‘ನಮ್ಮ ಜೊತೇಲಿ ಇರೋರನ್ನ ನಾವು ಚೆನ್ನಾಗಿ ನೋಡ್ಕಂಡ್ರೆ…’; ಏನ್ ಒಡೆಯ ಇದು!?
ಜಬರ್ದಸ್ತ್ ಸ್ಟಂಟ್ಸ್, ಫ್ಯಾಮಿಲಿ ಸೆಂಟಿಮೆಂಟ್ಸ್, ಕಿಲ ಕಿಲ ಕಾಮಿಡಿ ಟಚಪ್ – ಇದು ‘ಒಡೆಯ’ನ ಹೊಸ ಗೆಟಪ್
Team Udayavani, Dec 1, 2019, 7:23 PM IST
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಒಡೆಯ’ ಟ್ರೈಲರ್ ಇವತ್ತು ರಿಲೀಸ್ ಆಗಿದೆ. ಎಂದಿನಂತೆ ದರ್ಶನ್ ಚಿತ್ರದ ಟ್ರೈಲರ್ ಗೆ ಸಿಗೋ ಪ್ರತಿಕ್ರಿಯೆನೇ ಯೂಟ್ಯೂಬ್ ನಲ್ಲಿ ‘ಒಡೆಯ’ ಚಿತ್ರದ ಟ್ರೈಲರ್ ಗೂ ಸಿಗುತ್ತಿದೆ. ಬಿಡುಗಡೆಗೊಂಡ 09 ಗಂಟೆಗಳಲ್ಲಿ 10 ಲಕ್ಷ ಬಾರಿ ವೀಕ್ಷಣೆಗೆ ಒಳಪಟ್ಟಿದೆ.
ದರ್ಶನ್ ಅವರ ಈ ಹಿಂದಿನ ಚಿತ್ರ ‘ಯಜಮಾನ’ದಂತೆ ಈ ಚಿತ್ರದಲ್ಲೂ ಖಡಕ್ ಡೈಲಾಗ್ ಗಳು ಮತ್ತು ರೋಮಾಂಚಕ ಸ್ಟಂಟ್ ಗಳಿರುವುದು ಟ್ರೈಲರ್ ನಿಂದಲೇ ಗೊತ್ತಾಗುತ್ತಿದೆ. ಇನ್ನು ಸಾಧುಕೋಕಿಲಾ, ಚಿಕ್ಕಣ್ಣ, ತಬಲಾ ನಾಣಿ ಸೇರಿದಂತೆ ಕನ್ನಡದ ಹಾಸ್ಯನಟರ ದಂಡೇ ಈ ಚಿತ್ರದಲ್ಲಿರುವುದರಿಂದ ಪ್ರೇಕ್ಷಕರಿಗೆ ನಗುವಿಗೇನೂ ಕೊರತೆ ಮಾಡಲಾರ ಈ ‘ಒಡೆಯ’!
‘ನಮ್ಮ ಜೊತೇಲಿ ಇರೋರನ್ನ ನಾವು ಚೆನ್ನಾಗಿ ನೋಡ್ಕೊಂಡ್ರೆ, ಮೆಲ್ಗಡೆ ಇರೋನು ನಮ್ಮನ್ನ ಚೆನ್ನಾಗಿ ನೋಡ್ಕೊತಾನೆ’, ‘ಆಳ್ ತರಾ ದುಡಿಯೋಕೂ ಗೊತ್ತು ಅರಸನ ತರ ಮೆರೆಯೋಕೂ ಗೊತ್ತಿರೋ ಅವ್ರ ತಾಕತ್ತ್ ಬಗ್ಗೆ ನಾನ್ ಎಷ್ಟು ಹೇಳಿದ್ರೂ ಕಡಿಮೇನೆ’ ‘ಅಧಿಕಾರ ಅನ್ನೋದು ಇವತ್ತು ಒಬ್ರ ಹತ್ರ ಇದ್ರೆ ನಾಳೆ ಇನ್ನೊಬ್ರ ಹತ್ರ ಇರುತ್ತೆ ; ಆದ್ರೆ ಅನ್ನ ಹಾಕೋ ರೈತನಿಗೆ ಮೋಸ ಆದ್ರೆ ನಾನು ಸುಮ್ನೆ ಇರೋದಿಲ್ಲ’ – ಹೀಗೆ ದರ್ಶನ್ ಬ್ರ್ಯಾಂಡ್ ನ ಡೈಲಾಗ್ ಗಳೇ ಟ್ರೈಲರ್ ಗೊಂದು ಮಾತಿನ ತೂಕ ಕೊಟ್ಟಿದೆ.
ಇನ್ನು ರವಿಶಂಕರ್, ಸನಾ ತಿಮ್ಮಯ್ಯ, ದೇವರಾಜ್, ಶರತ್ ಲೋಹಿತಾಶ್ವ, ಚಿತ್ರಾ ಶೆಣೈ ಸೇರಿದಂತೆ ಸ್ಯಾಂಡಲ್ ವುಡ್ ತಾರೆಗಳ ದಂಡೇ ಒಡೆಯನಿಗೆ ಈ ಚಿತ್ರದಲ್ಲಿ ಜೊತೆಯಾಗಿರುವುದು ಇನ್ನೊಂದು ವಿಶೇಷ.
ಅರ್ಜುನ್ ಜನ್ಯಾ ಅವರ ಸಂಗೀತ ನಿರ್ದೇಶನದಲ್ಲಿ ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಮತ್ತು ಕವಿರಾಜ್ ಅವರ ಸಾಹಿತ್ಯದ ಗೀತೆಗಳು ದರ್ಶನ್ ಅಭಿಮಾನಿಗಳ ಬಾಯಲ್ಲಿ ಈಗಾಗಲೇ ನಲಿದಾಡುತ್ತಿವೆ.
ಸಂದೇಶ್ ಪ್ರೊಡಕ್ಷನ್ಸ್ ನಡಿಯಲ್ಲಿ ಎನ್. ಸಂದೇಶ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಎಂ.ಡಿ. ಶ್ರೀಧರ್ ನಿರ್ದೇಶಿಸಿದ್ದು ಇದೇ ಡಿಸೆಂಬರ್ 12ನೇ ತಾರೀಖಿಗೆ ಥಿಯೇಟರ್ ಗಳಲ್ಲಿ ‘ಒಡೆಯ’ನ ದರ್ಶನವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.