ಒಂದೇ ಕಥೆ: ಹಲವು ಆಯಾಮಗಳು


Team Udayavani, Jan 14, 2018, 10:47 AM IST

3-gante.jpg

“3 ಗಂಟೆ 30 ದಿನ 30 ಸೆಕೆಂಡ್‌’ ಎಂಬ ಟೈಟಲ್‌ನಲ್ಲೇ ಕುತೂಹಲ ಹುಟ್ಟಿಸಿರುವ ಸಿನಿಮಾ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಜಾಹೀರಾತು ಕ್ಷೇತ್ರದಲ್ಲಿ ಸಾಕಷ್ಟು ಅನುಭವಿರುವ, ಎರಡು ಸಾವಿರಕ್ಕೂ ಹೆಚ್ಚು ಆ್ಯಡ್‌ ಫಿಲಂಗಳನ್ನು ಮಾಡಿರುವ ಜಿ.ಕೆ.ಮಧುಸೂಧನ್‌ ಈ ಚಿತ್ರದ ನಿರ್ದೇಶಕರು.

ಚಂದ್ರಶೇಖರ್‌ ಆರ್‌ ಪದ್ಮಶಾಲಿ ನಿರ್ಮಾಣದ ಈ ಚಿತ್ರದಲ್ಲಿ ಅರುಣ್‌ ಗೌಡ ಹಾಗೂ ಕಾವ್ಯ ಶೆಟ್ಟಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಹಾಡು, ಟ್ರೇಲರ್‌ ಹಿಟ್‌ ಆಗಿದ್ದು, ಚಿತ್ರ ಜನವರಿ 19 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಚಿತ್ರದ ಬಗ್ಗೆ ನಿರ್ದೇಶಕ ಮಧುಸೂಧನ್‌ ಮಾತನಾಡಿದ್ದಾರೆ ….

ಸಮೃದ್ಧ ಕಥೆ ಇರುವ ಸಿನಿಮಾ: ಸಾಮಾನ್ಯವಾಗಿ ಒಂದು ಸಿನಿಮಾ ಆರಂಭವಾಗಿ ಅದರ ಕಥೆ ತೆರೆದುಕೊಳ್ಳುವಷ್ಟರಲ್ಲಿ ಇಂಟರ್‌ವಲ್‌ ಬಂದಿರುತ್ತದೆ. ಸಿನಿಮಾಗಳ ಮೊದಲರ್ಧ ಬಹುತೇಕ ಹೀರೋ ಎಂಟ್ರಿ, ಬಿಲ್ಡಪ್‌, ಸಾಂಗ್‌ನಲ್ಲೇ ಮುಗಿದು ಹೋಗುತ್ತದೆ. ಆದರೆ, “3 ಗಂಟೆ 30 ದಿನ 30 ಸೆಕೆಂಡ್‌’ ಸಿನಿಮಾವನ್ನು ಅದರಿಂದ ಹೊರತಾಗಿಸಿದ್ದಾರಂತೆ ನಿರ್ದೇಶಕ ಮಧುಸೂಧನ್‌. ಹಾಗಾಗಿ, ಚಿತ್ರ ಆರಂಭವಾದ ಪ್ರತಿ 20 ನಿಮಿಷಕ್ಕೊಂದು ಕಥೆ ನಿಮಗೆ ಸಿಗುತ್ತದೆ.

