ಲವ್‍ಸ್ಟೋರಿಗೆ ಮರಳಿದ ಪವನ್ ಒಡೆಯರ್
ಇಶಾನ್‍ಗೆ ಆಶಿಕಾ ಜೋಡಿ
Team Udayavani, Jun 13, 2019, 3:02 AM IST
“ನಟಸಾರ್ವಭೌಮ’ ಚಿತ್ರದ ನಂತರ ನಿರ್ದೇಶಕ ಪವನ್ ಒಡೆಯರ್ ಏನು ಮಾಡುತ್ತಿದ್ದಾರೆಂಬ ಕುತೂಹಲ ಅನೇಕರಿಗಿತ್ತು. ಏಕೆಂದರೆ ಯಾವ ಸಿನಿಮಾವನ್ನು ಪವನ್ ಅನೌನ್ಸ್ ಮಾಡಿರಲಿಲ್ಲ. ಈಗ ಪವನ್ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಹೊಸ ಸಿನಿಮಾ ಮೂಲಕ. ಇಶಾನ್ ನಾಯಕರಾಗಿರುವ ಸಿನಿಮಾವನ್ನು ಪವನ್ ನಿರ್ದೇಶಿಸುತ್ತಾರೆಂದು ಸುದ್ದಿ ಇತ್ತಾದರೂ ಅದು ಅಂತಿಮವಾಗಿರಲಿಲ್ಲ. ಈಗ ಬಹುತೇಕ ಎಲ್ಲವೂ ಅಂತಿಮವಾಗಿದ್ದು, ಜುಲೈನಲ್ಲಿ ಚಿತ್ರ ಸೆಟ್ಟೇರಲಿದೆ.
ಈ ಬಾರಿ ಪವನ್ ಲವ್‌ಸ್ಟೋರಿಯತ್ತ ಮರಳಿದ್ದಾರೆ. “ಗೂಗ್ಲಿ’ ಚಿತ್ರದಲ್ಲಿ ಅಪ್ಪಟ ಲವ್‌ಸ್ಟೋರಿಯನ್ನು ಕಟ್ಟಿಕೊಟ್ಟಿದ್ದ ಪವನ್ ಆ ಚಿತ್ರದ ಮೂಲಕ ಯಶಸ್ಸು ಕೂಡಾ ಕಂಡಿದ್ದರು. ಆ ನಂತರ ಲವ್‌ಸ್ಟೋರಿಯಿಂದ ದೂರವಿದ್ದು, ಬೇರೆ ಬೇರೆ ಜಾನರ್‌ಗಳನ್ನು ಪ್ರಯತ್ನಿಸಿದ ಪವನ್ ಈಗ ಮತ್ತೆ ಲವ್‌ಸ್ಟೋರಿಗೆ ಮರಳಿದ್ದಾರೆ. ಈ ಚಿತ್ರದ ಮೂಲಕ ಇಶಾನ್ ಲವರ್‌ಬಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
“ಗೂಗ್ಲಿ ನಂತರ ನಾನು ಲವ್‌ಸ್ಟೋರಿ ಮಾಡಿರಲಿಲ್ಲ. ಬೇರೆ ಬೇರೆ ಜಾನರ್‌ಗಳನ್ನು ಪ್ರಯತ್ನಿಸುತ್ತಿದ್ದ ನನಗೆ ಅನೇಕರು, “ನೀವು ಮತ್ತೆ ಲವ್‌ಸ್ಟೋರಿ ಮಾಡಿ, ನಿಮ್ಮ ಲವ್‌ಸ್ಟೋರಿ ತುಂಬಾ ಚೆನ್ನಾಗಿರುತ್ತೆ’ ಎನ್ನುತ್ತಿದ್ದರು. ಹಾಗಾಗಿ, ಈ ಬಾರಿ ಒಂದು ಲವ್‌ಸ್ಟೋರಿ ಮಾಡಲು ಮುಂದಾಗಿದ್ದೇನೆ. ಈಗಾಗಲೇ ಕೆಲಸಗಳು ಜೋರಾಗಿ ನಡೆಯುತ್ತಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈನಲ್ಲಿ ಚಿತ್ರ ಸೆಟ್ಟೇರಬಹುದು’ ಎನ್ನುವುದು ಪವನ್ ಮಾತು.
ಈ ಚಿತ್ರವನ್ನು ಸಿ.ಆರ್.ಮನೋಹರ್ ನಿರ್ಮಿಸುತ್ತಿದ್ದಾರೆ. ಎಲ್ಲಾ ಓಕೆ, ಇಶಾನ್‌ಗೆ ನಾಯಕಿ ಯಾರು ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಉತ್ತರ ಆಶಿಕಾ ರಂಗನಾಥ್. ಹೌದು, ಪವನ್ ಒಡೆಯರ್ ಹೊಸ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮೂಲಕ ಆಶಿಕಾ ಅಕೌಂಟ್‌ಗೆ ಹೊಸ ಸಿನಿಮಾ ಸೇರ್ಪಡೆಯಾಗಿದೆ. ಚಿತ್ರದ ತಾಂತ್ರಿಕ ವರ್ಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.