ಏಳು ವರ್ಷಗಳ ನಂತರ ಪೆಟ್ರೋಮ್ಯಾಕ್ಸ್ಗೆ ಮರುಜೀವ
Team Udayavani, Sep 30, 2020, 3:56 PM IST
ಪೆಟ್ರೋಮ್ಯಾಕ್ಸ್- ಹೀಗೊಂದು ಸಿನಿಮಾದ ಹೆಸರನ್ನು ನೀವು ಐದಾರು ವರ್ಷಗಳ ಹಿಂದೆ ಕೇಳಿರಬಹುದು. ನೀನಾಸಂ ಸತೀಶ್ ನಾಯಕರಾಗಿರುವ ಈ ಚಿತ್ರಕ್ಕೆ ಮುಹೂರ್ತ ನಡೆದಿತ್ತು. ವಿಜಯ ಪ್ರಸಾದ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುವುದಾಗಿ ಹೇಳಲಾಗಿತ್ತು ಕೂಡಾ. ಆದರೆ ಅದೇನಾಯಿತೋ ಏನೋ, ಆ ನಂತರ ಆ ಚಿತ್ರ ಮುಂದುವರೆಯಲೇ ಇಲ್ಲ. ಸತೀಶ್ ಹಾಗೂ ವಿಜಯ ಪ್ರಸಾದ್ ಬೇರೆ ಬೇರೆ ಚಿತ್ರಗಳಲ್ಲಿ ಬಿಝಿಯಾದರು.
ಈಗ ಮತ್ತೆ “ಪೆಟ್ರೋಮ್ಯಾಕ್ಸ್’ಗೆ ಜೀವ ಬಂದಿದೆ. ವಿಜಯ ಪ್ರಸಾದ್ ಹಾಗೂ ಸತೀಶ್ ಕಾಂಬಿನೇಶನ್ನಲ್ಲಿ ಮೂಡಿಬರುತ್ತಿರುವ ಈ ಚಿತ್ರ ಅಕ್ಟೋಬರ್ನಲ್ಲಿ ಸೆಟ್ಟೇರಲಿದೆ. ಐದಾರು ವರ್ಷಗಳ ಹಿಂದೆ ಮಾಡಿಕೊಂಡ ಕಥೆಯಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂದರೆ, ಖಂಡಿತಾ ಆಗಿದೆ ಎಂಬ ಉತ್ತರ ಚಿತ್ರತಂಡದಿಂದ ಬರುತ್ತದೆ. ಟೈಟಲ್ ಬಿಟ್ಟು, ಮಿಕ್ಕಂತೆ ಎಲ್ಲವನ್ನೂ ಚಿತ್ರತಂಡ ಬದಲಾವಣೆ ಮಾಡಿಕೊಂಡಿದೆ. ಇ
ಷ್ಟು ವರ್ಷಗಳಲ್ಲಿ ನೀನಾಸಂ ಸತೀಶ್ ಬೆಳೆದ ರೀತಿ, ಅವರ ಇಮೇಜ್ ಸೇರಿದಂತೆ ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಥೆಯಲ್ಲಿ ಬದಲಾವಣೆ ಮಾಡಲಾಗಿದೆಯಂತೆ. ಪೆಟ್ರೋಮ್ಯಾಕ್ಸ್ನಲ್ಲಿ ನಾಲ್ಕು ಅನಾಥ ಹುಡುಗರ ಕಥೆಯನ್ನು ಹೇಳಲು ವಿಜಯ ಪ್ರಸಾದ್ ಹೊರಟಿದ್ದಾರೆ. ಚಿತ್ರದಲ್ಲಿ ಸತೀಶ್ ಜೊತೆಗೆ “ಗೊಂಬೆಗಳ ಲವ್’ ಖ್ಯಾತಿಯ ಅರುಣ್, ನಾಗಭೂಷಣ್ಕೂಡಾ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಚಿತ್ರದಲ್ಲೊಂದು ಸಂದೇಶದ ಜೊತೆಗೆ ಸಖತ್ ಫನ್ನಿ ಅಂಶಗಳೊಂದಿಗೆ ಸಾಗುತ್ತದೆಯಂತೆ.
ಅದಿತಿ ನಾಯಕಿ ಅಲ್ಲ: “ಪೆಟ್ರೋಮ್ಯಾಕ್ಸ್’ ಚಿತ್ರಕ್ಕೆ ಅದಿತಿ ನಾಯಕಿ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ, ಅದಿತಿ ಆ ಚಿತ್ರದಲ್ಲಿ ನಟಿಸುತ್ತಿಲ್ಲ. ಅದಿತಿ ಬೇರೆ ಚಿತ್ರಗಳಲ್ಲಿ ಬಿಝಿಯಾಗಿರುವುದರಿಂದ ಚಿತ್ರತಂಡ ಈಗ ಬೇರೆ ನಾಯಕಿಯ ತಲಾಶ್ನಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kashima; ನೀ ನಂಗೆ ಎಂದ ಕಾಶಿಮಾ…; ನಾಯಕಿ ಹೆಸರು ಘೋಷಣೆ
Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್ ಸ್ಟಾರ್
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.