ಇನ್ಮುಂದೆ ವರ್ಷಕ್ಕೊಂದು ಸಿನ್ಮಾ ಫಿಕ್ಸ್
Team Udayavani, Jun 19, 2018, 11:02 AM IST
ಆರು ವರ್ಷ, ಮೂರು ಸಿನಿಮಾ…. ಇದು ಧ್ರುವಸರ್ಜಾ ಕುರಿತ ಮಾತು. ಹೌದು, ಧ್ರುವ ಸರ್ಜಾ ಇಂಡಸ್ಟ್ರಿಗೆ ಬಂದು ಆರು ವರ್ಷ ಆಗೋಯ್ತು. ಈ ಆರು ವರ್ಷದಲ್ಲಿ ಮೂರು ಸಿನಿಮಾದಲ್ಲಿ ನಟಿಸಿದ್ದಾರೆ. ಆ ಮೂರು ಚಿತ್ರಗಳೂ ಹ್ಯಾಟ್ರಿಕ್ ಗೆಲುವು ಕೊಟ್ಟಿವೆ. ಭರ್ಜರಿ ಹಿಟ್ ಸಿನಿಮಾ ಕೊಟ್ಟಿರುವ ಧ್ರುವ ಸರ್ಜಾ, ಎರಡು ವರ್ಷಕ್ಕೊಂದು ಸಿನಿಮಾ ಮಾಡಿದರೆ ಹೇಗೆ? ಇದು ಅಭಿಮಾನಿಗಳು ಆಗಾಗ ಕೇಳುತ್ತಿದ್ದ ಪ್ರಶ್ನೆ. ಈಗ ಧ್ರುವ ಸರ್ಜಾ ಒಂದು ತೀರ್ಮಾನಕ್ಕೆ ಬಂದಿದ್ದಾರೆ. ವರ್ಷಕ್ಕೆ ಒಂದು ಸಿನಿಮಾ ಗ್ಯಾರಂಟಿ.
ಸಾಧ್ಯವಾದರೆ, ಎರಡು ಸಿನಿಮಾ ಮಾಡಲು ಪ್ರಯತ್ನಿಸುವುದಾಗಿಯೂ ಹೇಳಿದ್ದಾರೆ. “ಉದಯವಾಣಿ’ ಜೊತೆ ಮಾತನಾಡಿದ ಧ್ರುವಸರ್ಜಾ, “ಸದ್ಯಕ್ಕೆ ನಂದಕಿಶೋರ್ ನಿರ್ದೇಶನದ “ಪೊಗರು’ ಒಂದು ಹಂತದ ಚಿತ್ರೀಕರಣ ಮುಗಿದಿದೆ. ಚಿತ್ರದ ಪಾತ್ರಕ್ಕಾಗಿ ಸುಮಾರು 32 ಕೆಜಿ ತೂಕ ಇಳಿಸಿಕೊಂಡಿದ್ದುಂಟು. ಮತ್ತೆ ಇನ್ನೊಂದು ಶೇಡ್ ಪಾತ್ರಕ್ಕೆ ಮತ್ತದೇ ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಈಗ ಶೇ.90 ರಷ್ಟು ಹಿಂದಿನ ತೂಕದಷ್ಟೇ ಬಂದಿದ್ದೇನೆ.
ಒಂದುವರೆ ತಿಂಗಳಲ್ಲಿ 32 ಕೆಜಿ ತೂಕ ಇಳಿಸಿರುವ ಧ್ರುವಸರ್ಜಾ, ಆ ಪಾತ್ರದಲ್ಲಿ ಕೇವಲ 20 ನಿಮಿಷ ಮಾತ್ರ ಕಾಣಿಸಿಕೊಳ್ಳುತ್ತಾರಂತೆ. ತೆರೆ ಮೇಲೆ ನಿಮಿಷಗಳ ಕಾಲ ಬಂದು ಹೋಗುವ ಪಾತ್ರಕ್ಕೆ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ, ದೇಹದ ತೂಕ ಇಳಿಸಿಕೊಂಡ ಧ್ರುವಸರ್ಜಾಗೆ “ಪೊಗರು’ ಮೇಲೆ ಅತೀವ ವಿಶ್ವಾಸವಿದೆ. ಈ ಚಿತ್ರಕ್ಕಾಗಿ ಮಾಡಿದ ಕಸರತ್ತು ವೀಡಿಯೋದಲ್ಲಿ ಸೆರೆಯಾಗಿದ್ದು, ಸಿನಿಮಾ ಬಿಡುಗಡೆ ಮುನ್ನ, ಆ ವರ್ಕೌಟ್ ಮಾಡಿದ ವೀಡಿಯೋವನ್ನು ಬಿಡುಗಡೆ ಮಾಡಲಿದ್ದಾರಂತೆ.
“ಪೊಗರು’ ಇನ್ನೊಂದು ಹಂತದ ಚಿತ್ರೀಕರಣವಿದ್ದು, ಇನ್ನೆರೆಡು ತಿಂಗಳಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಈಗ ಅದರ ಜೊತೆ ಜೊತೆಗೇ ಉದಯ್‌ಮೆಹ್ತಾ ಅವರ ನಿರ್ಮಾಣದಲ್ಲಿ ನಂದಕಿಶೋರ್ ನಿರ್ದೇಶನದಲ್ಲಿ ಇನ್ನೊಂದು ಚಿತ್ರ ಶುರುವಾಗಲಿದೆ. ಆ ಬಳಿಕ ರಾಘವೇಂದ್ರ ಅವರ ಸಿನಿಮಾ. ಅದಿನ್ನೂ ಮಾತುಕತೆಯಲ್ಲಿದೆ. ಇನ್ನೂ ಒಂದಷ್ಟು ಮಾತುಕತೆ ನಡೆಯುತ್ತಿದೆ. ಒಂದಾದ ಮೇಲೊಂದು ಚಿತ್ರವನ್ನಷ್ಟೇ ಮಾಡ್ತೀನಿ’ ಎನ್ನುತ್ತಾರೆ ಧ್ರುವ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ
Thalapathy69: ಕಾಲಿವುಡ್ ಸ್ಟಾರ್ ದಳಪತಿ ವಿಜಯ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟನೆ
Bhairathi Ranagal: ಭೈರತಿಗೆ ಸ್ಯಾಂಡಲ್‌ವುಡ್ ಆರತಿ
BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ
Sandalwood: ಪ್ಯಾನ್ ಇಂಡಿಯಾ ʼಪುಷ್ಪʼ ಜೊತೆ ರಿಲೀಸ್ ಆಗಲಿದೆ ಕನ್ನಡದ ʼಭಗತ್ʼ
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.