ಅಭಿಷೇಕ್‌ ಚಿತ್ರ ನಿರ್ದೇಶಿಸುವ ಬಗ್ಗೆ ಪವನ್‌ ಒಡೆಯರ್‌ ಅನುಮಾನ

Team Udayavani, Jan 10, 2018, 10:42 AM IST

pavan.jpg

ಅಂಬರೀಷ್‌ ಪುತ್ರ ಅಭಿಷೇಕ್‌ ಚಿತ್ರವನ್ನು ಪವನ್‌ ಒಡೆಯರ್‌ ನಿರ್ದೇಶಿಸುತ್ತಾರಂತೆ… ಹೀಗಂತ ಗಾಂಧಿನಗರಷ್ಟೇ ಅಲ್ಲ, ರಾಜ್ಯದೆಲ್ಲೆಡೆ ಹರಿದಾಡುತ್ತಿರುವ ಸುದ್ದಿ. ಅಸಲಿಗೆ ವಿಷಯವೇನೆಂದರೆ, ಅಭಿಷೇಕ್‌ ಚಿತ್ರವನ್ನು ಪವನ್‌ ಒಡೆಯರ್‌ ನಿರ್ದೇಶಿಸುವುದೇ ಅನುಮಾನ. ಹೌದು, ಈ ಮಾತನ್ನ ಸ್ವತಃ ಪವನ್‌ ಒಡೆಯರ್‌ ಅವರೇ ಸ್ಪಷ್ಟಪಡಿಸಿದ್ದಾರೆ. ಅಭಿಷೇಕ್‌ ಚಿತ್ರಕ್ಕೆ ಪವನ್‌ ಒಡೆಯರ್‌ ಆ್ಯಕ್ಷನ್‌ ಕಟ್‌ ಹೇಳುತ್ತಾರೆ ಎಂಬ ಸುದ್ದಿ ಅವರಿಗೇ ಗೊತ್ತಿಲ್ಲ!

ಆದರೆ, ಒಂದಂತೂ ನಿಜ. ಮಾತುಕತೆ ಆಗಿದ್ದು ನಿಜ, ಕಥೆ ಹೇಳಿದ್ದೂ ನಿಜ. ಆದರೆ, ಯಾವುದೂ ಅಂತಿಮವಾಗಿಲ್ಲ ಅನ್ನೋದು ಅಷ್ಟೇ ಸತ್ಯ. ಹಾಗಾಗಿ, ಅಭಿಷೇಕ್‌ ಚಿತ್ರಕ್ಕೆ ಪವನ್‌ ಒಡೆಯರ್‌ ಆ್ಯಕ್ಷನ್‌-ಕಟ್‌ ಹೇಳುವುದು ಸದ್ಯ ಗೊಂದಲವಂತೂ ಹೌದು. ಈ ಕುರಿತು, “ಉದಯವಾಣಿ’ ಪವನ್‌ ಒಡೆಯರ್‌ ಅವರನ್ನೇ ಮಾತನಾಡಿಸಿದಾಗ, ಹೇಳಿದ್ದಿಷ್ಟು. “ಆ ಸುದ್ದಿ ಹೇಗೆ ಹರಡಿತೋ ಗೊತ್ತಿಲ್ಲ. ಚರ್ಚೆ ಆಗಿದ್ದು, ಕಥೆ ಹೇಳಿದ್ದೆಲ್ಲವೂ ಹೌದು.

