ಮೂಕಜ್ಜಿ ಹುಡುಕಾಟದಲ್ಲಿ ಪಿ. ಶೇಷಾದ್ರಿ
Team Udayavani, Jan 8, 2018, 11:59 AM IST
ನಿರ್ದೇಶಕ ಪಿ.ಶೇಷಾದ್ರಿ ಈಗ ಹೊಸ ಸಿನಿಮಾ ತಯಾರಿಯಲ್ಲಿದ್ದಾರೆ. ಅದು ಮತ್ತೂಂದು ಪ್ರಶಸ್ತಿಗೆ ಅರ್ಹವಿರುವಂತಹ ಚಿತ್ರವನ್ನೇ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಅಂದಹಾಗೆ, ಶೇಷಾದ್ರಿ ಮಾಡಲು ಹೊರಟಿರುವ ಚಿತ್ರ ಯಾವುದು ಗೊತ್ತಾ? ಶಿವರಾಮ ಕಾರಂತರ “ಮೂಕಜ್ಜಿಯ ಕನಸುಗಳು’ ಕಾದಂಬರಿಯನ್ನು ಚಿತ್ರ ಮಾಡಲು ತಯಾರಿ ನಡೆಸಿದ್ದಾರೆ. ಹೌದು ಸ್ವತಃ ಶೇಷಾದ್ರಿ ಅವರೇ ಇದನ್ನು ಸ್ಪಷ್ಟಪಡಿಸಿದ್ದಾರೆ.
ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರೆ ಅಂಗವಾಗಿ ಇತ್ತೀಚೆಗೆ ನಡೆದ ಸದಭಿರುಚಿ ಚಿತ್ರಗಳ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ತಮ್ಮ ನಿರ್ದೇಶನದ “ಡಿಸೆಂಬರ್1′ ಚಿತ್ರವನ್ನು ಸ್ಥಳೀಯರೊಂದಿಗೆ ವೀಕ್ಷಿಸಿದ ಬಳಿಕ “ಉದಯವಾಣಿ’ ಜತೆ ಮಾತು ಹಂಚಿಕೊಂಡಿದ್ದಾರೆ. “ಸದ್ಯಕ್ಕೀಗ ಎಸ್.ಎಲ್.ಭೈರಪ್ಪನವರ ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಒಂದು ಗಂಟೆ ಅವಧಿಯ ಸಾಕ್ಷéಚಿತ್ರದ ಕೆಲಸ ನಡೆಯುತ್ತಿದೆ.
ಅದಾದ ಬಳಿಕ ಶಿವರಾಮ ಕಾರಂತರ “ಮೂಕಜ್ಜಿಯ ಕನಸುಗಳು’ ಕಾದಂಬರಿಯನ್ನು ಸಿನಿಮಾ ಮಾಡುವ ಯೋಚನೆ ಇದೆ. ಈಗಾಗಲೇ ಚಿತ್ರಕಥೆ ಬರೆಯುತ್ತಿದ್ದು, ಚಿತ್ರದ ಪ್ರಮುಖ ಪಾತ್ರಕ್ಕಾಗಿ 80ರ ವೃದ್ಧೆಗೆ ಹುಡುಕಾಟ ನಡೆದಿದೆ. ಕೊಪ್ಪಳ, ಬಾದಾಮಿಯಲ್ಲಿ ಇರುವ ನಾಟಕ ಕಂಪನಿಗಳಿಗೆ ಭೇಟಿ ನೀಡಿ, ಪಾತ್ರಕ್ಕೆ ಹೊಂದುವ ವೃದ್ಧ ನಟಿಯ ಹುಡುಕಾಟದಲ್ಲಿದ್ದೇನೆ. ಕನ್ನಡ ಚಿತ್ರರಂಗಕ್ಕೆ ಈಗೀಗ ಸಿನಿಮಾ ಬಗ್ಗೆ ಕಲಿತು ಬರುವವರ ಸಂಖ್ಯೆ ಹೆಚ್ಚಾಗಿದೆ.
