ಅಕ್ಟೋಬರ್ 6ಕ್ಕೆ 5 ಸಿನಿಮಾ
Team Udayavani, Sep 26, 2017, 11:42 AM IST
“ತಾರಕ್’ ಬಂದು ಬಿಡಲಿ, ಆ ನಂತರ ನಾವು ಬರುತ್ತೇವೆ … ಹೀಗೆ ಬಹುತೇಕ ನಿರ್ಮಾಪಕರು ಹೇಳುತ್ತಿದ್ದರು. ಈಗ “ತಾರಕ್’ ಚಿತ್ರ ತನ್ನ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿಕೊಂಡಿದೆ. ಸೆಪ್ಟೆಂಬರ್ 29 ರಂದು “ತಾರಕ್’ ಬಿಡುಗಡೆಯಾಗುತ್ತಿದೆ. ಅದರ ಬೆನ್ನಲ್ಲೇ ಸಾಲು ಸಾಲು ಚಿತ್ರಗಳು ತೆರೆಗೆ ಬರಲು ಸರತಿಯಲ್ಲಿವೆ.
ಮುಂದೆ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುವುದು ಖಚಿತ. ಅಕ್ಟೋಬರ್ 6ರಂದು ಐದು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಈ ಐದು ಸಿನಿಮಾಗಳಲ್ಲಿ ಕೆಲವು ಸಿನಿಮಾಗಳು ನಾನಾ ಕಾರಣಗಳಿಗಾಗಿ ಗಮನ ಸೆಳೆದಿದೆ. ಅಕ್ಟೋಬರ್ 6 ರಂದು ತೆರೆಗೆ ಬರುತ್ತಿರುವ ಐದು ಸಿನಿಮಾಗಳ ವಿವರ ಇಲ್ಲಿವೆ …
ಹುಲಿರಾಯ: ಅರವಿಂದ್ ಕೌಶಿಕ್ ನಿರ್ದೇಶನದ ಈ ಚಿತ್ರದ ಹಾಡು ಹಾಗೂ ಟ್ರೇಲರ್ ಹಿಟ್ ಆಗಿದ್ದು, ಚಿತ್ರತಂಡಕ್ಕೆ ಚಿತ್ರದ ಮೇಲಿನ ವಿಶ್ವಾಸ ಹೆಚ್ಚಿಸಿದೆ. ಚಿತ್ರ ಅಕ್ಟೋಬರ್ 6 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದ್ದು, ಕೆ.ಜಿ.ರಸ್ತೆಯ ತ್ರಿವೇಣಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ನಾಗೇಶ್ ಕೋಗಿಲು ನಿರ್ಮಿಸಿದ್ದು, ಪುಷ್ಕರ್ ಫಿಲಂಸ್ ಹಾಗೂ ಪರಂವಾ ಸ್ಟುಡಿಯೋ ಚಿತ್ರದ ವಿತರಣೆಯಲ್ಲಿ ಕೈ ಜೋಡಿಸಿದೆ. ಈ ಚಿತ್ರದಲ್ಲಿ ಬಾಲು ನಾಗೇಂದ್ರ ನಾಯಕರಾಗಿ ನಟಿಸಿದ್ದಾರೆ.
ನಾಯಕಿಯರಾಗಿ ದಿವ್ಯಾ ಹಾಗೂ ಚಿರಶ್ರೀ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕ ಬಾಲು ನಾಗೇಂದ್ರ ಕೂಡಾ ಒಂದು ಹಾಡು ಹಾಡಿದ್ದು, ಇಂಗ್ಲೀಷ್ ಮಿಶ್ರಿತ “ಆನೆ ಇಸ್ ಎಲಿಫೆಂಟಾ’ ಎಂಬ ಹಾಡು ಅವರ ಕಂಠದಿಂದ ಮೂಡಿಬಂದಿದೆ. ಕಾಡಿನಲ್ಲಿ ಸ್ವತ್ಛಂದವಾಗಿ ಓಡಾಡಿದಕೊಂಡಿದ್ದ ಹುಲಿಯೊಂದು ಸಿಟಿಗೆ ಬಂದರೆ ಸದ್ಯದ ಪರಿಸ್ಥಿತಿಯಲ್ಲಿ ನಾಡಿಗೆ ಬಂದರೆ ಏನಾಗಬಹುದು ಎಂಬ ಅಂಶವನ್ನು ನಾಯಕನ ಪಾತ್ರದ ಮೂಲಕ ಹೇಳಲಾಗಿದೆಯಂತೆ. ಚಿತ್ರದ ಬಹುತೇಕ ಚಿತ್ರೀಕರಣ ಕಾಡಿನಲ್ಲೂ ನಡೆದಿದೆ. ಚಿತ್ರಕ್ಕೆ ಅರ್ಜುನ್ ರಾಮು ಸಂಗೀತ, ರವಿ ಛಾಯಾಗ್ರಹಣ ಚಿತ್ರಕ್ಕಿದೆ.
