ಪಿ.ವಾಸು – ಶಿವರಾಜಕುಮಾರ್ ಹೊಸ ಚಿತ್ರ ಆನಂದ್?
Team Udayavani, Oct 3, 2018, 11:37 AM IST
ಶಿವರಾಜಕುಮಾರ್ ಹಾಗೂ ನಿರ್ದೇಶಕ ಪಿ.ವಾಸು ಕಾಂಬಿನೇಶನ್‌ನಲ್ಲಿ ಬಂದ “ಶಿವಲಿಂಗ’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಶಿವರಾಜಕುಮಾರ್ ಅವರಿಗೂ ಈ ಚಿತ್ರ ಹೊಸ ಇಮೇಜ್ ಕೊಟ್ಟಿದ್ದು ಸುಳ್ಳಲ್ಲ. ಆ ಚಿತ್ರದ ಬಿಡುಗಡೆ ಸಮಯದಲ್ಲೇ ತಾವಿಬ್ಬರು ಮತ್ತೂಂದು ಚಿತ್ರ ಮಾಡುವುದಾಗಿ ಶಿವಣ್ಣ ಹೇಳಿದ್ದರು. ಈಗ ಬಹುತೇಕ ಎಲ್ಲವೂ ಅಂತಿಮವಾಗಿದ್ದು, ಶಿವಣ್ಣ ಹಾಗೂ ಪಿ.ವಾಸು ಕಾಂಬಿನೇಶನ್‌ನಲ್ಲಿ ಮತ್ತೂಂದು ಸಿನಿಮಾ ಬರಲಿದೆ.
ಎಲ್ಲಾ ಓಕೆ, ಈ ಸಿನಿಮಾದ ಶೀರ್ಷಿಕೆ ಏನು ಎಂಬ ಕುತೂಹಲ ಸಹಜ. ಚಿತ್ರಕ್ಕೆ “ಆನಂದ್’ ಎಂದು ಹೆಸರಿಡುವ ಬಗ್ಗೆ ಚಿತ್ರತಂಡ ಯೋಚಿಸುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ “ಆನಂದ್’ ಶಿವರಾಜಕುಮಾರ್ ಅವರ ಮೊದಲ ಚಿತ್ರ. ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ಮೂಲಕ ಶಿವರಾಜಕುಮಾರ್ ಕೆರಿಯರ್‌ಗೆ ಭದ್ರ ಬುನಾದಿಯಾಯಿತು.
ಈಗ ಮತ್ತೂಮ್ಮೆ ಈ ಟೈಟಲ್‌ನಡಿ ಸಿನಿಮಾ ಮಾಡುವ ತಯಾರಿ ನಡೆಯುತ್ತಿದೆ. ಹಾಗಂತ ಚಿತ್ರತಂಡ “ಆನಂದ್’ ಶೀರ್ಷಿಕೆಯನ್ನೇ ಅಂತಿಮಗೊಳಿಸಿಲ್ಲ. ಇದರ ಜೊತೆಗೆ “ಅಮರೇಂದ್ರ’ ಎಂಬ ಶೀರ್ಷಿಕೆಯೂ ಇದೆ. “ಆನಂದ್’ ಹಾಗೂ “ಅಮರೇಂದ್ರ’ದಲ್ಲಿ ಯಾವುದು ಕಥೆಗೆ ಹಾಗೂ ತಂಡಕ್ಕೆ ಓಕೆಯಾಗುತ್ತದೋ ಅದನ್ನು ಅಂತಿಮಗೊಳಿಸಲಿದೆ.
ಈ ನಡುವೆಯೇ ಶಿವರಾಜಕುಮಾರ್ ಹಾಗೂ ಯೋಗರಾಜ ಭಟ್ಟರ ಕಾಂಬಿನೇಶನ್‌ನಲ್ಲೊಂದು ಸಿನಿಮಾ ಬರಲಿದ್ದು, ಈ ಚಿತ್ರಕ್ಕೆ “ಕುಲದಲ್ಲಿ ಕೀಳ್ಯಾವುದೋ’ ಎಂದು ಶೀರ್ಷಿಕೆ ಇಡಲಾಗಿದೆ. “ಭಟ್ರ ಕಥೆ ತುಂಬಾ ಚೆನ್ನಾಗಿದೆ. ಆ ಕಥೆ ಕೇಳಿ ನಾನು ತುಂಬಾ ಇಂಪ್ರಸ್ ಆದೆ. ಆ ಕಥೆಗೆ ಟೈಟಲ್ ತುಂಬಾ ಹೊಂದುತ್ತೆ’ ಎನ್ನುತ್ತಾರೆ ಶಿವರಾಜಕುಮಾರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.