ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ ಅಣ್ಣಾವ್ರದ್ದಾಗಿತ್ತು
Team Udayavani, Apr 23, 2021, 11:19 AM IST
ವರನಟ ಡಾ. ರಾಜಕುಮಾರ್ ಅವರ ಸಿನಿಮಾಗಳು ತೆರೆಮುಂದೆ ಮತ್ತು ತೆರೆಹಿಂದೆ ಹತ್ತು ಹಲವು ಪ್ರಥಮಗಳಿವೆ ಕಾರಣವಾಗಿರುವ ಉದಾಹರಣೆಗಳು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸಾಕಷ್ಟು ಸಿಗುತ್ತವೆ. ಅಂಥದ್ದೊಂದು ದಾಖಲೆಯ ಉದಾಹರಣೆ ಅವರ “ಆಪರೇಷನ್ ಡೈಮಂಡ್ ರಾಕೇಟ್’ ಸಿನಿಮಾ.
ಈಗೆಲ್ಲ ಕನ್ನಡ ಸಿನಿಮಾಗಳ ಹಾಡುಗಳು ಮತ್ತು ದೃಶ್ಯಗಳನ್ನು ವಿದೇಶಗಳಲ್ಲಿ ಚಿತ್ರೀಕರಿಸುವುದು ಸರ್ವೇ ಸಾಮಾನ್ಯ. ಆದರೆ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ವಿದೇಶದಲ್ಲಿ ಚಿತ್ರೀಕರಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಅಣ್ಣಾವ್ರ “ಆಪರೇಷನ್ ಡೈಮಂಡ್ ರಾಕೇಟ್’ ಸಿನಿಮಾ.
ಇದನ್ನೂ ಓದಿ:ಜನ್ ‘ಧನು’ ಖಾತೆ: ಬ್ಯಾಡ್ ಬಾಯ್ ಇಮೇಜ್ ತಂದ ಸೌಭಾಗ್ಯ
ಅಲ್ಲಿಯವರೆಗೆ ಸ್ಟುಡಿಯೋಗಳಲ್ಲಿ ಒಳಾಂಗಣ ಚಿತ್ರೀಕರಣ ಚಿತ್ರೀಕರಣ, ದೇಶದ ಒಳಗೆ ವಿವಿಧ ರಾಜ್ಯಗಳಲ್ಲಿ ಹೊರಾಂಗಣ ಚಿತ್ರೀಕರಣ ನಡೆಯುತ್ತಿತ್ತು. ಕನ್ನಡ ಸಿನಿಮಾವೊಂದನ್ನು ಬೇರೆ ದೇಶಕ್ಕೆ ಹೋಗಿ ಚಿತ್ರೀಕರಿಸುವ ಸಾಹಸವನ್ನು ಯಾರೂ ಮಾಡಿರಲಿಲ್ಲ. ಇಂಥದ್ದೊಂದು ಹೊಸ ಸಾಹಸ ಮಾಡಿ ದಾಖಲೆ ಬರೆದಿದ್ದು. “ಆಪರೇಷನ್ ಡೈಮೆಂಡ್ ರಾಕೇಟ್’ ಸಿನಿಮಾ.
ಆಗಿನ ಕಾಲದಲ್ಲೇ ಸುಮಾರು 38 ಲಕ್ಷ ರೂ. ಖರ್ಚು ಮಾಡಿ, ಈ ಸಿನಿಮಾವನ್ನು ನೇಪಾಳದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ನೇಪಾಳ ಮತ್ತು ಚೀನಾದ ಗಡಿ ಭಾಗದವರೆಗೂ ಹಲವು ಸುಂದರ ತಾಣಗಳಲ್ಲಿ ಈ ಸಿನಿಮಾದ ಚಿತ್ರೀಕರಣನಡೆಸಲಾಗಿತ್ತು.
ಇದರ ನಂತರ ನಟ, ನಿರ್ದೇಶಕ ಕಂ ನಿರ್ಮಾಪಕ ದ್ವಾರಕೀಶ್ “ಸಿಂಗಾಪುರದಲ್ಲಿ ರಾಜಾಕುಳ್ಳ’ ಚಿತ್ರವನ್ನು ವಿದೇಶದಲ್ಲಿ ಚಿತ್ರೀಕರಿಸಿದರು. ಅದಾದ ನಂತರ ಒಂದೊಂದಾಗಿ ಸಿನಿಮಾಗಳು ವಿದೇಶಗಳಲ್ಲಿ ಚಿತ್ರೀಕರಣವಾಗಲು ಪ್ರಾರಂಭವಾಯಿತು. ಹೀಗೆ ಕನ್ನಡ ಚಿತ್ರರಂಗದಲ್ಲಿ ವಿದೇಶಿ ಚಿತ್ರೀಕರಣದ ಟ್ರೆಂಡ್ ಹುಟ್ಟುಹಾಕಿದ್ದು ಅಣ್ಣಾವ್ರ ಸಿನಿಮಾ ಅನ್ನೋದು ಗಮನಿಸಬೇಕಾದ ಅಂಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.