ಹಾಗಂತ ಇಲ್ಲಿ ಎಷ್ಟು ಕಥೆ ಇದೆ ಎಂದು ನೀವು ಕೇಳಬಹುದು. ಕಥೆ ಒಂದೇ. ಆದರೆ, ಅದು ವಿಧವಿಧವಾಗಿ ಸಾಗುತ್ತದೆಯಂತೆ. “ನಾನು ಜಾಹೀರಾತು ಕ್ಷೇತ್ರದವನು. ಅಲ್ಲಿ ಪ್ರತಿ ಸೆಕೆಂಡ್‌ ಕೂಡಾ ತುಂಬಾ ಮುಖ್ಯವಾಗುತ್ತದೆ. ಒಂದು ಸೆಕೆಂಡ್‌ ಕೂಡಾ ನಾವು ಸುಮ್ಮನೆ ಕಳೆಯುವಂತಿಲ್ಲ. ಪ್ರತಿ ಸೆಕೆಂಡ್‌ ಎಷ್ಟು ಪ್ರಾಮುಖ್ಯತೆ ವಹಿಸುತ್ತದೆ ಎಂಬುದು ನನ್ನ ತಲೆಯಲ್ಲಿ ಬಂದ ಕೂಡಲೇ ಅದನ್ನಿಟ್ಟುಕೊಂಡು ಒಂದು ಕಥೆ ಮಾಡಿ, ಸಿನಿಮಾ ಯಾಕೆ ಮಾಡಬಾರದು ಎಂದು ಆಲೋಚಿಸಿದೆ.

ಅದನ್ನು ನಿರ್ಮಾಪಕ ಚಂದ್ರಶೇಖರ್‌ ಅವರಿಗೆ ಹೇಳಿದಾಗ, “ಬೇರೆಯವರಿಗೆ ಯಾಕೆ ಹೇಳುತ್ತೀರಿ. ನಾವೇ ಮಾಡುವ’ ಎಂದರು. ಹಾಗೆ ಶುರುವಾಗಿದ್ದು ಈ ಸಿನಿಮಾ. ನನ್ನ ಪ್ರಕಾರ, ಸಿನಿಮಾದಲ್ಲಿ ಕಥೆಯೇ ಮುಖ್ಯ. ಅದನ್ನು ನೀಟಾಗಿ ಮಾಡಿಕೊಂಡರೆ ಉಳಿದೆಲ್ಲವೂ ಸುಲಭವಾಗುತ್ತದೆ. ಹಾಗಾಗಿ, ಸುಮಾರು ಒಂದು ವರ್ಷ ಕುಳಿತು ಕಥೆ ಮಾಡಿದೆವು.

ಎಂಟು ವರ್ಶನ್‌ಗಳಲ್ಲಿ ಕಥೆ ಮಾಡಿಕೊಂಡೆವು. ನಮಗೆ ತೃಪ್ತಿಯಾದ ನಂತರ ಚಿತ್ರೀಕರಣ ಆರಂಭಿಸಿದೆವು. ಇಲ್ಲಿ ನಿಮಗೆ ಸಮೃದ್ಧವಾದ ಕಥೆ ಸಿಗುತ್ತದೆ. ಸಿನಿಮಾ ಆರಂಭವಾದಾಗಿನಿಂದಲೇ ಕಥೆ ತೆರೆದುಕೊಳ್ಳುತ್ತದೆ. ಅನಾವಶ್ಯಕವಾಗಿ ನಾವು ಟೈಮ್‌ ವೇಸ್ಟ್‌ ಮಾಡಿಲ್ಲ. ಪ್ರತಿ ಸೆಕೆಂಡ್‌ ಅನ್ನು ಚೆನ್ನಾಗಿ ಬಳಸಿಕೊಂಡಿದ್ದೇವೆ’ ಎಂದು ಸಿನಿಮಾ ಆರಂಭವಾದ ಬಗ್ಗೆ ಹೇಳುತ್ತಾರೆ ಮಧುಸೂಧನ್‌.

ಹೀರೋ ವರ್ಸಸ್‌ ಹೀರೋಯಿನ್‌: “3 ಗಂಟೆ 30 ದಿನ 30 ಸೆಕೆಂಡ್‌’ ಚಿತ್ರದ ಕಥೆ ಏನು ಎಂದು ನೀವು ಕೇಳಬಹುದು. ಈ ಬಗ್ಗೆಯೂ ನಿರ್ದೇಶಕ ಮಧುಸೂಧನ್‌ ಮಾತನಾಡುತ್ತಾರೆ. ಅವರು ಹೇಳುವಂತೆ, ಇದು ಹೀರೋ ವರ್ಸಸ್‌ ಹೀರೋಯಿನ್‌ ಸಿನಿಮಾ. ಹಾಗಂತ ಅವರಿಬ್ಬರು ಫೈಟ್‌ ಮಾಡುತ್ತಾರಾ ಎಂದು ನೀವು ಕೇಳುವಂತಿಲ್ಲ.

