ನಿರ್ದೇಶಕನಿಗೆ ನಿರ್ದೇಶನ ಮಾಡಲ್ಲ!
Team Udayavani, May 29, 2018, 12:03 PM IST
ಅಂಬರೀಶ್ ಅವರು ಇದುವರೆಗೂ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದವರು. ಈಗ ಅವರ ಮಗ ಸಹ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಹೀಗಿರುವಾಗ ಅಂಬರೀಶ್ ಅವರು ತಮ್ಮ ಮಗನ ಚಿತ್ರ ಹೇಗಿರಬೇಕು ಎಂದು ಬಯಸುತ್ತಾರೆ? ನಿರ್ದೇಶಕ ನಾಗಶೇಖರ್ ಅವರಿಂದ ಏನು ಬಯಸುತ್ತಾರೆ ಎಂಬ ಪ್ರಶ್ನೆಗಳು ಬರಬಹುದು. ಈ ಪ್ರಶ್ನೆಗಳನ್ನು ಅವರ ಮುಂದಿಟ್ಟರೆ, “ನಾನ್ಯವತ್ತೂ ನಿರ್ದೇಶಕನಿಗೆ ನಿರ್ದೇಶನ ಮಾಡುವುದಿಲ್ಲ’ ಎಂಬ ಉತ್ತರ ಅವರಿಂದ ಬರುತ್ತದೆ.
“ನಾನ್ಯಾವತ್ತೂ ನಿರ್ದೇಶಕನಿಗೆ ನಿರ್ದೇಶನ ಮಾಡಿಲ್ಲ. ಬರೀ ಒಂದೊಳ್ಳೆಯ ಸಿನಿಮಾ ಮಾಡಲಿ ಅಂತ ಬಯಸುತ್ತೇನೆ ಅಷ್ಟೇ. ಅಭಿಷೇಕ್ ಮೊದಲ ಚಿತ್ರ ಸಹ ಒಂದೊಳ್ಳೆಯ ಚಿತ್ರ ಆಗಲಿ ಎಂಬ ಆಸೆ ಇದೆ. ಇದು ಬರೀ ಅಭಿಷೇಕ್ ಚಿತ್ರ ಮಾತ್ರ ಅಲ್ಲ, ಯಾರ ಮಗನ ಚಿತ್ರವಾಗದೂ, ಅದೊಂದು ಒಳ್ಳೆಯ ಚಿತ್ರವಾಗಲಿ, ಕನ್ನಡ ಚಿತ್ರರಂಗವನ್ನು ಮುಂದಕ್ಕೆ ತರಲಿ ಎಂಬುದು ನನ್ನ ಆಸೆ. ನಾಗಶೇಖರ್ ಇದಕ್ಕೂ ಮುನ್ನ ಒಳ್ಳೆಯ ಚಿತ್ರಗಳನ್ನು ಕೊಟ್ಟವರು. ಹಾಗಾಗಿ ಈ ಚಿತ್ರವನ್ನು ಸಹ ಚೆನ್ನಾಗಿ ಮಾಡುತ್ತಾರೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಅಂಬರೀಶ್.
ಇನ್ನು ಅಂಬರೀಶ್ ಅವರು ತಮ್ಮ ಮಗನಿಗೆ ಏನು ಕಿವಿಮಾತು ಹೇಳುತ್ತಾರೆ ಅಂತ ಕೇಳಿದರೆ, “ಸೆಟ್‌ಗೆ ಹೋದರೆ ನೀನೊಬ್ಬ ನಟ ಮಾತ್ರ. ಹೋಗಿ ಶ್ರದ್ಧೆಯಿಂದ ನಿನ್ನ ಕೆಲಸವನ್ನು ಮಾಡಿಕೊಂಡು ಬಾ ಅಂತ ಹೇಳುತ್ತೇನೆ. ನಾನು ಅಂಬರೀಶ್ ಅವರ ಮಗ, ನಿರ್ಮಾಪಕ ಸಂದೇಶ್ ನನ್ನ ಫ್ರೆಂಡ್ ಅಂತೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳದೆ, ಒಬ್ಬ ನಟನಾಗಿ ನಿರ್ದೇಶಕರು ಏನು ಹೇಳುತ್ತಾರೋ ಅದನ್ನು ಮಾಡು ಅಂತ ಹೇಳಿದ್ದೇನೆ’ ಎನ್ನುತ್ತಾರೆ ಅಂಬರೀಶ್.
ಅಂಬರೀಶ್ ಅವರಿಗೆ ತಮ್ಮ ಮಗನ ಬಗ್ಗೆ ಖುಷಿ ಇದೆ. “ನಾನು ಚಿತ್ರರಂಗಕ್ಕೆ ಬಂದ ಸಂದರ್ಭದಲ್ಲಿ ಬಹಳ ರಾ ಇದ್ದೆ. ಚಿತ್ರರಂಗದ ಬಗ್ಗೆಯಾಗಲೀ, ನಟನೆಯ ಬಗ್ಗೆಯಾಗಲೀ ಹೆಚ್ಚು ವಿಷಯಗಳು ಗೊತ್ತಿರಲಿಲ್ಲ. ಈಗಿನವರು ಹಾಗಲ್ಲ. ಸಾಕಷ್ಟು ತಯಾರಿಗಳನ್ನು ಮಾಡಿಕೊಂಡೇ ಬಂದಿರುತ್ತಾರೆ. ಅಭಿಷೇಕ್ ಸಹ ಕೆಲವು ವರ್ಷಗಳಿಂದ ಸಾಕಷ್ಟು ತಯಾರಿ ಮಾಡಿಕೊಂಡು, ಹಲವು ವಿಷಯಗಳನ್ನು ಕಲಿತುಕೊಂಡು, ಚಿತ್ರರಂಗಕ್ಕೆ ಬಂದಿದ್ದಾನೆ. ಅವನ ತರಬೇತಿ ಮತ್ತು ತಯಾರಿಯ ಬಗ್ಗೆ ಖುಷಿ ಇದೆ’ ಎನ್ನುತ್ತಾರೆ ಅಂಬರೀಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.