ಪಾರ್ವತಮ್ಮನ ಖಡಕ್ ಮಗಳಿವಳು!: Watch
Team Udayavani, Oct 6, 2018, 5:38 PM IST
ದಿಶಾ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಹರಿಪ್ರಿಯಾ ಅವರ 25ನೇ ಚಿತ್ರ “ಡಾಟರ್ ಆಫ್ ಪಾರ್ವತಮ್ಮ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ವೈದೇಹಿ ಪಾತ್ರದಲ್ಲಿ ಮೊದಲ ಬಾರಿಗೆ ತನಿಖಾಧಿಕಾರಿಯಾಗಿ ಬೋಲ್ಡ್ ಆಗಿ ಹರಿಪ್ರಿಯಾ ನಟಿಸಿದ್ದಾರೆ. ಟೀಸರ್ ನಲ್ಲಿ ವೈದೇಹಿ ಪಾತ್ರದ ಪರಿಚಯವಿದ್ದು, ಪಾರ್ವತಮ್ಮ ಪಾತ್ರದಲ್ಲಿ ಸುಮಲತಾ ಅಂಬರೀಶ್ ಅಭಿನಯಿಸಿದ್ದಾರೆ.
ಅಲ್ಲದೇ ಇಲ್ಲಿ ತನಿಖಾಧಿಕಾರಿ ವೈದೇಹಿ ಪಾತ್ರ ಎರಡು ಶೇಡ್‍ಗಳಲ್ಲಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶಂಕರ್ ಆ್ಯಕ್ಷನ್ ಕಟ್ ಹೇಳಿದ್ದು, ಈ ಹಿಂದೆ ಪವನ್ ಒಡೆಯರ್ ಜೊತೆ “ರಣವಿಕ್ರಮ’ ಸೇರಿದಂತೆ ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರ ಒಂದು ಕ್ರೈಮ್ ಸುತ್ತ ಸುತ್ತುವ ಕಥೆ ಹಂದರವನ್ನೊಳಗೊಂಡಿದ್ದು, ನಿರ್ದೇಶಕ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ವೈದೇಹಿ ಪಾತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿದ್ದಾರೆ.
ತಾಯಿ ಮಗಳ ನಡುವಿನ ಬಾಂಧವ್ಯಕ್ಕೂ ಸಾಕಷ್ಟು ಅವಕಾಶವಿರುವ ಈ ಚಿತ್ರವನ್ನು ಶಶಿಧರ್, ವಿಜಯಲಕ್ಷ್ಮೀ ಕೃಷ್ಣೇಗೌಡ, ಸಂದೀಪ್, ಶ್ವೇತಾ ಸೇರಿ ನಿರ್ಮಿಸುತ್ತಿದ್ದಾರೆ. ಅರುಳ್ ಕೆ. ಸೋಮಸುಂದರನ್ ಕ್ಯಾಮೆರಾ ಕೈಚಳಕ, ಮಿಥುನ್ ಮುಕುಂದನ ಅವರು ಸಂಗೀತ ಸಂಯೋಜನೆ ನೀಡಿದ್ದು, ಸುರೇಶ್ ಆರ್ಮುಗಂ ಸಂಕಲನ ಚಿತ್ರಕ್ಕಿದೆ. ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಇನ್ನು ಹರಿಪ್ರಿಯಾ “ಡಾಟರ್ ಆಫ್ ಪಾರ್ವತಮ್ಮ’ದಲ್ಲಿ ಬಿಝಿಯಾಗಿದ್ದು, ಇದಲ್ಲದೇ ಅವರ ನಟನೆಯ “ಸೂಜಿದಾರ’, “ಬೆಲ್ ಬಾಟಮ್’, ಹಾಗೂ “ಕಥಾಸಂಗಮ’ ಚಿತ್ರಗಳು ಬಿಡುಗಡೆಯ ಹಂತದಲ್ಲಿವೆ. ಇದಲ್ಲದೇ ದರ್ಶನ್ ಅವರ “ಕುರುಕ್ಷೇತ್ರ’ ಚಿತ್ರದ ಹಾಡೊಂದರಲ್ಲೂ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.