿಫ್ಟ್ ಆಗಿ, ಅಲ್ಲಿಂದ ಬ್ಯಾಂಕಾಕ್‌ನಲ್ಲಿ ಶೂಟಿಂಗ್ ಮುಗಿಸಿ ಬಂದರೂ, ಶಿವರಾಜಕುಮಾರ್ ಮಾತ್ರ ಚಿತ್ರೀಕರಣದಲ್ಲಿ ಭಾಗವಹಿಸಿಲ್ಲ.ಸುದೀಪ್ ಹಾಗೂ ಇತರ ಕಲಾವಿದರು ಮಾತ್ರ ಆ ಚಿತ್ರೀಕರಣದಲ್ಲಿದ್ದರು. ಹಾಗಾಗಿ, ಶಿವರಾಜಕುಮಾರ್ ಯಾಕೆ ಭಾಗವಹಿಸುತ್ತಿಲ್ಲ, ಅವರು ಚಿತ್ರದಲ್ಲಿ ನಟಿಸ್ತಾರೋ, ಇಲ್ವೋ ಎಂಬ ಪ್ರಶ್ನೆ ಅನೇಕರಲ್ಲಿತ್ತು.
“ನೋ ಡೌಟ್, ಶಿವಣ್ಣ ನಟಿಸ್ತಾರೆ. ಅವರ ಫೋರ್ಶನ್ ಲಂಡನ್‌ನಿಂದಲೇ ಆರಂಭವಾಗುತ್ತದೆ’ ಎನ್ನುತ್ತಾರೆ ಪ್ರೇಮ್. ಶಿವರಾಜಕುಮಾರ್ ಅವರ ಚಿತ್ರೀಕರಣ ಲಂಡನ್‌ನಲ್ಲಿ ಆರಂಭವಾಗಲಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಹಿಂದೆಯೇ “ದಿ ವಿಲನ್’ ತಂಡ ಲಂಡನ್‌ಗೆ ಹೋಗಬೇಕಿತ್ತು.
ಆದರೆ ಅಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದರಿಂದ ಶೆಡ್ನೂಲ್‌ನಲ್ಲಿ ಬದಲಾವಣೆ ಮಾಡಿಕೊಂಡು ಬ್ಯಾಂಕಾಕ್‌ಗೆ ತೆರಳಿ, ಅಲ್ಲಿ ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣ ಮಾಡಿಕೊಂಡು ಈಗ ಚಿತ್ರತಂಡ ವಾಪಾಸ್ ಆಗಿದೆ. ಈಗ ಲಂಡನ್‌ಗೆ ತೆರಳಲು “ದಿ ವಿಲನ್’ ತಂಡ ರೆಡಿಯಾಗಿದೆ. ಶಿವರಾಜಕುಮಾರ್, ಸುದೀಪ್ ಹಾಗೂ ಆ್ಯಮಿ ಜಾಕ್ಸನ್ ಅವರು ಅಲ್ಲಿನ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.
ಜುಲೈ 12ಕ್ಕೆ ಶಿವರಾಜಕುಮಾರ್ ಅವರ ಹುಟ್ಟುಹಬ್ಬವಿದ್ದು, ಅದು ಮುಗಿಸಿಕೊಂಡು ಜುಲೈ 14ಕ್ಕೆ ಶಿವರಾಜಕುಮಾರ್ ಲಂಡನ್‌ಗೆ ತೆರಳಲಿದ್ದಾರೆ. “ಶಿವಣ್ಣ ನಟಿಸುತ್ತಾರಾ, ಇಲ್ವಾ ಎಂದು ಅನೇಕರು ಕೇಳುತ್ತಿದ್ದಾರೆ. ಖಂಡಿತಾ ನಟಿಸುತ್ತಿದ್ದಾರೆ. ಜುಲೈ 14 ರ ನಂತರ ಅವರು ಲಂಡನ್‌ಗೆ ಬಂದು ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ’ ಎನ್ನುತ್ತಾರೆ ಪ್ರೇಮ್. ಲಂಡನ್‌ನಲ್ಲಿ ಜುಲೈ 22ರವರೆಗೆ ಚಿತ್ರೀಕರಣ ನಡೆಯಲಿದೆ.
ನಿರ್ದೇಶಕ ಪ್ರೇಮ್ ಜುಲೈ 8ರಂದೇ ಲಂಡನ್‌ಗೆ ಹೋಗಿ ಚಿತ್ರೀಕರಣಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲಿದ್ದಾರೆ. ಲಂಡನ್ ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ವಾಪಾಸ್ ಆಗುವ ಚಿತ್ರತಂಡ ಮತ್ತೆ ಲೇಹ್ ಲಡಾಕ್‌ಗೆ ಹಾಡುಗಳ ಚಿತ್ರೀಕರಣಕ್ಕೆ ತೆರಳಲಿದೆ. ಸುಮಾರು 13 ಶೆಡ್ನೂಲ್‌ಗಳಲ್ಲಿ “ದಿ ವಿಲನ್’ ಚಿತ್ರೀಕರಣ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.