ದರ್ಶನ್ ನನ್ನ ಮೇಲೆ ಹಲ್ಲೆ ನಡೆಸಿಲ್ಲ.. ನಾನು ಅವರ ದೊಡ್ಡ ಅಭಿಮಾನಿ: ಪವಿತ್ರಾ ಮಾಜಿ ಪತಿ
Team Udayavani, Jun 19, 2024, 1:01 PM IST
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ಪ್ರಕರಣ ಸಂಬಂಧ ಹಾಗೂ ಪ್ರಕರಣದ ಆಚೆಗೂ ನಾನಾ ವಿಚಾರಗಳು ಬೆಳಕಿಗೆ ಬರುತ್ತಿದೆ.
ಪವಿತ್ರಾ ಗೌಡ ಅವರಿಗೆ ಆಶ್ಲೀಲ ಮೆಸೇಜ್ ಮಾಡಿದ್ದಕ್ಕಾಗಿ ದರ್ಶನ್ ಅಭಿಮಾನಿ ಎಂದು ಹೇಳಲಾಗುತ್ತಿರುವ ರೇಣುಕಾಸ್ವಾಮಿಯನ್ನು ಎಲೆಕ್ಟ್ರಿಕ್ ಶಾಕ್ ಕೊಟ್ಟು, ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈಯಲಾಗಿತ್ತು. ಈ ಸಂಬಂಧ ಆರೋಪಿಗಳ ವಿಚಾರಣೆ ನಡೆಯುತ್ತಿದೆ.
ಈ ದರ್ಶನ್ ಅವರ ಮೇಲೆ ಈ ಹಿಂದೆ ಕೇಳಿ ಬಂದ ಆರೋಪಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಇದರಲ್ಲಿ ಪವಿತ್ರಾ ಗೌಡ ಅವರ ಮಾಜಿ ಸಂಜಯ್ ಸಿಂಗ್ ಅವರಿಗೆ ದರ್ಶನ್ ಅವರು ಧಮ್ಕಿ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಮಾಜಿ ಪತ್ನಿ ಪವಿತ್ರಾ ಗೌಡರಲ್ಲಿ ತನ್ನ ಮಗಳನ್ನು ಕಳುಹಿಸಿ ಕೊಡು ಎಂದು ಸಂಜಯ್ ಸಿಂಗ್ ಹಲವು ಬಾರಿ ಕೇಳಿಕೊಂಡಿದ್ದರಂತೆ. ಈ ವಿಚಾರದಲ್ಲಿ ದರ್ಶನ್ ಮಧ್ಯ ಪ್ರವೇಶಿಸಿ ಸಂಜಯ್ ಸಿಂಗ್ ಗೆ ಧಮ್ಕಿ ಹಾಕಿ, ಹಲ್ಲೆ ನಡೆಸಲು ಮುಂದಾಗಿದ್ದರು ಎನ್ನುವ ಆರೋಪಗಳು ಕೇಳಿ ಬಂದಿತ್ತು.
ಇದೀಗ ಈ ಬಗ್ಗೆ ಸಂಜಯ್ ಸಿಂಗ್ ಅವರೇ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. “ನನ್ನ ಮೇಲೆ ದರ್ಶನ್ ಅವರು ಹಲ್ಲೆ ನಡೆಸಿದ್ದಾರೆ ಎನ್ನುವುದು ಸುಳ್ಳು. ಮಗಳನ್ನು ಕಳುಹಿಸಿಕೊಡು ಎಂದು ಹಲವು ಬಾರಿ ಪವಿತ್ರಾಳಲ್ಲಿ ಕೇಳಿದ್ದೆ. ಕೋರ್ಟ್ ಮಗಳು ತಾಯಿ ಜೊತೆ ಇರಲಿ ಎಂದು ಹೇಳಿತ್ತು. ಹಾಗಾಗಿ ಸುಮ್ಮನಿದ್ದೆ. ನಾನು ದರ್ಶನ್ ಅವರನ್ನು ನೇರವಾಗಿ ಯಾವತ್ತೂ ನೋಡಿಲ್ಲ. ಅವರ ಜೊತೆ ಮಾತನಾಡಿಲ್ಲ. ನಾನು ಕೂಡ ಅವರ ದೊಡ್ಡ ಅಭಿಮಾನಿ. ನಿನ್ನೆಯಷ್ಟೇ ಮಗಳ ಜೊತೆ ಮಾತನಾಡಿದ್ದೇನೆ. ಅವಳು ಧೈರ್ಯವಾಗಿದ್ದಾಳೆ” ಎಂದು ಸಂಜಯ್ ಹೇಳಿದ್ದಾರೆ.
ಉತ್ತರ ಪ್ರದೇಶ ಮೂಲದ ಸಂಜಯ್ ಸಿಂಗ್ 2002 ರಲ್ಲಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಪವಿತ್ರಾ ಗೌಡ ಅವರ ಪರಿಚಯವಾಗಿ, ಇಬ್ಬರ ನಡುವೆ ಪ್ರೀತಿ ಆಗಿ ಮದುವೆಯಾದ ಇವರು, ಆ ಬಳಿಕ ದೂರವಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.