ಪಾರ್ವತಮ್ಮರಾಜ್‌ಕುಮಾರ್ ವೈಕುಂಠ ಸಮಾರಾಧನೆ
Team Udayavani, Jun 12, 2017, 11:47 AM IST
ಇತ್ತೀಚೆಗೆ ನಿಧನರಾದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರ ವೈಕುಂಠ ಸಮಾರಾಧನೆಯನ್ನು ರಾಜ್‌ಕುಟುಂಬ, ಭಾನುವಾರ ಸಮಾಧಿ ಬಳಿ ಪೂಜೆ ಸಲ್ಲಿಸುವ ಮೂಲಕ ನೆರವೇರಿಸಿತು. ಬೆಳಗ್ಗೆ ಸುಮಾರು 10 ಗಂಟೆಗೆ ಸಮಾಧಿ ಬಳಿ ತೆರಳಿದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್‌ರಾಜ್‌ಕುಮಾರ್ ಹಾಗೂ ರಾಜ್ ಕುಟುಂಬದ ಸದಸ್ಯರು, ಪಾರ್ವತಮ್ಮ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.
ತುಳಸಿ ದಳ, ಚೆಂಡು ಹೂವು, ಮಲ್ಲಿಗೆ ಹೂವು ಹಾಗೂ ವಿವಿಧ ಹೂವಿನ ಹಾರಗಳಿಂದ ಸಮಾಧಿಯನ್ನು ಅಲಂಕರಿಸಲಾಗಿತ್ತು. ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ಇಷ್ಟದ ತಿನಿಸುಗಳು, ಹಣ್ಣಹಂಪಲು ಇಟ್ಟು ಸಂಪ್ರದಾಯ ಪ್ರಕಾರ ಪೂಜೆ ನೆರವೇರಿಸಲಾಯಿತು. ಇದಕ್ಕೂ ಮುನ್ನ ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ ಅವರು ಮೊದಲು ಪಾರ್ವತಮ್ಮ ರಾಜ್‌ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಶಿವರಾಜ್‌ಕುಮಾರ್ ಸಹೋದರರು ಕುಟುಂಬ ವರ್ಗದ ಜತೆಗೆ ಪೂಜೆ ಸಲ್ಲಿಸಿತು.
ಅತ್ತ, ಸದಾಶಿವನಗರದಲ್ಲಿರುವ ರಾಜ್‌ಕುಮಾರ್ ಮನೆಯಲ್ಲೂ ತಿಥಿ ಕಾರ್ಯ ನಡೆಯಿತು. ಈ ವೇಳೆ ಸುಮಾರು ಎರಡರಿಂದ ಮೂರು ಸಾವಿರ ಅಭಿಮಾನಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ನಟರಾದ ಶ್ರೀಮುರಳಿ, ವಿಜಯರಾಘವೇಂದ್ರ, ಚಂದ್ರಶೇಖರ್,ಗುರುದತ್, ಸಂಗೀತ ನಿರ್ದೇಶಕ ವಿ.ಮನೋಹರ್ ರಾಮ್‌ಕುಮಾರ್, ಪಾರ್ವತಮ್ಮ ಸಹೋದರರಾದ ಚೆನ್ನೇಗೌಡ, ಎಸ್.ಎ.ಗೋವಿಂದರಾಜ್, ಕಲಾವಿದ ಹೊನ್ನವಳ್ಳಿ ಕೃಷ್ಣ ಸೇರಿದಂತೆ ರಾಜ್ ಕುಟುಂಬವರ್ಗ ಹಾಜರಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.