ಅದರಲ್ಲೂ ಟೆಕ್ಕಿಗಳೂ ಸಹ ಸಿನಿಮಾಸಕ್ತಿ ಬೆಳೆಸಿಕೊಂಡಿರುವುದು ಹೊಸ ಬೆಳವಣಿಗೆ. ಸಿನಿಮಾವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ, ಪ್ರಾಪಂಚಿಕ ಸಿನಿಮಾ ನೋಡಿ, ತಿಳಿದು ಚಿತ್ರ ಮಾಡುವವರ ಸಂಖ್ಯೆ ಹೆಚ್ಚಾಗಿರೋದು ಸಂತಸ ತಂದಿದೆ. ಕೆಲ ಚಿತ್ರಗಳು ಜನರನ್ನು ತಲುಪುತ್ತಿಲ್ಲ. ಸಿನಿಮಾ ಮಾಡಿದೋರೆ ಎಲ್ಲ ಊರುಗಳಿಗೆ ಹೋಗಿ ಸಿನಿಮಾ ತೋರಿಸೋಕೆ ಆಗಲ್ಲ. ಹಂಚಿಕೆದಾರರು, ವಿತರಕರು. ಈ ಬಗ್ಗೆ ಗಮನಹರಿಸಬೇಕಿದೆ.
ಕೇರಳ, ಪಶ್ಚಿಮ ಬಂಗಾಳದಲ್ಲಿ ಆರಂಭದಲ್ಲಿ ಚಿತ್ರ ಸಮಾಜಗಳು ಹುಟ್ಟಕೊಂಡಿದ್ದವು. ಅವು ಚಿಕ್ಕಪುಟ್ಟ ಪಟ್ಟಣ,ಹಳ್ಳಿಗಳಿಗೆ ತೆರಳಿ ಸದಭಿರುಚಿ ಸಿನಿಮಾಗಳನ್ನ ಕಡಿಮೆ ದರದಲ್ಲಿ ಜನರಿಗೆ ತೋರಿಸುತ್ತಿದ್ದವು. ಈಗ ಆ ಸಂಖ್ಯೆ ಕಡಿಮೆಯಾಗಿದೆ. ಹೆಚ್ಚಾಗಬೇಕಾದ ಅನಿವಾರ್ಯತೆ ಮೊದಲಿಗಿಂತಲೂ ಈಗ ಅಧಿಕವಾಗಿದೆ. ರಾಜ್ಯದಲ್ಲಿ ಸುಮಾರು 6-7 ವರ್ಷಗಳ ಹಿಂದೆ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಬೆಳ್ಳಿಮಂಡಲ ಸಂಘಟನೆ ಮೂಲಕ ಸದಭಿರುಚಿ ಚಿಸಿನಿಮಾಗಳನ್ನ ತೋರಿಸುತ್ತಿತ್ತು.
ಆಗ ಆಶಾಭಾವನೆ ಗರಿಗೆದರಿತ್ತು. ಕ್ರಮೇಣ ಅದೂ ಸಹ ಹುಸಿಯಾಯ್ತು. ಜನರ ಪ್ರತಿಕ್ರಿಯೆ ಹೇಗೆ ಇರಲಿ, ಏನೇ ಇರಲಿ ಇಂಥ ಪ್ರಯತ್ನ ನಿಲ್ಲಬಾರದು. ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗಬಾರದು. ವಾರ್ತಾ ಇಲಾಖೆ ನಡೆಸುವ ಚಿತ್ರೋತ್ಸವ ತಿಂಗಳಿಗೊಮ್ಮೆ ಎಲ್ಲ ಕಡೆ ಆಗಲಿ. ಜನತಾ ಚಿತ್ರಮಂದಿರಕ್ಕಾಗಿ ಸರ್ಕಾರ 50 ಲಕ್ಷ ರೂ. ಕೊಡುತ್ತಿದೆ. ಎಲ್ಲಾ ಜಿಲ್ಲೆಗಳ ಸ್ಥಳೀಯ ಆಸಕ್ತರು ಸರ್ಕಾರದ ಸೌಲಭ್ಯ ಪಡೆದುಕೊಂಡು ಸದಭಿರುಚಿ ಚಿತ್ರಗಳನ್ನು ಉಳಿಸುವ ಕೆಲಸ ಮಾಡಲಿ ಎಂಬುದು ಶೇಷಾದ್ರಿ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.