ಆದರೆ, ನಿರ್ದೇಶನ ಮಾಡುವ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಯಾಕೆ ಹರಿಬಿರಿಯಾಗಿ ಸುದ್ದಿ ಹರಡಿಕೊಂಡಿತೋ ಗೊತ್ತಿಲ್ಲ. ಅವರಿಗೆ ಹೇಳಿದ್ದು ದೊಡ್ಡ ಕಥೆ. ಅದೊಂದು ಬೇರೆ ರೀತಿಯಾಗಿರುವಂತಹ ಜಾನರ್‌. ಅದಕ್ಕೆ ಬಹಳ ತಯಾರಿ ಬೇಕು. ಕಥೆಯಲ್ಲೇ ಗೊಂದಲ ಇರುವಾಗ, ಇನ್ನು ನಿರ್ದೇಶನ ಮಾಡೋದೆಲ್ಲಿ? ಅಂತಹ ಕಥೆ ಇಟ್ಟುಕೊಂಡು ಅವಸರದಲ್ಲಿ ಬೇಗ ಮಾಡೋಕ್ಕೂ ಆಗೋದಿಲ್ಲ. ಅಭಿಷೇಕ್‌ ಇನ್ನೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಅವರ ತಯಾರಿಗೇ ತಿಂಗಳುಗಟ್ಟಲೇ ಬೇಕು. ಹೀಗಿರುವಾಗ, ಅವರು ಕಥೆ ಒಪ್ಪಿ, ನಾನು ನಿರ್ದೇಶನ ಮಾಡುತ್ತಿದ್ದೇನೆ ಅಂತೆಲ್ಲಾ ಸುದ್ದಿಯಾಯ್ತು. ಅದ್ಹೇಗೆ ಅನೌನ್ಸ್‌ ಆಗೋಯ್ತು ಗೊತ್ತಿಲ್ಲ. ನನಗೇ ಸ್ಪಷ್ಟತೆ ಸಿಕ್ಕಿಲ್ಲ. ವಿನಾಕಾರಣ ಸುದ್ದಿಯಾಗಿ, ಪೇಚಿಗೆ ಸಿಲುಕಿದಂತಾಗಿದೆ. ಈ ಸುದ್ದಿ ಹರಡಿದಾಗಿನಿಂದಲೂ ಅಂಬರೀಶ್‌ ಅವರ ಅಭಿಮಾನಿಗಳಿಂದ ಫೋನ್‌ ಕರೆಗಳು ಬರುತ್ತಿವೆ. ಪ್ರತಿ ದಿನ ಅವರೊಂದಿಗೆ ಮಾತಾಡುವುದೇ ಆಗಿದೆ.

ಹಾಗೆ ಮಾಡಿ , ಹೀಗೆ ತೋರಿಸಿ ಅಂತೆಲ್ಲಾ ಮಾತುಗಳನ್ನು ಕೇಳುತ್ತಿದ್ದೇನೆ. ನಿಜ ಹೇಳುವುದಾದರೆ, ಅಭಿಷೇಕ್‌ ಅವರಿಗೂ ಮೊದಲ ಸಿನಿಮಾ ಮುಖ್ಯವಾಗಿರಬೇಕು. ಎಲ್ಲಕ್ಕಿಂತಲೂ ಹೆಚ್ಚಾಗಿ ನನ್ನ ಲೈಫ‌ು ಅದರಲ್ಲಿದೆ. ಆ ಬಗ್ಗೆ ಇನ್ನೂ ಏನೇನೂ ಆಗಿಲ್ಲ, ಈಗಲೇ ಇಲ್ಲದ್ದನ್ನೂ ಹೇಳಲು ಆಗೋದಿಲ್ಲ. ಆ ಚಿತ್ರ ನಿರ್ದೇಶನ ಮಾಡೋದೇ ಅನುಮಾನ. ಯಾಕೆಂದರೆ, ಯಾವುದೇ ಚರ್ಚೆಗಳು ಪರಿಪೂರ್ಣಗೊಂಡಿಲ್ಲ’ ಎಂಬುದು ಪವನ್‌ ಒಡೆಯರ್‌ ಮಾತು.

ಮೊದಲು ಪುನೀತ್‌ ಸಿನಿಮಾ: ಹಾಗಾದರೆ, ಪವನ್‌ ಒಡೆಯರ್‌ ಮುಂದೇನು ಮಾಡುತ್ತಾರೆ ಎಂದರೆ, “ಸದ್ಯಕ್ಕೆ ನಾನು ರಾಕ್‌ಲೈನ್‌ ವೆಂಕಟೇಶ್‌ ಅವರ ಬ್ಯಾನರ್‌ನಲ್ಲಿ ಪುನೀತ್‌ರಾಜ್‌ಕುಮಾರ್‌ ಚಿತ್ರ ಮಾಡುತ್ತಿದ್ದೇನೆ. ಅದಾದ ಮೇಲೆ ಯಶ್‌ ಅವರಿಗೊಂದು ಚಿತ್ರ ಮಾಡಬೇಕಿದೆ’ ಎನ್ನುತ್ತಾರೆ ಅವರು. “ಹೌದು, “ಗೂಗ್ಲಿ’ ಬಳಿಕವೇ ಜಯಣ್ಣ ಅವರಿಗೆ ಯಶ್‌ ಜತೆ ಚಿತ್ರ ಮಾಡಿಕೊಡುವ ಕುರಿತು ಮಾತುಕತೆಯಾಗಿತ್ತು. ಅದಿನ್ನೂ ದೂರವಿದೆ.

