ಪುಣ್ಯಕೋಟಿಯ ಮುಂದುವರೆದ ಭಾಗ ಈ “ಒಂದಲ್ಲಾ ಎರಡಲ್ಲಾ’

Team Udayavani, Aug 23, 2018, 3:26 PM IST

ondalla-eradalla-1.jpg

“ರಾಮ ರಾಮಾ ರೇ’ ನಂತರ ಸತ್ಯಪ್ರಕಾಶ್‌ ನಿರ್ದೇಶಿಸಿರುವ “ಒಂದಲ್ಲಾ ಎರಡಲ್ಲಾ’ ಚಿತ್ರವು ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಬಾರಿ ಮಕ್ಕಳ ದೊಡ್ಡ ಕಥೆಯೊಂದಿಗೆ ಬಂದಿರುವ ಸತ್ಯ, ಇದು ಪುಣ್ಯಕೋಟಿಯ ಮುಂದುವರೆದ ಭಾಗ ಎನ್ನುತ್ತಾರೆ. ಚಿತ್ರದ ಕುರಿತು ಮಾತನಾಡುವ ಸತ್ಯ, “ಇದು “ಪುಣ್ಯಕೋಟಿ’ಯ ಮುಂದುವರೆದ ಭಾಗ ಎನ್ನಬಹುದು. ಅದರಲ್ಲಿ ನಿಜವಾದ ಕಾಡು, ಪ್ರಾಣಿಗಳು ಇದ್ದವು. ಆದರೆ, ಕಾಡೆಲ್ಲಾ ನಾಡಾಗಿ ಪರಿವರ್ತನೆಯಾಗಿವೆ. 

ಹಾಗೆಯೇ ಪ್ರಾಣಿಗಳೂ ಇವೆ. ಹುಲಿ, ತೋಳ ತರಹದ ಪ್ರಾಣಿಗಳಿವೆ. ಹಾಗೆಯೇ ಹಸು ತರಹದ ಮುಗಧರೂ ಇದ್ದಾರೆ. “ಪುಣ್ಯಕೋಟಿ’ ಕಥೆಯಲ್ಲಿ ಸತ್ಯ ಗೆಲ್ಲುತ್ತದೆ. ಇಲ್ಲಿ ಮುಗ್ಧತೆ ಗೆಲ್ಲುತ್ತದೆ’ ಎನ್ನುತ್ತಾರೆ ಸತ್ಯ.

ಮುಗ್ಧತೆ ಎನ್ನುವುದು ಎಲ್ಲರಲ್ಲೂ ಇರುವ ಮೂಲಭೂತ ಗುಣ ಎನ್ನುವ ಸತ್ಯ, “ಎಲ್ಲರಿಗೂ ಇನ್ನೊಬ್ಬರಿಗೆ ನೋವು ಮಾಡಬಾರದು ಎಂಬ ಮನಸ್ಸಿರುತ್ತದೆ. ಆದರೆ, ಕೆಲವೊಮ್ಮೆ ಪರಿಸ್ಥಿತಿಗನುಗುಣವಾಗಿ ಅದನ್ನು ದೂರ ತಳ್ಳಿರುತ್ತೇವೆ. ಆದರೂ ಅದು ನಮ್ಮಲ್ಲೇ ಇರುತ್ತದೆ. ಅದನ್ನು ಟಚ್‌ ಮಾಡುವ ಪ್ರಯತ್ನ ಇದು. ಇದು ಮಕ್ಕಳು ನೋಡಲೇಬೇಕಾದ ಚಿತ್ರ. ಏಕೆಂದರೆ,  ಮನುಷ್ಯನಿಗೆ ಕಷ್ಟ ನೋವು ಆದಾಗ ಸ್ಪಂದಿಸುವುದು ಮನುಷ್ಯ ಮಾತ್ರ ಅಂತ ಗೊತ್ತಾಗಬೇಕು. ಅಂತಹ ಅಂಶಗಳು ಈ ಚಿತ್ರದಲ್ಲಿದೆ. ಇಲ್ಲಿ ಯಾವುದೇ ಕೆಟ್ಟ ಪಾತ್ರಗಳಿಲ್ಲ. ಎಲ್ಲವರೂ ಒಳ್ಳೆಯವರೇ. ತಮ¤ಮ್ಮ ಪರಿಧಿಯಲ್ಲಿ ಎಲ್ಲರೂ ಹೇಗೆ ಸ್ಪಂದಿಸುತ್ತಾರೆ ಎನ್ನುವುದೇ ಚಿತ್ರದ ಕಥೆ. ಹಾಗಾಗಿ ಮಕ್ಕಳಿಗೆ ಅದು ಗೊತ್ತಾಗಬೇಕು. ಬರೀ ಕೆಟ್ಟವರೇ ಇದ್ದಾರೆ, ಕೆಟ್ಟದ್ದೇ ಆಗುತ್ತದೆ ಎಂಬುದು ಅವರ ಮನಸ್ಸಿನಿಂದ ಹೋಗಬೇಕು. ಗೊತ್ತಾಗುವುದಕ್ಕೆ ಈ ಚಿತ್ರ ನೋಡಬೇಕು’ ಎನ್ನುತ್ತಾರೆ ಸತ್ಯ.