ಕಿಡಿ: “ಕಿಡಿ’ ಚಿತ್ರ ಕೂಡಾ ಅಕ್ಟೋಬರ್ 6 ರಂದು ತೆರೆಕಾಣುತ್ತಿದೆ. ಈ ಚಿತ್ರದ ಮೂಲಕ ಹೀರೋ ಭುವನ್ ಚಂದ್ರ ತುಂಬಾ ದಿನಗಳ ನಂತರ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ತುಂಬಾ ದಿನಗಳ ನಂತರ ಸಿನಿಮಾ ಮಾಡುತ್ತಿರುವುದರಿಂದ ಒಳ್ಳೆಯ ಕಥೆಯೊಂದಿಗೆ ಬರಬೇಕೆಂದು ತಲೆಕೆಡಿಸಿಕೊಂಡ ನಟ, ಭುವನ್ ಚಂದ್ರ ಆರು ತಿಂಗಳುಗಳ ಕಾಲ 250ಕ್ಕೂ ಹೆಚ್ಚು ಸಿನಿಮಾ ನೋಡಿದರಂತೆ. ಜೊತೆಗೆ 30ಕ್ಕೂ ಹೆಚ್ಚು ಕಥೆಗಳನ್ನು ಕೇಳಿದರಂತೆ. ಈ 250 ಸಿನಿಮಾಗಳಲ್ಲಿ ಅವರಿಗೆ ಇಷ್ಟವಾಗಿದ್ದು, ಮಲಯಾಳಂನ “ಕಲಿ’ ಚಿತ್ರ.
ಆ ಚಿತ್ರ ನೋಡಿದಾಗ ಈ ಪಾತ್ರವನ್ನು ತಾನು ಮಾಡಬಹುದು ಮತ್ತು ತನಗೆ ಹೊಂದಿಕೆಯಾಗುತ್ತದೆಂದೆನಿಸಿ ಈಗ ಆ ಚಿತ್ರವನ್ನು ರೀಮೇಕ್ ಮಾಡಿದ್ದಾರೆ. ಸಣ್ಣ ಸಣ್ಣ ವಿಚಾರಕ್ಕೆ ಕೋಪ ಮಾಡಿಕೊಂಡರೆ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆಯಂತೆ. ಇದರಲ್ಲಿ ಭುವನ್ ಚಂದ್ರ ಕಿಡಿಕಾರುವ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ರಘು ನಿರ್ದೇಶಿಸಿದ್ದಾರೆ.
ಸುಮಾರು 15 ವರ್ಷಗಳ ಕಾಲ ಕೊರಿಯೋಗ್ರಾಫರ್ ಆಗಿದ್ದ ರಘ “ಕಿಡಿ’ ಮೂಲಕ ನಿರ್ದೇಶಕರಾಗಿದ್ದಾರೆ. ಚಿತ್ರವನ್ನು ನಾಗರಾಜು, ಮಲ್ಲಿಕಾರ್ಜುನ ಮತ್ತು ಧನಂಜಯ ಸೇರಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ವಿಲನ್‌ಗಳಾಗಿ “ಉಗ್ರಂ’ ಮಂಜು ಹಾಗೂ ಡ್ಯಾನಿ ಕುಟ್ಟಪ್ಪ ನಟಿಸಿದ್ದಾರೆ. ಈ ಚಿತ್ರದ ಹಾಡುಗಳಿಗೆ ಎಮಿಲ್ ಸಂಗೀತ ಸಂಯೊಜನೆ ಮಾಡಿದ್ದಾರೆ. ವಿ.ನಾಗೇಂದ್ರಪ್ರಸಾದ್, ಕೆ.ಕಲ್ಯಾಣ್, ಲೋಕೇಶ್, ಕವಿರಾಜ್ ಸಾಹಿತ್ಯ ರಚನೆ ಮಾಡಿದ್ದಾರೆ.
ವೈರ : ಈ ಹಿಂದೆ “ರಥಾವರ’ ನಿರ್ಮಿಸಿದ್ದ ಧರ್ಮಶ್ರೀ ಮಂಜುನಾಥ್ ನಿರ್ಮಿಸಿರುವ “ವೈರ’ ಕೂಡಾ ಅಕ್ಟೋಬರ್ 6 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ನವರಸನ್ ನಿಭಾಯಿಸಿದ್ದಾರೆ. ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿಯೂ ನವರಸನ್ ಕಾಣಿಸಿಕೊಂಡಿರೋದು ವಿಶೇಷ. ಈ ಚಿತ್ರ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಎಲಿಮೆಂಟ್ ಹೊಂದಿದೆ.
ನಿತಿನ್ ಛಾಯಾಗ್ರಹಣ ಮತ್ತು ರವಿ ಬಸ್ರೂರ್ ಸಂಗಿತ ಈ ಚಿತ್ರಕ್ಕಿದೆ. ಧರ್ಮಶ್ರೀ ಎಂಟರ್ ಪ್ರೈಸಸ್ ಮತ್ತು ಗೀತಾ ಎಂಟರ್ ಟೈನರ್ ಅಡಿಯಲ್ಲಿ ತಯಾರಾಗಿರೋ ಈ ಚಿತ್ರಕ್ಕೆ ಮಹೇಶ್ ಸಂಕಲನ, ಅಲ್ಟಿಮೇಟ್ ಶಿವು ಸಾಹಸ, ರವಿ ಪೂಜಾರ್ ಕಲೆ ಹಾಗೂ ಕಿನಾಲ್ ರಾಜ್ ಗೀತ ರಚನೆ ಇದೆ. ನವರಸನ್, ಪ್ರಿಯಾಂಕಾ ಮಲ್ನಾಡ್, ಕೆಂಪೇಗೌಡ, ತಬಲಾ ನಾಣಿ, ಕೌತಾರ್, ಮಂಜುಳಾ, ಹ್ಯಾರಿ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ.
