‘ಪಡ್ಡೆಹುಲಿ’ಗೆ ‘ಹೇಳಿ ಹೋಗು ಕಾರಣ’ ಬರೆದ ಸಾಹಿತಿ ಲಕ್ಷ್ಮಣ್ ರಾವ್
Team Udayavani, Feb 16, 2019, 11:20 AM IST
ಸ್ಯಾಂಡಲ್ ವುಡ್ ನ ಗಂಡುಗಲಿ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಅವರು ನಾಯಕ ನಟನಾಗಿ ಎಂಟ್ರಿ ಪಡೆದುಕೊಳ್ಳುತ್ತಿರುವ ಬಹುನಿರೀಕ್ಷಿತ ಚಿತ್ರ ‘ಪಡ್ಡೆ ಹುಲಿ’ ಈಗಾಗಲೇ ತನ್ನ ಹಾಡುಗಳಿಂದ ಕನ್ನಡ ಚಿತ್ರ ರಸಿಕರ ಮನದಲ್ಲಿ ಕತೂಹಲವನ್ನು ಹುಟ್ಟಿಸಿದೆ. ಮೊನ್ನೆ ತಾನೆ ಚಿತ್ರದುರ್ಗ ಕೋಟೆಯ ಮೇಲೆ ಚಿತ್ರಿಸಲಾಗಿದ್ದ ವಿಶಿಷ್ಟ ಹಾಡನ್ನು ಮತ್ತು ಪ್ರೇಮಿಗಳ ದಿನಕ್ಕೊಂದು ಹಾಡನ್ನು ಬಿಡುಗಡೆಗೊಳಸಿದ್ದ ಚಿತ್ರತಂಡವು ಇದೀಗ ಇನ್ನೊಂದು ಸ್ಪೆಷಲ್ ಸಾಂಗ್ ಅನ್ನು ಚಿತ್ರಪ್ರಮಿಗಳಿಗೋಸ್ಕರ ಬಿಡುಗಡೆಗೊಳಿಸಿದೆ.
ಕನ್ನಡದ ಖ್ಯಾತ ಸಾಹಿತಿ ಬಿ.ಆರ್. ಲಕ್ಷ್ಮಣ್ ರಾವ್ ಅವರು ಬರೆದಿರುವ ಈ ಫೀಲಿಂಗ್ ಸಾಂಗ್ ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನದಲ್ಲಿ ವಿಭಿನ್ನವಾಗಿ ಮೂಡಿಬಂದಿದೆ. ಸಿದ್ಧಾರ್ಥ್ ಮಹಾದೇವನ್ ಅವರು ಈ ಹಾಡನ್ನು ಹಾಡಿದ್ದು ಇದರಲ್ಲಿ ಬರುವ ರ್ಯಾಪ್ ಅನ್ನು ಗುಬ್ಬಿ ಅವರು ಹಾಡಿದ್ದಾರೆ. ಈ ಹಾಡಿನಲ್ಲಿ ಬರುವ ‘ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ ಬೆಳಕಾದೆ ಬಾಳಿಗೆ ; ಇಂದೇಕೆ ಹೀಗೆ ಬೆಳಕನ್ನು ತೊರೆದು ನೀನೇಕೆ ಸರಿದೆ ನೆರಳಿಗೆ. ಇನ್ನಾವ ಬಂಧ ತೊಡರಿದೆ ನಿನ್ನ ಕಾಲಿಗೆ’ ಎಂಬ ಸಾಲಂತೂ ಅಪ್ಪಟ ಕನ್ನಡತನದಿಂದ ಕೂಡಿದ್ದು ಲಕ್ಷ್ಮಣ್ ರಾವ್ ಅವರ ಸಾಹಿತ್ಯ ಪ್ರತಿಭೆಯ ಹಿರಿಮೆಯನ್ನು ನಮಗೆ ಪರಿಚಯಿಸುವಂತಿದೆ.
‘ತೇಜಸ್ವಿನಿ ಎಂಟರ್ ಪ್ರೈಸಸ್’ನಡಿಯಲ್ಲಿ ‘ಪಡ್ಡೆ ಹುಲಿ’ ಚಿತ್ರವು ತಯಾರಾಗುತ್ತಿದ್ದು ಎಂ. ರಮೇಶ್ ಮತ್ತು ರೆಡ್ಡಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಗುರು ದೇಶಪಾಂಡೆ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.