ಹರೆಯದ ಮನಸ್ಸಿನಲ್ಲಿ ಯಾಕೆ ಸಿಕ್ಕೆ!
Team Udayavani, Dec 14, 2022, 4:35 PM IST
ಹರೆಯದ ಪ್ರೇಮಕಥೆಗಳನ್ನು ತೆರೆಮೇಲೆ ತರಲು ಸಿದ್ಧವಾಗಿರುವ ಚಿತ್ರ “ಪದವಿ ಪೂರ್ವ’. ಯೋಗರಾಜ್ ಭಟ್ ಹಾಗೂ ರವಿ ಶ್ಯಾಮನೂರ್ ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರ ಡಿ.30ರಂದು ತೆರೆಕಾಣುತ್ತಿದೆ.
ಈಗ ಚಿತ್ರದ ರೊಮ್ಯಾಂಟಿಕ್ ಹಾಡಾಗಿರುವ “ಯಾಕೆ ಸಿಕ್ಕೆ’ ಹಾಡು ಬಿಡುಗಡೆಯಾಗಿದೆ. ನಟ ಸುದೀಪ್ ಅವರು ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಹದಿಹರೆಯದ ಕಾಲೇಜು, ಫ್ರೆಂಡ್ಶಿಪ್, ಪ್ರೇಮ ಕಾವ್ಯ ಈ ಹಾಡಿನಲ್ಲಿ ಹೇಳಲಾಗಿದೆ. ಕಿಚ್ಚ ಸುದೀಪ್ ಅವರ ನಿವಾಸದಲ್ಲಿ ಹಾಡು ಬಿಡುಗಡೆ ಮಾಡಿದ್ದು,ಯೋಗರಾಜ್ ಭಟ್, ನಿರ್ದೇಶಕ ಹರಿಪ್ರಸಾದ್ ಜಯಣ್ಣ, ನಾಯಕ ಪೃಥ್ವಿ ಶ್ಯಾಮನೂರು, ನಾಯಕಿ ಅಂಜಲಿ ಅನೀಶ್ ಹಾಜರಿದ್ದರು.
ಪೃಥ್ವಿ ಶಾಮನೂರು ಮೊದಲ ಸಿನಿಮಾದಲ್ಲೇ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಸಿನಿಮಾ ಮೂಡಿಬಂದಿರುವ ರೀತಿ.
“ನಾನು ಪಿಯುಸಿ ಇದ್ದಾಗ ಈ ಸಿನಿಮಾ ಆರಂಭವಾಗಿದ್ದು. ನನ್ನ ರಿಯಲ್ ಲೈಫ್ಗೆ ತುಂಬಾ ಹತ್ತಿರವಾದ ಕಥೆ. ಇಡೀ ಸಿನಿಮಾ ಸೊಗಸಾಗಿ ಮೂಡಿಬಂದಿದೆ. ಮುಖ್ಯವಾಗಿ ಈ ಸಿನಿಮಾದಲ್ಲಿನನಗೆ ಕಲಿಯಲು ಸಾಕಷ್ಟು ಅವಕಾಶ ಸಿಕ್ಕಿತು. ಸಿನಿಮಾತಡವಾದಷ್ಟು ನಾನು ಹೆಚ್ಚೆಚ್ಚು ಕಲಿತೆ. ನನ್ನ ಮಿಸ್ಟೆಕ್ಗಳನ್ನೆಲ್ಲಾಸರಿಪಡಿಸುತ್ತಾ ಬಂದೆ. ಅದೇ ಕಾರಣದಿಂದ ಸಿನಿಮಾದಲ್ಲಿಚೆನ್ನಾಗಿ ನಟಿಸಲು ಸಾಧ್ಯವಾಯಿತು. ಮುಖ್ಯವಾಗಿ ಒಬ್ಬಕಲಾವಿದನಾಗಲು ಏನೇನು ಅಂಶಗಳು ಮುಖ್ಯವೋ,ಅವೆಲ್ಲವನ್ನು ಈ ಸಿನಿಮಾದಿಂದ ಕಲಿತೆ’ ಎಂದು ಖುಷಿಯಿಂದ ಹೇಳುತ್ತಾರೆ ಪೃಥ್ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ
Sandalwood: ಪ್ಯಾನ್ ಇಂಡಿಯಾ ʼಪುಷ್ಪʼ ಜೊತೆ ರಿಲೀಸ್ ಆಗಲಿದೆ ಕನ್ನಡದ ʼಭಗತ್ʼ
Sandalwood: ಡಿ.27ಕ್ಕೆ ‘ರಾಜು ಜೇಮ್ಸ್ ಬಾಂಡ್’ ರಿಲೀಸ್
Toxic Movie: ಯಶ್ ʼಟಾಕ್ಸಿಕ್ʼ ಸಿನಿಮಾಕ್ಕಾಗಿ ಮರ ಕಡಿದ ಆರೋಪ; ಎಫ್ಐಆರ್ ದಾಖಲು
Abishek Ambareesh: ಗಂಡು ಮಗುವಿಗೆ ಜನ್ಮ ನೀಡಿದ ಅವಿವಾ; ಅಂಬಿ ಮನೆಯಲ್ಲಿ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.