ರಾಜಕುಮಾರ ಯಾರಿಗೂ ಬೇಸರ ಪಡಿಸಲ್ಲ
Team Udayavani, Feb 27, 2017, 11:25 AM IST
ಪುನೀತ್ ರಾಜ್‌ಕುಮಾರ್ ಮಾತಿಗೆ ಸಿಗದೆ ಬಹಳ ದಿನವಾಗಿತ್ತು. ಅವರು ಮಾತಿಗೆ ಸಿಕ್ಕಿದ್ದು ಸುಮಾರು ಹನ್ನೆರೆಡು ನಿಮಿಷಗಳಷ್ಟೇ. ಆ ಸಮಯದಲ್ಲಿ ರಿಲೀಸ್‌ಗೆ ರೆಡಿಯಾಗಿರುವ ಅವರ “ರಾಜಕುಮಾರ’, ಅವರದೇ ಹೊಸ ಬ್ಯಾನರ್‌ನಲ್ಲಿ ಸೆಟ್ಟೇರಲಿರುವ ಹೊಸ ಸಿನಿಮಾ, “ದೊಡ್ಮನೆ ಹುಡುಗ’ನಿಗೆ ಅಭಿಮಾನಿಗಳು ಕೊಟ್ಟ ಸಹಕಾರ, ಪ್ರೋತ್ಸಾಹ, ರಾಕ್‌ಲೈನ್ ವೆಂಕಟೇಶ್ ಜತೆ ಹೊಸ ಸಿನಿಮಾ, ಫಿಟ್‌ನೆಸ್ ಗುಟ್ಟು ಇತ್ಯಾದಿ ಕುರಿತು “ಚಿಟ್‌ಚಾಟ್’ನಲ್ಲಿ ಮಾತನಾಡಿದ್ದಾರೆ.
* ನಿಮ್ಮ “ರಾಜಕುಮಾರ’ನ ಬಗ್ಗೆ ಹೇಳಿ?
– ಹೆಚ್ಚು ಏನನ್ನೂ ಹೇಳಂಗಿಲ್ಲ. ಇದೊಂದು ಪ್ಯೂರ್ಲಿ ಫ್ಯಾಮಿಲಿ ಸಿನಿಮಾ. ಎಲ್ಲಾ ವರ್ಗಕ್ಕೂ ಇಷ್ಟವಾಗೋ ಕಥೆ ಇಲ್ಲಿದೆ. ಹಾಗಂತ, ಎರಡು ಫ್ಯಾಮಿಲಿಗಳ ನಡುವಿನ ಕಥೆ ಅಂದುಕೊಳ್ಳುವಂತಿಲ್ಲ. ದೊಡ್ಡ ತಾರಾಬಳಗ ಇರುವ ಹೊಸತನದ ಸಿನಿಮಾ.
* ಟೈಟಲ್‌ಗೂ ನಿಮ್ಮ ತಂದೆ ಹೆಸರಿಗೂ ಏನಾದ್ರೂ ಸಂಬಂಧವಿದೆಯಾ?
– ಖಂಡಿತವಾಗಿಯೂ ಇಲ್ಲ. ಸಿನಿಮಾಗೂ, ತಂದೆ ಹೆಸರಿಗೂ ಸಂಬಂಧವಿಲ್ಲ. ಹೆಗಲ ಮೇಲೆ ಪಾರಿವಾಳ ಕೂರಿಸಿ, “ರಾಜಕುಮಾರ’ ಎಂಬ ಟೈಟಲ್ ಇಟ್ಟಿರುವುದು ಕೇವಲ ಮಾರ್ಕೆಟಿಂಗ್‌ಗೋಸ್ಕರವಷ್ಟೇ. ರಾಜಕುಮಾರ ಅಂದರೆ, ರಾಜಕುಮಾರ ಅಷ್ಟೇ. ಸಿನಿಮಾ ನೋಡಿದಾಗಲಷ್ಟೇ ಈ ರಾಜಕುಮಾರ ಹೇಗೆಂಬುದು ಗೊತ್ತಾಗುತ್ತೆ. ಅದನ್ನು ನಾನು ಹೇಳವಂತಿಲ್ಲ.
* ನಿರ್ದೇಶಕರ ಮೊದಲ ಸಿನ್ಮಾದಲ್ಲಿ ವಿಷ್ಣುವರ್ಧನ್ ಅವರ ಶೇಡ್ ಇತ್ತು, ಇಲ್ಲಿ ಡಾ. ರಾಜಕುಮಾರ್ ಅವರ ಶೇಡ್ ಏನಾದ್ರೂ?
– “ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ’ಯಲ್ಲಿ ವಿಷ್ಣು ಸರ್ ಶೇಡ್ ಇತ್ತಾದರೂ, ಇಲ್ಲಿ ಟೈಟಲ್ ಮಾತ್ರ “ರಾಜಕುಮಾರ’. ಹಾಗಂತ ಅಪ್ಪಾಜಿಯ ಯಾವುದೇ ಶೇಡ್ ಇಲ್ಲಿಲ್ಲ. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಸಿನಿಮಾ ಆಗಿದೆಯಷ್ಟೇ.