ಇನ್ನು ಚಿತ್ರಕ್ಕೆ “ಒಂದಲ್ಲಾ ಎರಡಲ್ಲಾ’ ಎಂದು ಹೆಸರಿಟ್ಟಿರುವ ಬಗ್ಗೆ ಮಾತನಾಡುವ ಅವರು, “ಈ ಹೆಸರು ಚಿತ್ರಕ್ಕೆ ಸೂಕ್ತವಾಗಿದೆ. ಇಲ್ಲಿ ಪಾತ್ರಗಳು, ವಿಷಯಗಳು, ಸನ್ನಿವೇಶಗಳು ಎಲ್ಲವೂ ಜಾಸ್ತಿಯೇ. ಖುಷಿ, ದುಃಖ, ಭಾವನೆ ಎಲ್ಲವೂ ಎರಡಕ್ಕಿಂತ ಜಾಸ್ತಿ ಇರುವುದರಿಂದ ಈ ಹೆಸರು ಚಿತ್ರಕ್ಕೆ ಸೂಕ್ತವಾಗಿದೆ’ ಎನ್ನುತ್ತಾರೆ.

“ಒಂದಲ್ಲಾ ಎರಡಲ್ಲಾ’ ಚಿತ್ರದಲ್ಲಿ ಮಾಸ್ಟರ್‌ ರೋಹಿತ್‌, ಸಾಯಿಕೃಷ್ಣ ಕುಡ್ಲ, ಎಂ.ಕೆ. ಮಠ, ಆನಂದ ನೀನಾಸಂ, ಪ್ರಭುದೇವ ಹೊಸದುರ್ಗ ಮುಂತಾದವರು ನಟಿಸಿದ್ದು, ಲವಿತ್‌ ಅವರ ಛಾಯಾಗ್ರಹಣ ಮತ್ತು ವಾಸುಕಿ ವೈಭವ್‌ ಅವರ ಸಂಗೀತ ಈ ಚಿತ್ರಕ್ಕಿದೆ. ಚಿತ್ರವನ್ನು “ಹೆಬ್ಬುಲಿ’ ನಿರ್ಮಿಸಿದ್ದ ಉಮಾಪತಿ ನಿರ್ಮಿಸಿದ್ದಾರೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

1-ruu

RCB ಅಭಿಮಾನಿಗಳನ್ನು ಕಿಚಾಯಿಸಿದ ಗಾಯಕ್ವಾಡ್‌!

BCCI

BCCI; ಜ.12ಕ್ಕೆ ನೂತನ ಕಾರ್ಯದರ್ಶಿ, ಖಜಾಂಚಿ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.