ಸಾಹೇಬ ಪ್ರೀಮಿಯರ್ ಶೋಗೆ ಜನವೋ ಜನ
Team Udayavani, Aug 28, 2017, 12:43 PM IST
ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅಭಿನಯದ ಮೊದಲ ಚಿತ್ರ “ಸಾಹೇಬ’, ಗಣಪತಿ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಎಲ್ಲಾ ಕಡೆ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳು ವ್ಯಕ್ತವಾಗುತ್ತಿವೆ.
ಈ ಮಧ್ಯೆ ಚಿತ್ರತಂಡವು ಚಿತ್ರರಂಗದ ಸೆಲೆಬ್ರಿಟಿಗಳಿಗಾಗಿಯೇ ಒಂದು ವಿಶೇಷ ಪ್ರದರ್ಶನವನ್ನು ಆಯೋಜಿಸಿತ್ತು. ಈ ಪ್ರೀಮಿಯರ್ ಪ್ರದರ್ಶನದಲ್ಲಿ ರವಿಚಂದ್ರನ್ ಅವರು ತಮ್ಮ ಕುಟುಂಬದವರೊಡನೆ ಚಿತ್ರ ನೋಡಿದರು.
ರವಿಚಂದ್ರನ್ ಅಲ್ಲದೆ, ಅಂದು ಕನ್ನಡ ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಚಿತ್ರವನ್ನು ನೋಡಿದ್ದಾರೆ. ಯಶ್, ರಾಧಿಕಾ ಪಂಡಿತ್, ಹಂಸಲೇಖ, “ನೆನಪಿರಲಿ’ ಪ್ರೇಮ್, ವಿನಯ್ ರಾಜಕುಮಾರ್, ಧನಂಜಯ್, ಭಗವಾನ್, ಸತ್ಯ ಹೆಗಡೆ, ಮಂಜು ಮಾಂಡವ್ಯ, ಪವನ್ ಒಡೆಯರ್, ಹಾಗೂ
-ಕವಿರಾಜ್, ಅನೀಶ್ ತೇಜೇಶ್ವರ್, ನೇಹಾ ಪಾಟೀಲ್, ಸಿಂಧು ಲೋಕನಾಥ್, ನಂದಕಿಶೋರ್, ಎ.ಪಿ. ಅರ್ಜುನ್, ತರುಣ್ ಸುಧೀರ್, ಎಸ್.ಎ. ಚಿನ್ನೇಗೌಡ, ಹರ್ಷಿಕಾ ಪೂಣಾತ್ಛ, ಕಾವ್ಯಾ ಶಾ ಸೇರಿದಂತೆ ಹಲವರು ಚಿತ್ರವನ್ನು ನೋಡಿದ್ದಷ್ಟೇ ಅಲ್ಲ, ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
“ಸಾಹೇಬ’ ಚಿತ್ರದಲ್ಲಿ ಮನೋರಂಜನ್ ಜೊತೆಗೆ ಸಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ನಟಿಸಿದ್ದಾರೆ. ಹಿರಿಯ ನಟಿ ಲಕ್ಷ್ಮಿ ಸಹ ಒಂದು ಬಹಳ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಭರತ್ ನಿರ್ದೇಶಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಕೂಡಾ ಅವರದ್ದೇ.
ಇನ್ನು ಜಯಣ್ಣ ಮತ್ತು ಭೋಗೇಂದ್ರ ಈ ಚಿತ್ರದ ನಿರ್ಮಾಪಕರು. ರವಿಚಂದ್ರನ್ ಅವರ ಖಾಯಂ ಕ್ಯಾಮೆರಾಮ್ಯಾನ್ ಆಗಿರುವ ಜಿ.ಎಸ್.ವಿ. ಸೀತಾರಾಂ ಅವರು ಈ ಚಿತ್ರದ ಛಾಯಾಗ್ರಾಹಕರು. ಹರಿಕೃಷ್ಣ ಚಿತ್ರಕ್ಕೆ ಹಾಡುಗಳನ್ನು ಸಂಯೋಜಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.