ಅಭದ್ರತೆ ನನಗಲ್ಲ, ಪೂಜಾಗೆ: ಸಂಜನಾ
Team Udayavani, Jul 18, 2017, 10:43 AM IST
“ಪೂಜಾ ಗಾಂಧಿಗೆ ಹಾಗೆಲ್ಲಾ ಹೇಳುವುದಕ್ಕೆ ಯಾವುದೇ ರೈಟ್ಸ್ ಇಲ್ಲ. ಅವರ ಮೇಲೆ ನನಗೆ ಬೇಸರವಿದೆ. ಬೆಸ್ಟ್ ಫ್ರೆಂಡ್ ಅಂದ್ಕೊಂಡಿದ್ದೇ ತಪ್ಪಾಯ್ತು. ಚಿತ್ರರಂಗದಲ್ಲಿ ಈ ರೀತಿಯ ಫ್ರೆಂಡ್ಸ್ ಮಾಡ್ಕೊಬೇಕಾ, ಮಾಡ್ಕೊಬಾರದಾ ಅನಿಸುತ್ತಿದೆ…’ ಇದು ನಟಿ ಪೂಜಾ ಗಾಂಧಿ ಬಗ್ಗೆ ನಟಿ ಸಂಜನಾ ನೇರವಾಗಿ ಆಡಿದ ಮಾತು. ಸಂಜನಾ ಯಾಕೆ ಪೂಜಾ ಗಾಂಧಿ ಕುರಿತು ಹೀಗೆಲ್ಲಾ ಹೇಳಿಕೊಂಡರು.
ಅವರ ಮೇಲೇಕೆ ಕೋಪ ಎಂಬ ಪ್ರಶ್ನೆ ಎದುರಾದರೆ, ಅದಕ್ಕೆ ಕಾರಣ, “2′ ಚಿತ್ರ. ಈ ಚಿತ್ರದ ಪ್ರಚಾರ ಕಾರ್ಯಕ್ಕೆ ಸಂಜನಾ ಅವರನ್ನು ಕೈ ಬಿಟ್ಟಿದ್ದಕ್ಕೆ ಪೂಜಾ ಗಾಂಧಿ ಕಾರಣ ಎಂಬ ಮಾತುಗಳು ಕೇಳಿಬಂದಿದ್ದವು. ಅದಕ್ಕೆ ಸರಿಯಾಗಿ, ಪೂಜಾ ಗಾಂಧಿ ಕೂಡ ಫೇಸ್‌ಬುಕ್‌ನಲ್ಲಿ ಒಂದು ಸ್ಟೇಟಸ್ ಹಾಕಿಕೊಂಡಿದ್ದರು. ಆ ಸ್ಟೇಟಸ್ ಬಗ್ಗೆ ಸಂಜನಾ ಕೂಡ ತಿರುಗೇಟು ನೀಡಿದ್ದರು. ಆ ಕುರಿತು, “2′ ಸಕ್ಸಸ್ ಮೀಟ್‌ನಲ್ಲಿ ವಿಷಯ ಪ್ರಸ್ತಾಪಿಸಿದಾಗ, ಸಂಜನಾ ಆಡಿದ ಮಾತುಗಳಿವು.
