ಭರವಸೆ ಮೂಡಿಸಿದ ಮ್ಯೂಸಿಕಲ್ ಲವ್ ಸ್ಟೋರಿ ‘ರೇಮೊ’

Team Udayavani, Nov 8, 2022, 4:46 PM IST

ಭರವಸೆ ಮೂಡಿಸಿದ ಮ್ಯೂಸಿಕಲ್ ಲವ್ ಸ್ಟೋರಿ ‘ರೇಮೊ’

ಕೆಲವು ಸಿನಿಮಾಗಳ ಟ್ರೇಲರ್‌ಗಳನ್ನು ನೋಡಿದಾಗ ಸಿನಿಮಾ ಬಗ್ಗೆ ಒಂದು ನಿರೀಕ್ಷೆ ಮೂಡುತ್ತದೆ. ಸಿನಿಮಾದೊಳಗೊಂದು ಪ್ರೇಕ್ಷಕರಿಗೆ ಇಷ್ಟವಾಗುವ ಅಂಶವಿದೆ ಎಂಬ ಭಾವನೆ ಬರುತ್ತದೆ. ಸದ್ಯ ಆ ತರಹದ ಒಂದು ಭರವಸೆ ಮೂಡಿಸಿರುವ ಸಿನಿಮಾ “ರೇಮೊ’.

ಪವನ್‌ ಒಡೆಯರ್‌ ನಿರ್ದೇಶನದ “ರೇಮೊ’ ಚಿತ್ರ ನ.25ರಂದು ಬಿಡುಗಡೆಯಾಗುತ್ತಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ನಟ ಶಿವರಾಜ್‌ಕುಮಾರ್‌ ಟ್ರೇಲರ್‌ ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಸಖತ್‌ ಕಲರ್‌ಫ‌ುಲ್‌ ಆಗಿ ಮೂಡಿಬಂದಿರುವ ಟ್ರೇಲರ್‌ನಲ್ಲಿ ಒಂದು ಪ್ರೀತಿ, ಪ್ರೇಮ, ಜಿದ್ದು, ಅಹಂ… ಎಲ್ಲವೂ ಎದ್ದು ಕಾಣುತ್ತದೆ. ಇಡೀ ಸಿನಿಮಾವನ್ನು ಅದ್ಧೂರಿಯಾಗಿ ಕಟ್ಟಿಕೊಡಲಾಗಿದೆ. ಹೈವೋಲ್ಟೇಜ್‌ ಆ್ಯಕ್ಷನ್‌, ಕಲರ್‌ ಫುಲ್‌ ಸಾಂಗ್‌ ಕೂಡಾ ಈ ಸಿನಿಮಾದ ಪ್ಲಸ್‌ ಪಾಯಿಂಟ್‌ಗಳಾಗುವ ಲಕ್ಷಣಗಳು ಕಾಣುತ್ತಿವೆ. ದೊಡ್ಡ ಗ್ಯಾಪ್‌ನ ನಂತರ ನಿರ್ದೇಶಕ ಪವನ್‌ ಒಡೆಯರ್‌ ಒಂದು ಔಟ್‌ ಅಂಡ್‌ ಔಟ್‌ ಲವ್‌ಸ್ಟೋರಿಯನ್ನು ಕಟ್ಟಿಕೊಟ್ಟಿದ್ದಾರೆ.

ಟ್ರೇಲರ್‌ನಲ್ಲಿರುವ, “ಪ್ರೀತಿ ಹುಟ್ಟೋದಕ್ಕೆ ಕಾರಣನೇ ಬೇಕಾಗಿಲ್ಲ, ಒಂದು ವೇಳೆ ಕಾರಣವಿದ್ದು ಪ್ರೀತಿ ಹುಟ್ಟಿದ್ರೆ, ಅದು ಪ್ರೀತಿಯಲ್ಲ, ಸ್ವಾರ್ಥ…’, “ಜನಕ್ಕೆ ಏನು ಇಷ್ಟ ಆಗುತ್ತೋ ಅದನ್ನು ಮಾಡೋದರ ಬದಲು ನಾನ್‌ ಏನ್‌ ಮಾಡ್ತಿನೋ ಅದನ್ನ ಜನ ಇಷ್ಟಪಡಬೇಕು..’ ಎಂಬಂತಹ ಡೈಲಾಗ್‌ಗಳು ಗಮನ ಸೆಳೆಯುತ್ತವೆ.

ನಾಯಕ ಇಶಾನ್‌ ಸಖತ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದು, ನಾಯಕಿ ಆಶಿಕಾ ರಂಗನಾಥ್‌ ಕೂಡಾ ಇಲ್ಲಿ ಎರಡು ಶೇಡ್‌ನ‌ ಪಾತ್ರದಲ್ಲಿ ಕಾಣಿಸಿಕೊಂಡಂತಿದೆ. ಸಿ.ಆರ್‌. ಮನೋಹರ್‌ ನಿರ್ಮಿಸಿದ್ದಾರೆ.

