ಗಾಂಧಿನಗರದತ್ತ ತಲೆಹಾಕಲ್ಲ, ಚಿತ್ರರಂಗಕ್ಕೆ “ಪ್ರಥಮ್” ಗುಡ್ ಬೈ!
Team Udayavani, Oct 26, 2018, 4:58 PM IST
ಬೆಂಗಳೂರು: ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಸಿ ಗೆದ್ದು ಜನಪ್ರಿಯನಾಗಿ, ಸಿನಿಮಾದಲ್ಲೂ ನಟಿಸಿದ್ದ ಒಳ್ಳೆ ಹುಡುಗ ಪ್ರಥಮ್ ಈಗ ಸ್ಯಾಂಡಲ್ ವುಡ್ ಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರಂತೆ.
ಪ್ರಥಮ್ ಹೇಳೋದು ಏನು?
ಜೀವನದಲ್ಲಿ ನಾನು ಅಂದುಕೊಂಡಿದ್ದನ್ನು ಸಾಧಿಸಿದ್ದೇನೆ. ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿ ಗೆದ್ದಿದ್ದೇನೆ. ಸಿನಿಮಾದಲ್ಲೂ ನಟಿಸಿದ್ದೇನೆ. ಅಪಾರ ಅಭಿಮಾನಿಗಳು ಇದ್ದಾರೆ. ಆದರೆ ಒತ್ತಡದ ಬದುಕು ನನಗೆ ಸೆಟ್ ಆಗಲ್ಲ ಎಂದು ಖಾಸಗಿ ಟಿವಿ ವಾಹಿನಿಯೊಂದಕ್ಕೆ ನೀಡಿದ್ದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಇನ್ಮುಂದೆ ಸಿನಿಮಾದಲ್ಲೂ ನಟಿಸಲ್ಲ, ಬೆಂಗಳೂರು ಹಾಗೂ ಇಲ್ಲಿನ ಜೀವನ ಶೈಲಿ ನನಗೆ ಇಷ್ಟವಾಗಲಿಲ್ಲ. ಹೀಗಾಗಿ ಬೆಂಗಳೂರಿಗೂ ಬರಲ್ಲ, ಗಾಂಧಿನಗರದತ್ತ ತಲೆ ಹಾಕಿಯೂ ಮಲಗಲ್ಲ ಎಂದು ಹೇಳಿರುವ ಪ್ರಥಮ್, ಈಗಾಗಲೇ ಬೆಂಗಳೂರಿನಿಂದ ಅರ್ಧದಷ್ಟು ಲಗೇಜ್ ಅನ್ನು ಊರಿಗೆ ಕಳುಹಿಸಿದ್ದೇನೆ. ಇನ್ನರ್ಧ ಲಗೇಜ್ ಇದೆ. ಊರಿನಲ್ಲಿ ತೋಟ ಇದೆ, ತೆಂಗಿನ ಸಸಿ ನೆಟ್ಟುಕೊಂಡು, ಕೃಷಿ ಮಾಡಿಕೊಂಡು ಊರಿನಲ್ಲಿಯೇ ಇರುತ್ತೇನೆ ಎಂಬುದು ಪ್ರಥಮ್ ಮಾತು.
ಬೆಂಗಳೂರಿನ ಒತ್ತಡದ ಬದುಕು ನನಗೆ ಒಗ್ಗಲ್ಲ, ನನಗೆ ನನ್ನೂರೇ ಸರಿಯಾದ ಜಾಗ. ಹೀಗಾಗಿ ಗಾಂಧಿನಗರಕ್ಕೆ ಗುಡ್ ಬೈ ಹೇಳಿ. ಊರಿಗೆ ಹೋಗಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.