Jailer: ರಜಿನಿ – ಶಿವಣ್ಣ ಮುಖಾಮುಖಿ.. ʼಜೈಲರ್ʼ ಹೊಸ ಪೋಸ್ಟರ್ ವೈರಲ್
Team Udayavani, Aug 6, 2023, 1:40 PM IST
ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ಅವರ ʼಜೈಲರ್ʼ ರಿಲೀಸ್ ಗೆ 4 ದಿನಗಳು ಮಾತ್ರ ಬಾಕಿ ಉಳಿದಿದೆ. ರಿಲೀಸ್ ಹತ್ತಿರಕ್ಕೆ ಬರುತ್ತಿದ್ದಂತೆ ಸಿನಿಮಾ ತಂಡ ಒಂದೊಂದೇ ಪೋಸ್ಟರ್ ಗಳನ್ನು ರಿಲೀಸ್ ಮಾಡಿ ಕುತೂಹಲ ಹೆಚ್ಚಿಸುತ್ತಿದೆ.
ಇತ್ತೀಚಗೆ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ರಜಿನಿಕಾಂತ್ ಅಭಿಮಾನಿಗಳ ವಲಯದಲ್ಲಿ ಈ ಟ್ರೇಲರ್ ಸಿಕ್ಕಾಪಟ್ಟೆ ಸದ್ದು ಮಾಡಿದೆ. ವಯಸ್ಸು 70 ದಾಟಿದರೂ ರಜಿನಿ 20 ರ ಹುಡುಗನಂತೆ ಮಾಸ್ & ಕ್ಲಾಸ್ ಲುಕ್ ನಲ್ಲಿ ಮಿಂಚಿದ್ದಾರೆ. ಟ್ರೇಲರ್‌ನೊಂದಿಗೆ ಅನಿರುದ್ಧ್ ಅವರ ಬಿಜಿಎಂ ಟ್ರೇಲರ್ ನೋಡುಗರನ್ನು ರೋಮಾಂಚನಗೊಳಿಸುತ್ತದೆ.
ಟ್ರೇಲರ್ ಜನರಿಗೆ ಇಷ್ಟವಾಗಿದೆ. ಆದರೆ ಇಡೀ ಟ್ರೇಲರ್ ನಲ್ಲಿ ರಜಿನಿ ಬಿಟ್ಟು ಉಳಿದ ಪ್ರಮುಖ ಸ್ಟಾರ್ ಗಳನ್ನು ತೋರಿಸಿಲ್ಲ. ಶಿವರಾಜ್ ಕುಮಾರ್ ಹಾಗೂ ಮೋಹನ್ ಲಾಲ್ ಅವರ ದೃಶ್ಯವನ್ನು ತೋರಿಸಿಲ್ಲ. ಇದು ಕೆಲ ಪ್ರೇಕ್ಷಕರಿಗೆ ನಿರಾಶರನ್ನಾಗಿ ಮಾಡಿತ್ತು.
ಇದೀಗ ಸನ್ ಪಿಕ್ಚರ್ಸ್ ನಟ ಶಿವರಾಜ್ ಕುಮಾರ್ ಅವರ ಪಾತ್ರದ ಪೋಸ್ಟರ್ ರಿಲೀಸ್ ಮಾಡಿದೆ. ಗದ್ದೆಯ ಹಿನ್ನೆಲೆಯಂತಿರುವ ಜಾಗದಲ್ಲಿ ಶಿವರಾಜ್ ಕುಮಾರ್ – ರಜಿನಿಕಾಂತ್ ಪರಸ್ಪರ ನೋಟದಿಂದ ನಿಂತುಕೊಂಡಿರುವುದನ್ನು ಪೋಸ್ಟರ್ ನಲ್ಲಿ ತೋರಿಸಲಾಗಿದೆ. ಮೊದಲ ಬಾರಿ ಸೂಪರ್ ಸ್ಟಾರ್ – ಶಿವಣ್ಣ ಇಬ್ಬರನ್ನು ಒಂದೇ ಸ್ಕ್ರೀನ್ ನಲ್ಲಿ ನೋಡಲು ರೆಡಿಯಾಗಿ , ಇನ್ನು 4 ದಿನಗಳಲ್ಲಿ ʼಜೈಲರ್ʼ ನಿಮ್ಮ ಮುಂದೆ ಎಂದು ಸನ್ ಪಿಕ್ಚರ್ಸ್ ಟ್ವೀಟ್ ಮಾಡಿದೆ.
ಈಗಾಗಲೇ ʼಜೈಲರ್ʼ ಸಿನಿಮಾದ ಬುಕಿಂಗ್ ಓಪನ್ ಆಗಿದ್ದು, ಬಹಳ ವೇಗದಿಂದ ಟಿಕೆಟ್ ಬುಕ್ ಆಗುತ್ತಿದೆ.
ಜಾಕಿ ಶ್ರಾಫ್, ರಮ್ಯಾ ಕೃಷ್ಣನ್, ತಮನ್ನಾ, ವಿನಾಯಕನ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಇದೇ ಆ.10 ರಂದು ಸಿನಿಮಾ ತೆರೆಗೆ ಬರಲಿದೆ.
Superstar – Shivanna 😎
Get ready to watch them together for the first time💥 4 more days to go for #Jailer@rajinikanth @NimmaShivanna @Nelsondilpkumar @anirudhofficial @Mohanlal @bindasbhidu @tamannaahspeaks @meramyakrishnan @suneeltollywood @iYogiBabu @iamvasanthravi… pic.twitter.com/y2oyXMdQMt
— Sun Pictures (@sunpictures) August 6, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.