ಒಬ್ಬ ಹೀರೋಗೆ ಇರಬೇಕಾದ ಎಲ್ಲಾ ಲಕ್ಷಣಗಳು ಇಶಾನ್‌ ಅವರಿಗಿದೆ. ಕಮಲ್‌ ಹಾಸನ್‌, ಹೃತಿಕ್‌ ರೋಶನ್‌ ಥರಹ ಕನ್ನಡದಲ್ಲೂ ಒಬ್ಬ ನಟ ಬಂದಿದ್ದಾರೆ. ಗ್ಲಾಮರ್‌ ಮತ್ತು ಪರ್ಫಾರ್ಮೆನ್ಸ್‌ ಎರಡೂ ಇರುವಂಥ ನಟಿ ಆಶಿಕಾ. ಟ್ರೇಲರ್‌ ನೋಡಿದ ಮೇಲಂತೂ ನನಗೆ ಸಿನಿಮಾ ಮೇಲೆ ತುಂಬಾ ಕಾನ್ಫಿಡೆನ್ಸ್‌ ಇದೆ. ನಾನು ಸಿನಿಮಾ ನೋಡುತ್ತೇನೆ. ಮುಹೂರ್ತಕ್ಕೆ ಬಂದಿದ್ದಾರೆ. ಈಗ ಟ್ರೇಲರ್‌ ಬಿಡುಗಡೆಗೆ ಬಂದಿದ್ದೇನೆ. 25ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ. ಸಿನಿಮಾ ದೊಡ್ಡ ಸಕ್ಸಸ್‌ ಆಗಲಿ.-  ಶಿವರಾಜ ಕುಮಾರ್‌, ನಟ

ರೇಮೊ ಸಿನಿಮಾದ ಮುಹೂರ್ತದ ವೇಳೆ ಶಿವಣ್ಣ ಬಂದಿದ್ದರು. ಶಿವಣ್ಣ ಅವರನ್ನ ಫಾಲೋ ಮಾಡುವ ಜನ ನಿನ್ನನ್ನು ಕೈ ಬಿಡಲ್ಲ ಅಂಥ ಇಶಾನ್‌ಗೆ ಹೇಳುತ್ತಿದ್ದೆ. ಮೊದಲಿನಿಂದಲೂ ಶಿವಣ್ಣ ಅವರ ಪ್ರೀತಿ ವಿಶ್ವಾಸ ಹಾಗೆ ಇದೆ. ಕೋವಿಡ್‌ ನಿಂದಾಗಿ ಸಿನಿಮಾ ಬಿಡುಗಡೆ ತಡವಾಯಿತು. ತಡವಾದರೂ, ತುಂಬಾ ಚೆನ್ನಾಗಿ ಸಿನಿಮಾ ಬಂದಿದೆ.- ಸಿ. ಆರ್‌. ಮನೋಹರ್‌, ನಿರ್ಮಾಪಕ

ರೇಮೊ ಶುರುವಾಗಿ ಮೂರು ವರ್ಷವಾಯಿತು. ನನಗೆ ಶಿವಣ್ಣ ತುಂಬಾ ದೊಡ್ಡ ಪ್ರೇರಣೆ. “ವಜ್ರಕಾಯ’ ಸಿನಿಮಾದ ಸಮಯದಲ್ಲಿ ಶಿವಣ್ಣ ಅವರೇ ಸಿನಿಮಾಕ್ಕೆ ಬರುವಂತೆ ಹೇಳಿದ್ದರು. ಮುಂದೆ ನಾನು ಎಷ್ಟೇ ಸಿನಿಮಾ ಮಾಡಿದರೂ “ರೇಮೊ’ ಒಂದು ವಿಭಿನ್ನ ಸಿನಿಮಾವಾಗಿ ಉಳಿಯಲಿದೆ.- ಇಶಾನ್‌, ನಾಯಕ ನಟ

ಆರಂಭದಿಂದಲೂ ನನಗೆ ಖುಷಿಕೊಟ್ಟ ಸಿನಿಮಾ. ಇದೊಂದು ಕಂಪ್ಲೀಟ್‌ ಮ್ಯೂಸಿಕಲ್‌ ಲವ್‌ ಸ್ಟೋರಿ. ಪ್ರೀತಿಯಲ್ಲಿ ಬಿದ್ದವರಿಗೆ, ಪ್ರೀತಿ ಮಾಡ ಬೇಕೆಂದಿರುವವರಿಗೆ, ಪ್ರೀತಿಯಲ್ಲಿ ಸೋತವರಿಗೆ ಹೀಗೆ ಎಲ್ಲರಿಗೂ “ರೇಮೊ’ ಇಷ್ಟವಾಗುವಂಥ ಸಿನಿಮಾವಾಗಲಿದೆ. ರೇವಂತ್‌ ಮತ್ತು ಮೋಹನಾ ಎಂಬ ಎರಡು ಪಾತ್ರಗಳನ್ನು ಇಶಾನ್‌ ಮತ್ತು ಆಶಿಕಾ ತುಂಬಾ ಚೆನ್ನಾಗಿ ನಿರ್ವಹಿಸಿದ್ದಾರೆ.;-  ಪವನ್‌ ಒಡೆಯರ್‌, ನಿರ್ದೇಶಕ

ಟಾಪ್ ನ್ಯೂಸ್

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.