ಸಂಜನಾ ಹಾಗೂ ಪೂಜಾಗಾಂಧಿ ನಡುವೆ ಏನಾಗಿದೆ, ಯಾಕೆ ಪ್ರಚಾರದ ವಿಷಯದಲ್ಲಿ ಗೊಂದಲಗಳಾಗಿವೆ? ಎಂಬ ಪ್ರಶ್ನೆಗೆ ಸಂಜನಾ ಉತ್ತರಿಸಿದ್ದು ಹಾಗೆ. “ಸಿನಿಮಾ ಪತ್ರಿಕಾಗೋಷ್ಠಿ ಇದೆ ಅನ್ನೋದು ನನಗೆ ಗೊತ್ತಿರಲಿಲ್ಲ. ಆದರೆ, ಮಾಧ್ಯಮದವರೇ, ಪತ್ರಿಕಾಗೋಷ್ಠಿಗೆ ಯಾಕೆ ಬರಲಿಲ್ಲ ಅಂತ ಕೇಳಿದರು. ಈ ಕುರಿತು ನಿರ್ಮಾಪಕರ ಬಳಿ, ಪತ್ರಿಕಾಗೋಷ್ಠಿಗೆ ನನ್ನನ್ನು ಕೈ ಬಿಟ್ಟಿದ್ದೇಕೆ ಅಂತ ಪ್ರಶ್ನಿಸಿದ್ದೆ. ಅದಕ್ಕವರು, ತುರ್ತಾಗಿ ಪತ್ರಿಕಾಗೋಷ್ಠಿ ಆಯೋಜಿತವಾಗಿದ್ದರಿಂದ, ತಿಳಿಸಲು ಸಾಧುವಾಗಿಲ್ಲ ಎಂದು ಹೇಳಿದ್ದರು.
ಆಗ ನಾನು ಆ ಕ್ಷಣಕ್ಕೆ ಓವರ್ ರಿಯಾಕ್ಟ್ ಮಾಡಿದ್ದುಂಟು. ಆದರೆ, ಪೂಜಾ ಗಾಂಧಿ ಫೇಸ್‌ಬುಕ್‌ನಲ್ಲಿ ಇನ್‌ಡೈರೆಕ್ಟ್ ಆಗಿ ಏನೋ ಬರೆದುಕೊಂಡಿದ್ದರು. ಅವರು ಅಭದ್ರತೆಯ ನಟಿ. ಅದಕ್ಕಾಗಿಯೇ ಏನೇನೋ ಬರೆದುಕೊಂಡಿದ್ದಾರೆ. ಅವರಿಗೆ ನನ್ನ ಬಗ್ಗೆ ಏನೇನೋ ಮಾತಾಡುವುದಕ್ಕೆ ಯಾವ ರೈಟ್ಸ್ ಇಲ್ಲ. ಮೊದಲು ನನಗೆ ನಿರ್ಮಾಪಕರ ಮೇಲೆ ಬೇಸರವಿತ್ತು. ದೊಡ್ಡ ಸಿನಿಮಾದಲ್ಲೂ ನನಗೂ ಪ್ರಮುಖ ಪಾತ್ರವಿದೆ. ನನ್ನನ್ನೇ ಅವರು ಪ್ರಚಾರ ಕಾರ್ಯಕ್ಕೆ ಕರೆದಿಲ್ಲ.
ಆ ಬಗ್ಗೆ ನನಗೆ ಉತ್ತರವೂ ಇಲ್ಲ. ಇನ್ಯಾರೋ ನನ್ನ ಬಗ್ಗೆ ಮಾತಾಡಿದರೆ, ನಾನೇಕೆ ಸುಮ್ಮನಿರಲಿ’ ಅಂತ ಪೂಜಾ ಗಾಂಧಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ ಸಂಜನಾ. ಅಂದಹಾಗೆ, ಸಂಜನಾ ಇಷ್ಟೆಲ್ಲಾ ಮಾತಾಡಿದರೂ, ಪಕ್ಕದಲ್ಲೇ ಕುಳಿತಿದ್ದ ಪೂಜಾ ಗಾಂಧಿ ಮಾತ್ರ ಸಣ್ಣದ್ದೊಂದು ಸ್ಮೈಲ್ ಕೊಟ್ಟರಷ್ಟೇ ಹೊರತು, ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಲಿಲ್ಲ. ನಿಮ್ಮ ನಡುವೆ ಉಂಟಾಗಿರುವ ಸಮಸ್ಯೆ ಏನು, ಯಾಕೆ ಎಂಬ ಪ್ರಶ್ನೆಗೆ, ಪೂಜಾ ಗಾಂಧಿ ಉತ್ತರ ಕೊಡದೆ, ತಮ್ಮ ಕೈಯಲ್ಲಿದ್ದ ಮೈಕ್ ಅನ್ನು ನಿರ್ದೇಶಕರಿಗೆ ಕೈಗಿತ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.