ನುಸ್ರತ್‌ನ ಫಸ್ಟ್ ಲುಕ್!
Team Udayavani, Sep 16, 2017, 6:43 PM IST
ವಿನಯ್ ರಾಜಕುಮಾರ್ ಅಭಿನಯದ “ಅನಂತು ವರ್ಸಸ್ ನುಸ್ರತ್’ ಚಿತ್ರಕ್ಕೆ ಲತಾ ಹೆಗಡೆ ನಾಯಕಿಯಾಗಿ ಆಯ್ಕೆಯಾಗಬಹುದು ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಇದ್ದೇ ಇತ್ತು. ಈಗ ಸದ್ದಿಲ್ಲದೆ ಲತಾ ಹೆಗಡೆ ಅವರ ಫೋಟೋ ಶೂಟ್ ಆಗಿದೆ. ಕಾಟನ್‌ಪೇಟೆಯ ದರ್ಗಾದಲ್ಲಿ ಶನಿವಾರ ಆಗಿದೆ.
ಆಹ್ವಾನ ಪತ್ರಿಕೆಯು “ಲಾ ಬುಕ್’ ಶೈಲಿಯಲ್ಲಿದೆ. ಚಿತ್ರತಂಡವು ಹಾಗೆ ಆಹ್ವಾನ ಪತ್ರಿಕೆ ಮಾಡಿಸುವುದಕ್ಕೂ ಕಾರಣವಿದೆ. ಅದೇನೆಂದರೆ, ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಇಬ್ಬರೂ ಲಾಯರ್ ಪಾತ್ರ ಮಾಡುತ್ತಿದ್ದು, ನ್ಯಾಯಾಲಯದಲ್ಲಿ ಅವರಿಬ್ಬರ ಲವ್ ಆಗುತ್ತದಂತೆ. ಅದೇ ಕಾರಣಕ್ಕೆ ಆಹ್ವಾನ ಪತ್ರಿಕೆಯನ್ನೂ ಕಾನೂನು ಪುಸ್ತಕದ ರೀತಿ ಡಿಸೈನ್ ಮಾಡಲಾಗಿದೆ.
ಅಂದ ಹಾಗೆ, ಈ ಮುಹೂರ್ತ ಸಮಾರಂಭಕ್ಕೆ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಮಿಕ್ಕಂತೆ ಡಾ. ರಾಜ್ ಕುಟುಂಬದ ಹಲವು ಸದಸ್ಯರು ಈ ಮುಹೂರ್ತದಲ್ಲಿ ಭಾಗವಹಿಸಲಿದ್ದಾರೆ.
ಚಿತ್ರದಲ್ಲಿ ಅನುಂತು ಪಾತ್ರವನ್ನು ವಿನಯ್ ರಾಜಕುಮಾರ್ ಮಾಡಿದರೆ, ನುಸ್ರತ್ ಪಾತ್ರಕ್ಕೆ ಇನ್ನೂ ನಾಯಕಿಯ ಹುಡುಕಾಟ ನಡೆಯುತ್ತಿದ್ದು, ಸದ್ಯದಲ್ಲೇ ಆಯ್ಕೆ ಮಾಡಲಾಗುವುದು ಎನ್ನುತ್ತಾರೆ ಚಿತ್ರದ ನಿರ್ದೇಶಕ ಸುಧೀರ್ ಶಾನುಭೋಗ್.
ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ಕೊನೆ ಅಥವಾ ಅಕ್ಟೋಬರ್‌ನಿಂದ ನಡೆಯಲಿದೆ. ಚಿತ್ರಕ್ಕೆ ಸುನಾದ್ ಗೌತಮ್ ಸಂಗೀತ ಸಂಯೋಜಿಸಿದರೆ, ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಮಾಡುತ್ತಿದ್ದಾರೆ. “ಅನಂತು ವರ್ಸಸ್ ನುಸ್ರತ್’ ಚಿತ್ರಕ್ಕೆ ಕೆಂಪೇಗೌಡ ನಿರ್ಮಾಪಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.