ಲಕ್ಷ್ಮೀನಾರಾಯಣರ ಪ್ರಪಂಚನೇ ಬೇರೆ: ವಿನಯಪ್ರಸಾದ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹಿರಿಯ ನಟಿ ವಿನಯಾ ಪ್ರಸಾದ್ ಹಾಗೂ ಜ್ಯೋತಿ ಪ್ರಕಾಶ್ ಅತ್ರೆ ಅವರು ನಿರ್ಮಿಸಿರುವ ಚಿತ್ರ “ಲಕ್ಷ್ಮೀನಾರಾಯಣರ ಪ್ರಪಂಚನೇ ಬೇರೆ ಚಿತ್ರ ಅಕ್ಟೋಬರ್ 6 ರಂದು ತೆರೆಗೆ ಬರುತ್ತಿದೆ. ವಿನಯಾ ಪ್ರಸಾದ್ ಚೊಚ್ಚಲ ನಿರ್ದೇಶನದ ಈ ಚಿತ್ರಕ್ಕೆ ಜೆ.ಜೆ.ಕೃಷ್ಣ ಅವರ ಛಾಯಾಗ್ರಹಣವಿದೆ.
ಈ ಹಾಸ್ಯಭರಿತ ಕೌಟುಂಬಿಕ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಜ್ಯೋತಿ ಪ್ರಕಾಶ್ ಅತ್ರೆ ಅವರು ಸಂಗೀತ ನಿರ್ದೇಶನ ಹಾಗೂ ಕ್ರಿಯಾತ್ಮಕ ನಿರ್ದೇಶನ ಸಹ ಮಾಡಿದ್ದಾರೆ. ಮಂಜುನಾಥ್ ಹೆಗಡೆ, ವಿನಯಾ ಪ್ರಸಾದ್, ಜ್ಯೋತಿ ಪ್ರಕಾಶ್ ಅತ್ರೆ, ಪ್ರಥಮ ಪ್ರಸಾದ್ ರಾವ್, ಋತು, ಶೈಲಜಾ ಜೋಶಿ, ದೀಪಕ್ ಕುಮಾರ್ ಜೆ.ಕೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಏಪ್ರಿಲ್‌ನ ಹಿಮ ಬಿಂದು: ಶಿವ ಜಗನ್ ನಿರ್ದೇಶನದ “ಏಪ್ರಿಲ್‌ನ ಹಿಮಬಿಂದು’ ಚಿತ್ರ ಕೂಡಾ ಅಕ್ಟೋಬರ್ 6ರಂದು ತೆರೆಗೆ ಬರುತ್ತಿದೆ. ಹಿರಿಯ ನಟ ದತ್ತಣ್ಣ ಮುಖ್ಯಭೂಮಿಕೆಯಲ್ಲಿರೋ ಈ ಚಿತ್ರ ನವಿರಾದೊಂದು ಕಾಡುವ ಕಥಾ ಎಳೆ ಹೊಂದಿದೆ.. ಅಂದಹಾಗೆ ನಿರ್ದೇಶಕ ಶಿವ ಜಗನ್ ಬದುಕಿನಲ್ಲಿ ಕಂಡ ಮತ್ತು ಖುದ್ದಾಗಿ ಅನುಭವಿಸಿದ ಘಟನಾವಳಿಗಳನ್ನಿಟ್ಟುಕೊಂಡೇ ಈ ಚಿತ್ರವನ್ನು ರೂಪಿಸಿದ್ದಾರಂತೆ.
ಶಿವು ಜಗನ್ ಅಸೋಸಿಯೇಷನ್ ಅಡಿಯಲ್ಲಿ ನಿರ್ಮಾಣಗೊಂಡಿರೋ ಈ ಚಿತ್ರಕ್ಕೆ ಭರತ್ ಸಂಗೀತ ನಿರ್ದೇಶನ ಇದೆ. ದತ್ತಣ್ಣ, ಶ್ರೀಧರ್, ಬಾಬು ಹಿರಣ್ಣಯ್ಯ, ದತ್ತಣ್ಣನ ಸಹೋದರ ಸೋಮಶೇಖರ ರಾವ್, ಸಚಿನ್, ಗಣೇಶ್, ಮುತ್ತಣ್ಣ, ಚಿದಾನಂದ, ಚಂದನಾ, ಶ್ವೇತಾ, ಸ್ಪಂದನಾ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Egg Thrown: ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ: ಬಿಜೆಪಿ ನಾಯಕರು ಗರಂ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.