ನಮ್ಮ ಹೀರೋಯಿನ್‌ ತುಂಬಾ ಒಳ್ಳೆಯವ್ರು!


Team Udayavani, Sep 11, 2017, 6:27 PM IST

Vedika-(4).jpg

ನಮ್ಮ ನಿರ್ಮಾಪಕರು ತುಂಬಾ ಒಳ್ಳೆಯವ್ರು, ನಿರ್ದೇಶಕರು ಸೂಪರ್‌, ನಾಯಕ ಎಕ್ಸಟ್ರಾರ್ಡಿನರಿ, ನಾಯಕಿಯಂತೂ ಡೌನ್‌ ಟು ಅರ್ಥ್ …. ಸಿನಿಮಾ ಪತ್ರಿಕಾಗೋಷ್ಠಿಗಳಲ್ಲಿ ಈ ತರಹದ ಬಣ್ಣಗೆಗಳು ಕೇಳಿಬರುತ್ತಲೇ ಇರುತ್ತದೆ. “ಚಿತ್ರೀಕರಣದ ವೇಳೆ ನಾವು ಕುಟುಂಬದ ತರಹ ಇದ್ವಿ’ ಎಂದು ಹೇಳುತ್ತಲೇ ಗುಣಗಾನ ಮಾಡುವವರಿದ್ದಾರೆ. ಅದು ಅವರ ಖುಷಿ.

ಇತ್ತೀಚೆಗೆ “ಗೌಡ್ರು ಹೋಟೆಲ್‌’ ಚಿತ್ರದ ಆಡಿಯೋ ಬಿಡುಗಡೆಯಲ್ಲಿ ನಿರ್ದೇಶಕ ಪಿ.ಕುಮಾರ್‌, ಚಿತ್ರದ ನಾಯಕಿ ವೇದಿಕಾ ಅವರು ತುಂಬಾ ಒಳ್ಳೆಯವರು ಎಂದು ಗುಣಗಾನ ಮಾಡಿದರು. ಕೇವಲ ಅಷ್ಟಕ್ಕೇ ಅವರು ಬಿಡಲಿಲ್ಲ. ವೇದಿಕಾ ಯಾಕೆ ಒಳ್ಳೆಯವರು ಎಂದು ವಿವರಿಸುತ್ತಾ ಹೋದರು. ಚಿತ್ರೀಕರಣದ ವೇಳೆ ವೇದಿಕಾ ಅವರ ನಡವಳಿಕೆ ಕಂಡು ಖುಷಿಯಾದ ಪಿ.ಕುಮಾರ್‌, ವೇದಿಕಾ ಯಾಕೆ ಒಳ್ಳೆಯವರು ಎಂಬುದಕ್ಕೆ ಕಂಡುಕೊಂಡ ಕಾರಣಗಳು ಇಲ್ಲಿವೆ …

1. “ಗೌಡ್ರು ಹೋಟೆಲ್‌’ ಚಿತ್ರದ ನಾಯಕ ರಚನ್‌ ಚಿತ್ರರಂಗಕ್ಕೆ ಹೊಸಬರು. ಚಿತ್ರೀಕರಣಕ್ಕೆ ಮುಂಚೆ ವರ್ಕ್‌ಶಾಪ್‌ ಆಯೋಜಿಸಿದ ನಿರ್ದೇಶಕ ಪಿ.ಕುಮಾರ್‌ ಅದಕ್ಕೆ ನಾಯಕಿ ವೇದಿಕಾ ಅವರನ್ನು ಕರೆದಿದ್ದಾರೆ. ವೇದಿಕಾ ಕೂಡಾ ಆ ವರ್ಕ್‌ಶಾಪ್‌ನಲ್ಲಿ ಭಾಗವಹಿಸಿದ್ದಾರೆ.

ವೇದಿಕಾ ಈಗಗಾಲೇ ಸಿನಿಮಾಗಳಲ್ಲಿ ನಟಿಸಿ ಅನುಭವವಿರುವ ನಟಿ. ಅದಕ್ಕಿಂತ ಹೆಚ್ಚಾಗಿ ಬಿಝಿ ನಟಿ. ವರ್ಕ್‌ಶಾಪ್‌ಗೆ ನಾನು ಬರಲ್ಲ, ನಿಮ್ಮ ಹೀರೋಗೆ ಮಾಡಿಸಿ ಎಂದು ಹೇಳಿ ಬಾರದೇ ಇರಬಹುದಿತ್ತು. ಆದರೂ ಬಂದು ಪ್ರೋತ್ಸಾಹಿಸಿದ್ದು ಅವರ ಒಳ್ಳೆಯತನ. ಆರಂಭದಲ್ಲೇ ನಿರ್ದೇಶಕರಿಗೆ ಇದು ಖುಷಿಕೊಟ್ಟಿದೆ. 

