“ಪೈಲ್ವಾನ್’ ಬಾಕ್ಸಿಂಗ್ ಪೋಸ್ಟರ್ ರಿಲೀಸ್
ಏಕಕಾಲಕ್ಕೆ ಐದು ಭಾಷೆಯಲ್ಲಿ ಹೊರಬಂದ ಕಿಚ್ಚನ ಕಿಚ್ಚೆಬ್ಬಿಸೋ ಗೆಟಪ್
Team Udayavani, Jun 5, 2019, 3:01 AM IST
ಕೆಲ ದಿನಗಳ ಹಿಂದಷ್ಟೇ ಸುದೀಪ್ ಅಭಿನಯದ “ಪೈಲ್ವಾನ್’ ಚಿತ್ರದಲ್ಲಿ ನಟ ಸುನೀಲ್ ಶೆಟ್ಟಿ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು. ಆ ಪೋಸ್ಟರ್‌ಗೆ ಎಲ್ಲೆಡೆಯಿಂದ ಭರ್ಜರಿ ಮೆಚ್ಚುಗೆ ಸಿಕ್ಕಿತ್ತು. ಭಾರೀ ಕುತೂಹಲ ಕೆರಳಿಸಿದ್ದ “ಪೈಲ್ವಾನ್’ ಈಗ ಮತ್ತೂಂದು ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ.
ಸುದೀಪ್ ಅವರು ಬಾಕ್ಸಿಂಗ್ ಗೆಟಪ್‌ನಲ್ಲಿ ಪಂಚ್ ಮಾಡುತ್ತಿರುವ ಪೋಸ್ಟರ್ ಅದಾಗಿದ್ದು, ಎಲ್ಲೆಡೆಯಿಂದ ಮೆಚ್ಚುಗೆ ಹರಿದುಬರುತ್ತಿದೆ. ಇನ್ನೊಂದು ವಿಶೇಷವೆಂದರೆ, “ಪೈಲ್ವಾನ್’ ಚಿತ್ರದ ಪೋಸ್ಟರ್ ಮಂಗಳವಾರ ಸಂಜೆ 4 ಗಂಟೆಗೆ ಕನ್ನಡ, ತಮಿಳು, ಹಿಂದಿ, ತೆಲುಗು, ಮಲೆಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.
ಹಿಂದಿಯಲ್ಲಿ ಸುನೀಲ್ ಶೆಟ್ಟಿ “ಪೈಲ್ವಾನ್’ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದರೆ, ತಮಿಳಿನಲ್ಲಿ ನಟ ವಿಜಯ್ ಸೇತುಪತಿ “ಪೈಲ್ವಾನ್’ ಪೋಸ್ಟರ್ ಹೊರತಂದಿದ್ದಾರೆ. ಇನ್ನು ತೆಲುಗಿನಲ್ಲಿ ಚಿರಂಜೀವಿ, ಮಲಯಾಳಂನಲ್ಲಿ ಮೋಹನ್‌ಲಾಲ್ “ಪೈಲ್ವಾನ್’ ಪೋಸ್ಟರ್ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭಕೋರಿದ್ದಾರೆ.
ಸದ್ಯ ಬಿಡುಗಡೆಯಾಗಿರುವ “ಪೈಲ್ವಾನ್’ ಪೋಸ್ಟರ್‌ಗಳಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ಸಹಜವಾಗಿಯೇ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ನಿರೀಕ್ಷೆಯನ್ನು ಹೆಚ್ಚಿಸಿದೆ. ಬಿಡುಗಡೆಗೂ ಮೊದಲೇ ಸುದೀಪ್ ಅವರ “ಪೈಲ್ವಾನ್’ ಸಾಕಷ್ಟು ಸದ್ದು ಮಾಡುತ್ತ ಸುದ್ದಿಯಾಗುತ್ತಿದ್ದು, ಚಿತ್ರತಂಡ ಕೂಡ “ಪೈಲ್ವಾನ್’ ಬಿಡುಗಡೆಗೆ ಕೊನೆಯ ಹಂತದ ಸಿದ್ಧತೆಯಲ್ಲಿದೆ.
ಸದ್ಯ ಎಲ್ಲರ ಚಿತ್ತ “ಪೈಲ್ವಾನ್’ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆ ಕಡೆಗೆ ನೆಟ್ಟಿದೆ. ಅದೇನೆ ಇರಲಿ, “ಪೈಲ್ವಾನ್’ ಅವತಾರದಲ್ಲಿ ಸುದೀಪ್ ಅಬ್ಬರ ನೋಡಲು ಅಭಿಮಾನಿಗಳು ತುದಿಗಾಲ ಮೇಲೆ ನಿಂತಿರುವುದಂತೂ ಸುಳ್ಳಲ್ಲ.
To all those who believe in me n to all those whom I believe in,,,many Thanks, Huggs n cheers for inspiring me… ??PAILWAAN pic.twitter.com/ysK0mXUuUJ
— Kichcha Sudeepa (@KicchaSudeep) June 4, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.