* ಟೈಟಲ್ ಹೆಚ್ಚು ನಿರೀಕ್ಷೆ ಹುಟ್ಟಿಸಿದೆ ಅಲ್ವಾ?
– ಹೌದು, ಅಂತಹ ನಿರೀಕ್ಷೆ ಇರಬೇಕು ಅಂತಾನೇ ಅಲ್ವಾ “ರಾಜಕುಮಾರ’ ಅಂತ ಇಟ್ಟಿರೋದು. ಸಿನಿಮಾ ರಿಲೀಸ್ ಆದಾಗ, ಜೋಶ್‌ನಿಂದ ಹೋಗಿ ಸಿನಿಮಾ ನೋಡುವವರಿಗೆ ಆ ನಿರೀಕ್ಷೆ ಸುಳ್ಳಾಗಬಾರದು. ಅಷ್ಟರಮಟ್ಟಿಗೆ ಚಿತ್ರ ಮೂಡಿಬಂದಿದೆ. ನನಗೂ ಸಿಕ್ಕಾಪಟ್ಟೆ ಹೋಪ್ ಇದೆ. ಒಂದಂತೂ ನಿಜ, “ರಾಜಕುಮಾರ’ ಯಾರಿಗೂ ಬೇಸರಪಡಿಸಲ್ಲ. ಈಗಿನ ಟ್ರೆಂಡಿಗಿಂತ ಪ್ಯೂರ್ಲಿ ಫ್ಯಾಮಿಲಿ ಸಿನಿಮಾ ಇದು.
* “ದೊಡ್ಮನೆ ಹುಡುಗ’ದಲ್ಲಿದ್ದಂತೆ ಇಲ್ಲೂ ಅಂತಹ ಹಾಡೇನಾದ್ರೂ?
– “ದೊಡ್ಮನೆ ಹುಡುಗ’ ಚಿತ್ರ “ಅಭಿಮಾನಿಗಳೇ ನಮ್ಮನೆ ದೇವ್ರು’ ಹಾಡು ನಾನು ಎಷ್ಟೇ ಸಿನಿಮಾ ಮಾಡಿದರೂ ಲೈಫಲ್ಲಿ ಮರೆಯೋದಿಲ್ಲ. ಮೊದಲು ಅಂಥದ್ದೊಂದು ಸಿನಿಮಾ ಮತ್ತು ಹಾಡು ಕೊಟ್ಟ ಸೂರಿ ಸರ್‌ಗೆ ಥ್ಯಾಂಕ್ಸ್ ಹೇಳ್ತೀನಿ. ಸತ್ಯಹೆಗಡೆ, ಹರ್ಷ ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿದ್ದಕ್ಕೆ ಆ ಹಾಡು ಅಷ್ಟೊಂದು ಅದ್ಭುತವಾಗಿ ಬಂತು. “ರಾಜಕುಮಾರ’ದಲ್ಲಿ ಆ ರೀತಿಯ ಹಾಡಿಲ್ಲ. ಬೇರೆಯದ್ದೇ ಫೀಲ್ ಇದೆ.
* ಆ ಹಾಡಲ್ಲಿ ಅಭಿಮಾನಿಗಳ ಸಹಕಾರ ಹೇಗಿತ್ತು?
– ಮೊದಲಿಗೆ ಎಲ್ಲೆಲ್ಲಿ ಆ ಹಾಡನ್ನು ಶೂಟ್ ಮಾಡಿದೊÌà, ಆ ಊರಲ್ಲಿದ್ದ ಜನರಿಗೆ ದೊಡ್ಡ ಥ್ಯಾಂಕ್ಸ್. ಎಲ್ಲೂ ತೊಂದರೆ ಮಾಡಲಿಲ್ಲ. ಚಿತ್ರೀಕರಣಕ್ಕೆಂದು ಹೊರಗೆ ಹೋದಾಗ, ಅಂತಹ ಗುಂಪಲ್ಲಿ ಒಂದು ಗಂಟೆ, ಎರಡು ಗಂಟೆ ಚಿತ್ರೀಕರಣ ನಡೆಸಲು ಆಗೋದಿಲ್ಲ. ಆದರೆ, ಜನರೇ ಖುಷಿಪಟ್ಟು, ಚಿಕ್ಕಪುಟ್ಟ ತಳ್ಳಾಟಗಳ ನಡುವೆಯೂ, ಅಲ್ಲಿ ನಿಂತು, ನನ್ನೊಂದಿಗೆ ಸಹಕರಿಸಿದರು. ಅಷ್ಟೇ ಅಲ್ಲ, ಸಿನಿಮಾ ನೋಡಿ, ಹಾಡನ್ನೂ ಗೆಲ್ಲಿಸಿದರು. ಆ ನೆನಪು ಎಂದೂ ಮಾಸೋದಿಲ್ಲ.
* “ಅಂಜನಿ ಪುತ್ರ’ ಹೇಗೆ ನಡೆಯುತ್ತಿದೆ?