ಇಲ್ಲಿ ನಾಯಕ-ನಾಯಕಿಯರ ಸಿದ್ಧಾಂತ, ಅವರ ಆಲೋಚನೆಗಳು ಎರಡೂ ವಿರುದ್ಧವಾಗಿರುತ್ತವೆಯಂತೆ. ಆ ಮೂಲಕ ಸಿನಿಮಾ ಸಾಗುತ್ತದೆ. “ಚಿತ್ರದಲ್ಲಿ ನಾಯಕ-ನಾಯಕಿಯ ಆಲೋಚನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಲ್ಲಿ ನಾಯಕಿ ಪಕ್ಕಾ ಪ್ರಾಕ್ಟಿಕಲ್‌ ಆಗಿ ಆಲೋಚಿಸುವವಳು. ಜೀವನದಲ್ಲಿ ಕಾಸು ಮುಖ್ಯ, ಕಾಸಿದ್ದರೆ ಬದುಕಬಹುದು, ಸಂಬಂಧಗಳಿಗಿಂತ ಹಣ ಮತ್ತು ಅಂತಸ್ತಿಗೆ ಹೆಚ್ಚಿನ ಬೆಲೆ ಕೊಡುವವಳು.

ಆದರೆ, ನಾಯಕ ಮಾತ್ರ ಅದಕ್ಕೆ ತದ್ವಿರುದ್ಧ. ಆತ ಸಂಬಂಧಗಳನ್ನು ಗೌರವಿಸುವ, ಪ್ರೀತಿಸುವವ. ಕಾಸು, ಅಂತಸ್ತಿಗಿಂತ ಭಾವನೆಗಳು ಮುಖ್ಯ ಎಂದು ನಂಬಿರುವವ. ಹೀಗೆ ಇಬ್ಬರ ಮಧ್ಯೆ ಸಿದ್ಧಾಂತಗಳ ವಿಚಾರದಲ್ಲಿ ಸ್ಪರ್ಧೆಯೇ ನಡೆಯುತ್ತಿರುತ್ತದೆ. ಅಂತಿಮವಾಗಿ ಯಾವುದು ಗೆಲ್ಲುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ’ ಎಂದು ಚಿತ್ರದ ಬಗ್ಗೆ ವಿವರ ನೀಡುತ್ತಾರೆ. 

ಕಥೆಗೆ ಸೂಕ್ತವಾದ ಟೈಟಲ್‌: ಚಿತ್ರದ ಟೈಟಲ್‌ “3 ಗಂಟೆ 30 ದಿನ 30 ಸೆಕೆಂಡ್‌’. ಈ ಟೈಟಲ್‌ನಲ್ಲೇ ಒಂದು ಕುತೂಹಲವಿದೆ. ಹೀಗಿರುವಾಗ ಸಿನಿಮಾದಲ್ಲಿ ಏನಿರಬಹುದು, ಈ ಟೈಟಲ್‌ಗ‌ೂ ಕಥೆಗೂ ಯಾವ ರೀತಿ ಲಿಂಕ್‌ ಆಗುತ್ತದೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ನಿರ್ದೇಶಕರು ಹೇಳುವಂತೆ ಚಿತ್ರದ ಕಥೆಗೆ ಈ ಶೀರ್ಷಿಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆಯಂತೆ. ಅದು ಹೇಗೆ ಎಂಬುದನ್ನು ನೀವು ಸಿನಿಮಾದಲ್ಲಿ ನೋಡಬಹುದು.

