ಗಾಂಧಿನಗರದಲ್ಲೀಗ ಐಂದ್ರಿತಾ ದರ್ಬಾರ್
Team Udayavani, Feb 7, 2017, 11:49 AM IST
ನಟಿ ಐಂದ್ರಿತಾ ರೇ ಮತ್ತೆ ಸುದ್ದಿಯಾಗುತ್ತಿದ್ದಾರೆ! ಹಾಗಂತ, ಇನ್ನೇನೋ ಕಲ್ಪನೆ ಮಾಡಿಕೊಳ್ಳುವುದು ಬೇಡ. ವಿಷಯವಿಷ್ಟೇ, ಎಲ್ಲೋ ಕಳೆದೇ ಹೋಗಿಬಿಟ್ರಾ ಅಂದುಕೊಂಡಿದ್ದ ಐಂದ್ರಿತಾ ರೇ, ಈಗ ಮತ್ತೆ ಎಲ್ಲಾ ಕಡೆ ಕಾಣಿಸಿಕೊಳ್ಳುತ್ತಿದ್ದಾರೆ. ಪುನಃ, ಗಾಂಧಿನಗರದ ಮಂದಿ ಬಾಯಲ್ಲಿ ಆ್ಯಂಡಿ ಹೆಸರು ತೇಲಾಡುತ್ತಿದೆ. ಹೌದು, ಇಷ್ಟಕ್ಕೆಲ್ಲಾ ಕಾರಣ, ಈ ವಾರ ಬಿಡುಗಡೆಗೆ ರೆಡಿಯಾಗಿರುವ “ಮೇಲುಕೋಟೆ ಮಂಜ’. ಈ ಚಿತ್ರದಲ್ಲಿ ಐಂದ್ರಿತಾ ರೇ ನಾಯಕಿ.
ಅದೂ ಮೊದಲ ಸಲ ಜಗ್ಗೇಶ್ ಜತೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದೇ ವಿಶೇಷ. ಐಂದ್ರಿತಾ ರೇ, ಶಿವರಾಜ್‌ಕುಮಾರ್ ಜತೆ “ಭಜರಂಗಿ’ ಮಾಡಿದ ಬಳಿಕ ಯಾವ ಸಿನಿಮಾದಲ್ಲೂ ಸುದ್ದಿಯಾಗಲಿಲ್ಲ. ಎಲ್ಲೋ ಕೆಲ ಸಿನಿಮಾಗಳ ಸ್ಪೆಷಲ್ ಸಾಂಗ್‌ಗೆ ಸ್ಟೆಪ್ ಹಾಕಿದ್ದು ಬಿಟ್ಟರೆ, ಹೇಳಿಕೊಳ್ಳುವಂತಹ ಸಿನಮಾಗಳಾವೂ ಬರಲಿಲ್ಲ. ಆದರೂ, ಸಿಕ್ಕ ಅವಕಾಶ ಬಿಡಬಾರದು ಎಂಬ ಕಾರಣಕ್ಕೆ, ಐಂದ್ರಿತಾ ರೇ, “ಮುಂಗಾರು ಮಳೆ-2′, “ಜಾನ್ ಜಾನಿ ಜನಾರ್ದನ್’ ಚಿತ್ರಗಳಲ್ಲಿ ಅತಿಥಿಯಾಗಿ ನಟಿಸಿದರು.
ಇನ್ನು ಇತ್ತೀಚೆಗೆ ಬಿಡುಗಡೆಯಾದ “ನಿರುತ್ತರ’ ಚಿತ್ರದಲ್ಲೂ ಐಂದ್ರಿತಾ ಮುಖ್ಯ ಪಾತ್ರಧಾರಿಯಾಗಿ ಮಿಂಚಿದ್ದರು. “ಚೌಕ’ ಚಿತ್ರದಲ್ಲೂ ಐಂದ್ರಿತಾ ರೇ, ನೆನಪಿರಲಿ ಪ್ರೇಮ್ ಅವರ ಜೋಡಿಯಾಗಿ ಕಾಣಿಸಿಕೊಂಡಿದ್ದುಂಟು. ಈಗ “ಮೇಲುಕೋಟೆ ಮಂಜ’ ಚಿತ್ರದಲ್ಲಿ ಐಂದ್ರಿತಾ ನಾಯಕಿಯಾಗಿದ್ದಾರೆ. “ಚೌಕ’ ಫೆ.3 ರಂದು ತೆರೆಕಂಡಿತ್ತು. ಈಗ “ಮೇಲುಕೋಟೆ ಮಂಜ’ ಫೆ.10 ರಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಐಂದ್ರಿತಾ ಅವರದು ವಿಭಿನ್ನ ಪಾತ್ರವಂತೆ.
ಅದರಲ್ಲೂ, ಅವರಿಗೆ ಜಗ್ಗೇಶ್ ಜತೆ ನಟಿಸಿರುವುದೇ ಒಂದು ಹೆಮ್ಮೆಯ ವಿಷಯ. ಅವರ ಚಿತ್ರಗಳನ್ನು ನೋಡಿ ಸಿಕ್ಕಾಪಟ್ಟೆ ನಕ್ಕಿದ್ದ, ಐಂದ್ರಿತಾ ರೇ, ಈಗ ಅದೇ ಜಗ್ಗೇಶ್ ಅವರ ಜತೆ ಮರಸುತ್ತಿದ್ದಾರೆ ಎನ್ನುವುದು ಇನ್ನೊಂದು ವಿಶೇಷ. ಅಂದಹಾಗೆ, ಈ ಚಿತ್ರದಲ್ಲಿ ರಂಗಾಯಣ ರಘು, ಶ್ರೀನಿವಾಸ ಪ್ರಭು ಮುಂತಾದವರು ನಟಿಸಿದ್ದಾರೆ. ದಾಸರಿ ಸೀನು ಕ್ಯಾಮೆರಾ ಹಿಡಿದರೆ, ಗಿರಿಧರ್ ದಿವಾನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಇನ್ನೊಂದು ವಿಶೇಷವೆಂದರೆ, ಜಗ್ಗೇಶ್ ಅಭಿಮಾನಿ ಆರ್. ಕೃಷ್ಣ ಚಿತ್ರದ ನಿರ್ಮಾಪಕರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.