ಅದಕ್ಕೂ ಮುನ್ನ, ಪುನೀತ್‌ ರಾಜಕುಮಾರ್‌ ಚಿತ್ರ ಆಗಲಿದೆ. ಅದು ಸ್ವಮೇಕ್‌ ಕಥೆಯಾಗಿದ್ದು, ಕ್ಲೈಮ್ಯಾಕ್ಸ್‌ ಸ್ವಲ್ಪ ಬದಲಾಗಬೇಕಿದೆ. ಆ ಕುರಿತು ಅಪ್ಪು ಸರ್‌ ಜತೆ ಚರ್ಚೆಯಾಗುತ್ತಿದೆ. ಅದಾದ ಮೇಲೆ ಯಾವಾಗ ಸಿನಿಮಾ ಅನ್ನುವುದಕ್ಕೂ ಸ್ಪಷ್ಟ ಚಿತ್ರಣವಿಲ್ಲ. ಯಾಕೆಂದರೆ, ಶಶಾಂಕ್‌ ಅವರ ನಿರ್ದೇಶನದಲ್ಲಿ ಅಪ್ಪು ಸರ್‌ ಚಿತ್ರ ಆಗಬೇಕಿದೆ.

ಅದು ಮೊದಲೋ, ರಾಕ್‌ಲೈನ್‌ ಅವರ ಚಿತ್ರ ಮೊದಲೋ ಗೊತ್ತಿಲ್ಲ. ಒಟ್ನಲ್ಲಿ, ವಿನಾಕಾರಣ ಸುದ್ದಿಗಳು ಹರಿದಾಡಿ ನಾನು ತಗಲಾಕೊಂಡಂತಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮಾರ್ಚ್‌ ವೇಳೆಗೆ ರಾಕ್‌ಲೈನ್‌ ಬ್ಯಾನರ್‌ನಲ್ಲಿ ಸಿನಿಮಾ ಶುರುವಾಗಬಹುದು. ಇಲ್ಲವಾದರೆ, ಮುಂದಕ್ಕೂ ಹೋಗಬಹುದು.

ಸಂತೋಷ್‌ ಆನಂದರಾಮ್‌ ಅವರ ಜತೆ ಜೂನ್‌ ಅಥವಾ ಜುಲೈನಲ್ಲಿ ಅಪ್ಪು ಸರ್‌ ಚಿತ್ರ ಶುರುವಾಗಲಿದೆ. ನನ್ನ ಚಿತ್ರ ಯಾವಾಗ ಅಂತ ಗೊಂದಲದಲ್ಲಿದ್ದೇನೆ. ಈ ವರ್ಷ ಸಿನಿಮಾ ಆಗುವುದಂತೂ ನಿಜ. ಆಗಸ್ಟ್‌ನಲ್ಲಿ ಮದುವೆ ನಡೆಯಲಿದೆ. ಅದರ ಒಳಗೆ ಒಂದು ಸಿನಿಮಾ ಮಾಡ್ತೀನಿ. ಯಾವಾಗ, ಯಾರದ್ದು ಅನ್ನುವುದನ್ನು ಇಷ್ಟರಲ್ಲೇ ಹೇಳ್ತೀನಿ’ ಅಂತ ಹೇಳಿ ಸುಮ್ಮನಾಗುತ್ತಾರೆ ಪವನ್‌.

* ಅಭಿ ಚಿತ್ರ ನಿರ್ದೇಶಿಸುತ್ತಿರುವ ಸುದ್ದಿ ಹೇಗೆ ಹಬ್ಬಿತೋ ಗೊತ್ತಿಲ್ಲ
* ಅಭಿ ಚಿತ್ರ ನಿರ್ದೇಶನ ಮಾಡುವುದು ಅನುಮಾನ
* ಮಾತುಕತೆ ಆಗಿದ್ದು ನಿಜ, ಯಾವುದೂ ಅಂತಿಮವಾಗಿಲ್ಲ
* ಅಭಿಷೇಕ್‌ ತಯಾರಿಗೇ ತಿಂಗಳುಗಟ್ಟಲೇ ಬೇಕು
* ರಾಕ್‌ಲೈನ್‌ ಬ್ಯಾನರ್‌ನಲ್ಲಿ ಪುನೀತ್‌ ಚಿತ್ರ ನಿರ್ದೇಶನ
* ಅದಾದ ಮೇಲೆ ಯಶ್‌ಗೆ ಚಿತ್ರ ಮಾಡಬೇಕಿದೆ
* ಮದುವೆ ಒಳಗೆ ಒಂದು ಸಿನಿಮಾ ಮಾಡ್ತೀನಿ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್‌ ನೀಲ್‌

Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್‌ ನೀಲ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

pratap-Simha

Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್‌ ಸಿಂಹ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Udupi-D.K: ಕರಾವಳಿಯ ದೇಗುಲ, ಬೀಚ್‌ಗಳಲ್ಲಿ ಭಾರೀ ಜನಸಂದಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.