2. ಅದೊಂದು ದಿನ ರಾತ್ರಿ ಶೂಟಿಂಗ್‌ನಲ್ಲಿ ವೇದಿಕಾ ರಸ್ತೆಯಲ್ಲಿ ಓಡಿಕೊಂಡು ಬರಬೇಕಾದ ಸನ್ನಿವೇಶ. ವೇದಿಕಾ ಹಾಕಿಕೊಂಡಿದ್ದ ಹಿಲ್ಡ್ಸ್ ಕಳಚಿ, ಅಸಿಸ್ಟೆಂಟ್‌ ಕೊಟ್ಟ ಶೂ ಹಾಕಿಕೊಂಡು ಓಡಲಾರಂಭಿಸುತ್ತಾರೆ. ಸ್ವಲ್ಪ ಓಡುವಷ್ಟರಲ್ಲಿ ಏನೋ ಇರುಸು ಮುರುಸಾಗಿ ನಿಂತ ವೇದಿಕಾ, ಶೂ ಬಿಚ್ಚುತ್ತಾರೆ.

ನೋಡಿದಾಗ ಶೂ ಒಳಗಡೆ ಒಂದು ಜಿರಳೆ ಸೇರಿಕೊಂಡಿದೆ. ವೇದಿಕಾ ತಮ್ಮ ಅಸಿಸ್ಟೆಂಟ್‌ನಲ್ಲಿ ಯಾವುದೇ ರೀತಿ ಮುನಿಸಿಕೊಳ್ಳದೇ ಆರಾಮವಾಗಿ ಬೇರೆ ಶೂ ಹಾಕಿಕೊಂಡು ಶೂಟಿಂಗ್‌ ಮುಂದುವರೆಸುತ್ತಾರೆ. ಕೆಲವು ನಾಯಕಿಯರು ಜಗಳವಾಡುವುದನ್ನು ಕಂಡ ನಿರ್ದೇಶಕರಿಗೆ, ಇದು ವೇದಿಕಾ ಅವರ “ದೊಡ್ಡಗುಣ’ ಎನಿಸಿದೆ.

3. ಫಾರಿನ್‌ನಲ್ಲಿ ಅಂಡರ್‌ವಾಟರ್‌ ಶೂಟಿಂಗ್‌ನಲ್ಲಿ ವೇದಿಕಾ ಭಾಗವಹಿಸಿದ ಸಂದರ್ಭ. ನೀರಲ್ಲಿ ಈಜುತ್ತಿರಬೇಕಾದರೆ ವೇದಿಕಾಗೆ ಏನೋ ಅನುಮಾನ ಬಂದು ತಮ್ಮ ಬೆನ್ನತ್ತ ಕೈಯಾಡಿಸುತ್ತಾರೆ. ಆಗ ಅವರು ಹಾಕಿದ ಜಾಕೆಟ್‌ನ ಒಂದು ಬಟನ್‌ ಕಿತ್ತುಹೋಗಿರುತ್ತದೆ. ತಕ್ಷಣ ಟವೆಲ್‌ ಸುತ್ತಿಕೊಂಡು ಮೇಲೆ ಬಂದ ವೇದಿಕಾ, “ಅದರ ಒಂದು ಬಟನ್‌ ಹೋಗಿದೆ. ಅದನ್ನು ಹಾಕಿದ ನಂತರ ಶೂಟಿಂಗ್‌ ಮಾಡುವ’ ಎಂದು ಕೂಲ್‌ ಆಗಿ ಹೇಳುತ್ತಾರೆ.

ಬಟನ್‌ ಹಾಕಿದ ನಂತರ ಮತ್ತೆ ನೀರಿಗಿಳಿಯುತ್ತಾರೆ ವೇದಿಕಾ. ಆ ಘಟನೆಗೆ ಮೂಡ್‌ಆಫ್ ಆಗಿ “ನಿಮಗೆ ಜವಾಬ್ದಾರಿಯಿಲ್ಲ’ ಎಂದು ಚಿತ್ರತಂಡದವರಿಗೆ ಬೈದು ಇಡೀ ದಿನ ಕ್ಯಾರಾವಾನ್‌ನಲ್ಲಿ ಕುಳಿತು ಶೂಟಿಂಗ್‌ ಕ್ಯಾನ್ಸಲ್‌ ಮಾಡಿದ್ದರೆ, ಚಿತ್ರತಂಡದವರಿಗೆ ನಷ್ಟವಾಗಬಹುದಿತ್ತು. ಆದರೆ, ವೇದಿಕಾ ಮಾತ್ರ ಹಾಗೆ ಮಾಡದೇ ಘಟನೆಯನ್ನು ಕೂಲ್‌ ಆಗಿ ತೆಗೆದುಕೊಂಡಿದ್ದು ನಿರ್ದೇಶಕರಿಗೆ ವೇದಿಕಾ ಮೇಲಿನ ಗೌರವ ಹೆಚ್ಚಿಸಿದೆ.

ಟಾಪ್ ನ್ಯೂಸ್

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

10-sc-1

Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್‌

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

15-

Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

13-ed

Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.

12-mumbai

Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.