ರಿಲೀಸ್‌ಗೂ ಮೊದಲೇ ಓಲ್ಡ್ ಮಾಂಕ್ ಸೇಲ್!
ಚಿತ್ರದ ಡಬ್ಬಿಂಗ್, ರಿಮೇಕ್ ರೈಟ್ಸ್ ಮಾರಾಟ
Team Udayavani, Nov 10, 2020, 1:19 PM IST
ನಟ ಶ್ರೀನಿ ಅಭಿನಯದ ಮತ್ತು ನಿರ್ದೇಶನದ “ಓಲ್ಡ್ ಮಾಂಕ್’ ಚಿತ್ರದ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಇದರ ನಡುವೆಯೇ “ಓಲ್ಡ್ ಮಾಂಕ್’ ಚಿತ್ರದ ತೆಲುಗು ಡಬ್ಬಿಂಗ್ ಮತ್ತು ರಿಮೇಕ್ ರೈಟ್ಸ್ ಮಾರಾಟವಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.
ತೆಲುಗಿನ “ಕ್ಲಾಪ್ ಬೋರ್ಡ್ ಪ್ರೊಡಕ್ಷನ್ಸ್’ನ ರಾಮಕೃಷ್ಣ ನಲ್ಲಂ ಮತ್ತು “ಸ್ಟಾರ್‌ವುಡ್ ಪ್ರೊಡಕ್ಷನ್ಸ್’ನ ರವಿ ಕಶ್ಯಪ್ “ಓಲ್ಡ್ ಮಾಂಕ್’ ಚಿತ್ರದ ತೆಲುಗು ಡಬ್ಬಿಂಗ್ ಮತ್ತು ರಿಮೇಕ್ ರೈಟ್ಸ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡುವ ನಟ ಕಂ ನಿರ್ದೇಶಕ ಶ್ರೀನಿ, “ಸಾಮಾನ್ಯವಾಗಿ ಸಿನಿಮಾಗಳು ರೆಡಿಯಾದ ನಂತರ ಅಥವಾ ಬಿಡುಗಡೆಯಾಗಿ ಹಿಟ್ ಆದ ನಂತರ ಬೇರೆ ಭಾಷೆಯ ನಿರ್ಮಾಪಕರು ಡಬ್ಬಿಂಗ್, ರಿಮೇಕ್ ರೈಟ್ಸ್‌ಕೊಂಡುಕೊಳ್ಳಲು ಮುಂದೆ ಬರುತ್ತಾರೆ. ಆದ್ರೆ ಶೂಟಿಂಗ್ ನಡೆಯುತ್ತಿರುವಾಗಲೇ ಸಿನಿಮಾದ ಡಬ್ಬಿಂಗ್, ರಿಮೇಕ್ ರೈಟ್ಸ್ ಸೇಲ್ ಆಗೋದು ತುಂಬ ಅಪರೂಪ. ಅದರಲ್ಲೂ ನಮ್ಮ ಸಿನಿಮಾದಲ್ಲಿ ಯಾವುದೇ ಬಿಗ್ ಸ್ಟಾರ್ ಇಲ್ಲದಿದ್ರೂ, ಸಿನಿಮಾದ ಕಂಟೆಂಟ್ ನೋಡಿ ರೈಟ್ಸ್ ಕೊಂಡುಕೊಂಡಿದ್ದು ಖುಷಿಯಾಗಿದೆ’ ಎನ್ನುತ್ತಾರೆ.
ಅಂದಹಾಗೆ, ಈ ಹಿಂದೆ ಶ್ರೀನಿ ಅಭಿನಯದ “ಬೀರ್‌ಬಲ್’ ಚಿತ್ರ ಸದ್ಯ ತೆಲುಗಿನಲ್ಲಿ “ತಿಮ್ಮರಸು’ ಹೆಸರಿನಲ್ಲಿ ರಿಮೇಕ್ ಆಗುತ್ತಿದೆ. “ಬೀರ್‌ಬಲ್’ ಚಿತ್ರ ಕನ್ನಡದಲ್ಲಿ ಸಕ್ಸಸ್ ಆದ ನಂತರ, ಬೇರೆ ಬೇರೆ ಭಾಷೆಗಳಲ್ಲಿ ರಿಮೇಕ್ ಆಗುತ್ತಿದೆ. ಒಟ್ಟಾರೆ “ಬೀರ್ ಬಲ್’ ಹಿಟ್ ಆಗಿದ್ದೂ ಕೂಡ “ಓಲ್ಡ್ ಮಾಂಕ್’ ಸಿನಿಮಾದ ಡಬ್ಬಿಂಗ್, ರಿಮೇಕ್ ರೈಟ್ಸ್ ಮುಂಚಿತವಾಗಿಯೇ ಸೇಲ್ ಆಗೋದಕ್ಕೆಕಾರಣವಾಗಿರಬಹುದು ಎಂಬುದು ಶ್ರೀನಿ ಅಂದಾಜು ಲೆಕ್ಕಾಚಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.