Sandalwood: ಸರಳ ಗೆಲುವಿನಲ್ಲಿ ಅರಳಿದ ನಗು: ಸರಳ ಪ್ರೇಮಕಥೆಗೆ 25ರ ಸಂಭ್ರಮ
Team Udayavani, Mar 6, 2024, 10:31 AM IST
ಸಿಂಪಲ್ ಸುನಿ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ 25ದಿನ ಸಂಭ್ರಮ. ಸುನಿ ನಿರ್ದೇಶನದ “ಒಂದು ಸರಳ ಪ್ರೇಮಕಥೆ’ ಚಿತ್ರ 25ದನ ಪೂರೈಸಿ ಮುನ್ನುಗ್ಗುತ್ತಿದೆ. ಈ ಖುಷಿಯನ್ನು ಇತ್ತೀಚೆಗೆ ಚಿತ್ರತಂಡ ಸಂಭ್ರಮಿಸಿದೆ. ಸಿನಿಮಾಕ್ಕೆ ಕೆಲಸ ಮಾಡಿದವರಿಗೆಲ್ಲಾ ನೆನಪಿನ ಕಾಣಿಕೆ ನೀಡಿದೆ ತಂಡ.
“ಸಿನಿಮಾ ಗೆದ್ದಿದೆ. ಕಲೆಕ್ಷನ್‌ನಲ್ಲೂ ಚಿತ್ರ ನಮ್ಮ ಕೈ ಹಿಡಿದಿದ್ದು ನಿರ್ಮಾಪಕರು ಸೇಫ್ ಆಗಿದ್ದಾರೆ. ಜೊತೆಗೆ ಓಟಿಟಿ, ಸ್ಯಾಟ್ ಲೈಟ್ ರೈಟ್ಸ್‌ಗಳು ಕೂಡಾ ಮಾರಾಟವಾಗಿವೆ. ಈ ಮೂಲಕ ಇಡೀ ತಂಡ ಖುಷಿಯಾಗಿದೆ. ಇವತ್ತು ಸಿನಿಮಾ ಹಂಡ್ರೆಡ್ ಡೇಸ್ ಮಾಡುತ್ತೆ ಅನ್ನೋದನ್ನು ಬಿಟ್ಟುಬಿಡಬೇಕು. ಏಕೆಂದರೆ ಇವತ್ತು ನಿರ್ಮಾಪಕರು 50 ದಿನಕ್ಕೆ ಸಿನಿಮಾವನ್ನು ಓಟಿಟಿಗೆ ಬರೆದುಕೊಟ್ಟಿರುತ್ತಾರೆ’ ಎನ್ನುವುದು ಸುನಿ ಮಾತು.
ಸುನಿ ಇದೇ ನಿರ್ಮಾಪಕರ ಜೊತೆ ಮತ್ತೂಂದು ಸಿನಿಮಾವನ್ನು ಕೂಡಾ ಆರಂಭಿಸಿದ್ದು, ಈಗಾಗಲೇ ಆ ಚಿತ್ರದ ಚಿತ್ರೀಕರಣ ಕೂಡಾ ಆರಂಭವಾಗಿದೆ. ನಾಯಕ ವಿನಯ್ ಕೂಡಾ ಸಿನಿಮಾ ಗೆದ್ದ ಖುಷಿಯನ್ನು ಹಂಚಿಕೊಂಡರು. ಚಿತ್ರಕ್ಕೆ ಸಂಗೀತ ನೀಡಿದ ವೀರ್ ಸಮರ್ಥ್ ಚಿತ್ರದ ಗೆಲುವಿನಿಂದ ಭಾವುಕರಾಗಿದ್ದರು. ಚಿತ್ರದ ಹಾಡುಗಳಿಗೆ ಮೆಚ್ಚುಗೆ ಸಿಗುತ್ತಿರುವ ಖುಷಿ ಅವರದಾಗಿತ್ತು.
“ನನ್ನ 15ವರ್ಷದ ಸಿನಿಜರ್ನಿಯಲ್ಲಿ ಸಿಕ್ಕ ದೊಡ್ಡ ಯಶಸ್ಸು ಇದು. ಈ ಚಿತ್ರದಲ್ಲಿ ಸಾಕಷ್ಟು ಪ್ರಯೋಗ ಮಾಡಿದ್ದೆ. ಮೆಲೋಡಿ, ದಾಸರ ಪದ, ಸೂಫಿ, ಗಜಲ್, ರಾಜಸ್ಥಾನಿ ಜಾನಪದ ಸಂಗೀತ… ಹೀಗೆ ಹಲವು ತರಹದ ಪ್ರಯೋಗಗಳನ್ನು ಮಾಡಿದ್ದೆ. ಜನ ಅದನ್ನು ಇಷ್ಟಪಟ್ಟಿದ್ದಾರೆ’ ಎಂದರು. ರಾಮ್ ಮೂವೀಸ್ ಬ್ಯಾನರ್‌ನಡಿ ಮೈಸೂರು ರಮೇಶ್ ಚಿತ್ರವನ್ನು ನಿರ್ಮಿಸಿದ್ದು, ಚಿತ್ರದ ಗೆಲುವಿನಿಂದ ಖುಷಿಯಾಗಿದ್ದಾರೆ. ಚಿತ್ರದ ಗೆದ್ದ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದರು.
ಚಿತ್ರದಲ್ಲಿ ನಾಯಕಿಯರಾಗಿ ಮಲ್ಲಿಕಾ ಸಿಂಗ್ ಹಾಗೂ ಸ್ವಾದಿಷ್ಠ ನಟಿಸಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದ ತಾರಾಬಳಗ ಚಿತ್ರದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.