ಪಾವನಾ ಈಗ ರುದ್ರಿ
Team Udayavani, Jul 9, 2018, 11:22 AM IST
“ಸದ್ಯದಲ್ಲೇ ಮಹಿಳಾ ಪ್ರಧಾನ ಚಿತ್ರವೊಂದನ್ನು ಒಪ್ಪಿಕೊಳ್ಳಲಿದ್ದೇನೆ’ ಎಂದು ಈ ಹಿಂದೊಮ್ಮೆ ನಟಿ ಪಾವನಾ ಹೇಳಿದ್ದರು. ಈಗ ಆ ಸಿನಿಮಾವನ್ನು ಒಪ್ಪಿಕೊಂಡು, ಬಹುತೇಕ ಚಿತ್ರೀಕರಣ ಕೂಡಾ ಮುಗಿಸಿಬಿಟ್ಟಿದ್ದಾರೆ. ಪಾವನಾ ನಟಿಸುತ್ತಿರುವ ಮಹಿಳಾ ಪ್ರಧಾನ ಚಿತ್ರ “ರುದ್ರಿ’. ಹೌದು, ಪಾವನಾ “ರುದ್ರಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣವಾಗಿದ್ದು, ಇನ್ನೊಂದಿಷ್ಟು ದಿನ ಚಿತ್ರೀಕರಣವಾದರೆ ಸಿನಿಮಾ ಮುಗಿದಂತೆ.
ಬಡಿಗೇರ್ ದೇವೇಂದ್ರ ಎನ್ನುವವರು ಈ ಸಿನಿಮಾದ ನಿರ್ದೇಶಕರು. ಈ ಸಿನಿಮಾದಲ್ಲಿ ಪಾವಾನಾ “ರುದ್ರಿ’ ಪಾತ್ರ ಮಾಡುತ್ತಿದ್ದಾರೆ. ಸಿನಿಮಾದ ಕಥೆ ಉತ್ತರ ಕರ್ನಾಟಕ ಹಿನ್ನೆಲೆಯಲ್ಲಿ ಸಾಗಲಿದೆ. ರುದ್ರಿ ಎಂಬ ಹೆಣ್ಣು ಮಗಳು ಆಸೆ, ಕನಸು, ನೋವು, ನಲಿವುಗಳ ಸುತ್ತ ಈ ಸಿನಿಮಾ ಸಾಗಲಿದೆಯಂತೆ. ಹಳ್ಳಿಯ ಹೆಣ್ಣು ಮಕ್ಕಳು ಹೇಗೆ ಸಣ್ಣ ಸಣ್ಣ ಅಂಶಗಳಿಗೆ ಖುಷಿಪಡುತ್ತಾರೆ, ಜೊತೆಗೆ ಅವರಿಗೆ ಇರುವ ಸವಾಲುಗಳೇನು ಎಂಬ ಅಂಶವನ್ನು ಇಲ್ಲಿ ಹೇಳಲಾಗಿದೆಯಂತೆ.
ಇಡೀ ಸಿನಿಮಾ ಪಾವನಾ ಸುತ್ತವೇ ಸುತ್ತಲಿರುವುದರಿಂದ ಸಹಜವಾಗಿಯೇ ಪಾವನಾ ಖುಷಿಯಾಗಿದ್ದಾರೆ. ಈ ಪಾತ್ರಕ್ಕಾಗಿ ಅವರು ಉತ್ತರ ಕರ್ನಾಟಕ ಭಾಷೆಯನ್ನು ಕಲಿಯುತ್ತಿದ್ದಾರಂತೆ. ಈ ಮೂಲಕ ಪಾತ್ರಕ್ಕೆ ಒಗ್ಗಿಕೊಂಡಿದ್ದಾರೆ. ಅಂದಹಾಗೆ, ಪಾವನಾ ಚಿತ್ರರಂಗಕ್ಕೆ ಬಂದು 5 ವರ್ಷ ಆಗಿದೆ. ಈ ಐದು ವರ್ಷಗಳಲ್ಲಿ ಅವರು ಮಾಡಿರುವುದು 10 ಸಿನಿಮಾ. ಮಾಡಿರುವ ಸಿನಿಮಾಗಳ ಬಗ್ಗೆ ಪಾವನಾಗೆ ತೃಪ್ತಿ ಇದೆಯಂತೆ. ಸದ್ಯ ಪಾವನಾ ನಟಿಸಿರುವ “ಮೈಸೂರು ಡೈರೀಸ್’ ಹಾಗೂ “ಪ್ರಭುತ್ವ’ ಬಿಡುಗಡೆಯ ಹಂತಕ್ಕೆ ಬಂದಿದೆ.
“ಮೈಸೂರು ಡೈರೀಸ್’ನಲ್ಲಿ ಪಾವಾನಾ, ಎನ್‌ಆರ್‌ಐ ಪಾತ್ರ ಮಾಡಿದ್ದು, ಆಕೆ ಮೈಸೂರು ಸಿಟಿಗೆ ಬಂದಾಗ, ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬ ಅಂಶದೊಂದಿಗೆ ಕಥೆ ಸಾಗುತ್ತದೆಯಂತೆ. ಇನ್ನು, “ಪ್ರಭುತ್ವ’ ಚಿತ್ರದಲ್ಲಿ ಅವರು ಎನರ್ಜಿಯಾಗಿರುವಂತಹ ಹುಡುಗಿ. ಅತ್ತ ಕಡೆ ಹೀರೋ ಜೊತೆ ಮರಸುತ್ತುವ ಪಾತ್ರಗಳ ಜೊತೆ ಜೊತೆಗೆ ಪಾವನಾ ನಾಯಕಿ ಪ್ರಧಾನ ಚಿತ್ರಗಳಲ್ಲೂ ತಮ್ಮ ಪ್ರತಿಭೆ ತೋರಿಸಲು ಮುಂದಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ
MUST WATCH
ಹೊಸ ಸೇರ್ಪಡೆ
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Puttur: ಕಲ್ಪವೃಕ್ಷಕ್ಕೆ ಮರುಜೀವವಿತ್ತ ಎಂಜಿನಿಯರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.