– ಚಿತ್ರ ಶುರುವಾಗಿದೆ. ಅದು “ಪೂಜೈ’ ರಿಮೇಕ್ ಅಂತಾರೆ. ಆದರೆ, ಅದು ರಿಮೇಕ್ ಅಲ್ಲ. ಹರ್ಷ ಸಾಕಷ್ಟು ಚೇಂಜಸ್ ಮಾಡಿ ಸಿನಿಮಾ ಮಾಡುತ್ತಿದ್ದಾರೆ. ನಿಜಕ್ಕೂ ಹರ್ಷ ಬ್ರಿಲಿಯಂಟ್. ಗುಡ್ ಮೇಕರ್ ಕೂಡ. ಹರ್ಷ ಜತೆ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ನನ್ನ ಎರಡನೇ ಸಿನಿಮಾದಿಂದಲೂ ಹರ್ಷ ಗೊತ್ತು. “ಅಭಿ’ ಚಿತ್ರದಲ್ಲಿ ನಟಿಸಿದ್ದರು. “ಆಕಾಶ್’ ಚಿತ್ರದಿಂದ ನನ್ನ ಸಿನಿಮಾಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದರು. ಅಲ್ಲಿಂದ ಇಲ್ಲಿಯವರೆಗೆ ಲೈನ್ ಆಗಿ ಸಿನಿಮಾ ಮಾಡುತ್ತಲೇ ಬಂದಿದ್ದಾರೆ. ಸದ್ಯಕ್ಕೆ “ಅಂಜನಿ ಪುತ್ರ’ ಚೆನ್ನಾಗಿ ನಡೆಯುತ್ತಿದೆ.
* ಮುಂದೇನು?
– “ಅಂಜನಿ ಪುತ್ರ’ ಬಳಿಕ ರಾಕ್‌ಲೈನ್ ವೆಂಕಟೇಶ್ ಅವರ ಬ್ಯಾನರ್‌ನಲ್ಲಿ ಹೊಸ ಚಿತ್ರ ಶುರುವಾಗಲಿದೆ. ಇದರೊಂದಿಗೆ ಸಾಕಷ್ಟು ಕಥೆಗಳನ್ನು ಕೇಳುತ್ತಿದ್ದೇನೆ. ಒಂದಾದ ಮೇಲೊಂದು ಸಿನಿಮಾ ಮಾಡೋದಷ್ಟೇ ನನ್ನ ಉದ್ದೇಶ. ಒಳ್ಳೇ ಕಥೆಗಳೂ ಲಿಸ್ಟ್‌ನಲ್ಲಿವೆ.
* ನಿಮ್ಮ ಪಿಆರ್‌ಕೆ ಬ್ಯಾನರ್ ಸಿನಿಮಾ ಬಗ್ಗೆ?
– ನನ್ನದೇ ಬ್ಯಾನರ್‌ನಲ್ಲೊಂದು ಸಿನಿಮಾ ನಿರ್ಮಾಣವಾಗಲಿದೆ. ಪಿಆರ್‌ಕೆ ಬ್ಯಾನರ್‌ನಲ್ಲಿ ಈಗಾಗಲೇ “ಗೋಧಿ…’ ಖ್ಯಾತಿಯ ಹೇಮಂತ್‌ರಾವ್ ಒಂದು ಸಿನಿಮಾ ಮಾಡುವ ಮಾತುಕತೆ ಆಗಿದೆ. ಕಥೆಯ ಒಂದು ಎಳೆಯಿಂದ ತಯಾರಿ ಶುರುವಾಗಿದೆ. ಕಥೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ನಾನೇನಿದ್ದರೂ ಆ ಚಿತ್ರಕ್ಕೆ ಪ್ರೊಡ್ನೂಸರ್ ಅಷ್ಟೇ. ಈಗಲೇ ಎಲ್ಲವನ್ನೂ ಹೇಳ್ಳೋಕ್ಕಾಗಲ್ಲ. ಶೂಟಿಂಗ್ ಮೊದಲ ದಿನ ನಿಮ್ಮನ್ನೆಲ್ಲಾ ಸೆಟ್‌ಗೆ ಕರೆದು ಡೀಟೇಲ್ಸ್ ಕೊಡ್ತೀನಿ.
* ರಾಜಕುಮಾರನ ದರ್ಶನ ಯಾವಾಗ?
– ಎಲ್ಲವೂ ರೆಡಿಯಾಗಿದೆ. ಬಿಡುಗಡೆ ವಿಷಯದಲ್ಲಿ ನಾನು ತಲೆಹಾಕೋದಿಲ್ಲ. ಬಹುಶಃ ಅಪ್ಪಾಜಿ ಹುಟ್ಟುಹಬ್ಬದ ಹೊತ್ತಿಗೆ ರಿಲೀಸ್ ಆಗಬಹುದು.
* ವಿನಯ್ ರಾಜಕುಮಾರ್ ಹೊಸ ಸಿನಿಮಾ ಏನಾದ್ರೂ?
– ಪ್ಲಾನಿಂಗ್ ನಡೆಯುತ್ತಿದೆ. ಪವನ್ ಒಡೆಯರ್ ಒಂದು ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.