ಎಷ್ಟೇ ಕಷ್ಟದ ಕೆಲಸವಾದರೂ ಸುಲಭವಾಗಿ ಮಾಡುವ ನಾಯಕ, ಅನೇಕ ವರ್ಷಗಳಿಂದ ಬಗೆಹರಿಯದ ಸಮಸ್ಯೆಯೊಂದನ್ನು 3 ಗಂಟೆಯಲ್ಲಿ ಬಗೆಹರಿಸುತ್ತಾನಂತೆ. ಆದರೆ, ಅದು ಮತ್ತೂಂದು ಸಮಸ್ಯೆಯನ್ನು ಹುಟ್ಟುಹಾಕುತ್ತದೆ ಮತ್ತು ನಾಯಕನನ್ನು ಸುತ್ತಿಕೊಳ್ಳುತ್ತದೆಯಂತೆ. ಅದು 30 ದಿನ, 30 ಸೆಕೆಂಡ್‌ವರೆಗೂ ಮುಂದುವರೆಯುತ್ತದೆಯಂತೆ. ಅದು ಹೇಗೆ ಎಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಬೇಕು.

ಇನ್ನು, ನಿರ್ದೇಶಕ ಮಧುಸೂಧನ್‌ ಅವರಿಗೆ ತಾವು ಮಾಡಿದ ಕೆಲಸ ತೃಪ್ತಿ ತಂದಿದೆ. ಅದಕ್ಕೆ ಸರಿಯಾಗಿ ಈಗಾಗಲೇ ಸಿನಿಮಾ ನೋಡಿದವರು ಕೂಡಾ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. “ಆರಂಭದಲ್ಲಿ ಸಣ್ಣ ಮಟ್ಟದಲ್ಲಿ ಸಿನಿಮಾ ಮಾಡಲು ಹೊರಟೆವು. ಆದರೆ ಅದು ದೊಡ್ಡದಾಗುತ್ತಾ ಹೋಯಿತು. ಮುಖ್ಯವಾಗಿ ನಾವು ಸಿನಿಮಾವನ್ನು ಬೇಗ ಮುಗಿಸಬೇಕೆಂಬ ಕಾರಣಕ್ಕೆ ಗುಣಮಟ್ಟದಲ್ಲಿ ರಾಜಿಯಾಗಿಲ್ಲ. ನಮಗೆ ತೃಪ್ತಿಯಾಗುವಂತೆ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ಅವರು.

ಹಾಡು, ಟ್ರೇಲರ್‌ಗೆ ಮೆಚ್ಚುಗೆ: ಚಿತ್ರದ ಹಾಡು, ಟೀಸರ್‌, ಟ್ರೇಲರ್‌ಗೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಚಿತ್ರತಂಡ ಖುಷಿಯಾಗಿದೆ. ಸಿನಿಮಾವನ್ನು ಕೂಡಾ ಜನ ಇದೇ ರೀತಿ ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ. ಚಿತ್ರದ ಟೀಸರ್‌ ಅನ್ನು 10 ಲಕ್ಷಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ.

ಇನ್ನು, ಚಂದನ್‌ ಶೆಟ್ಟಿ ಕಾಣಿಸಿಕೊಂಡಿರುವ ಹಾಡೊಂದು 12 ಲಕ್ಷಕ್ಕೂ ಹೆಚ್ಚು ಹಿಟ್ಸ್‌ ಪಡೆದಿದೆ. “ಜನರ ಪ್ರತಿಕ್ರಿಯೆ ನೋಡಿ ಖುಷಿಯಾಗುತ್ತಿದೆ. ನಮ್ಮ ಚಿತ್ರದಲ್ಲಿ ದೊಡ್ಡ ಸ್ಟಾರ್‌ಗಳಿಲ್ಲ. ಆದರೂ ಅವರು ಪ್ರೋತ್ಸಾಹಿಸುತ್ತಿರುವ ರೀತಿಯನ್ನು ಮೆಚ್ಚಲೇಬೇಕು’ ಎನ್ನುವುದು ಮಧುಸೂಧನ್‌ ಮಾತು. 

ಟಾಪ್ ನ್ಯೂಸ್

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

tenant kannada movie

Sandalwood: ತೆರೆಗೆ ಬಂತು ʼಟೆನೆಂಟ್ʼ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

Modi-Tour

Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.