![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Dec 30, 2020, 7:02 PM IST
ಮುಂಬೈ: ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 2 ನಲ್ಲಿ ತನ್ನ ಪಾತ್ರವನ್ನು ಸರಳಗೊಳಿಸುವ ಮೂಲಕ ನನ್ನನ್ನು ಮುಜುಗರಕ್ಕೆ ಈಡು ಮಾಡಬೇಡಿ ಎಂದು ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಹೇಳಿಕೆ ನೀಡಿದ್ದಾರೆ.
ಕೆಜಿಫ್ ಚಾಪ್ಟರ್ 2 ನ ಅಧೀರನ ಪಾತ್ರದಾರಿಯಾಗಿ ಕಾಣಿಸಿಕೊಳ್ಳಲಿರುವ ನಟ ಸಂಜಯ್ ದತ್ತ್ ಇತ್ತೀಚೆಗಷ್ಟೆ ಕ್ಯಾನ್ಸರ್ ಕಾಯಿಲೆಯನ್ನು ಗೆದ್ದು ಹೈದರಾಬಾದ್ ಗೆ ಚಿತ್ರೀಕರಣಕ್ಕಾಗಿ ಆಗಮಿಸಿದ್ದರು.
ನಮಗೆ ನಟ ಸಂಜಯ್ ದತ್ ಅವರ ಆರೋಗ್ಯ ಅತೀ ಮುಖ್ಯ ಅವರು ಆರಾಮದಾಯಕವಾಗಿ ಇರಬೇಕು ಹಾಗಾಗಿ ಆದಷ್ಟು ಸರಳವಾದ ಸಾಹಸಮಯ ದೃಶ್ಯಗಳನ್ನು ಅವರಿಂದ ಮಾಡಿಸಬೇಕು ಎಂದು ಚಿತ್ರತಂಡ ನಿರ್ಧರಿಸಿತ್ತು ಎಂದು ತಿಳಿದು ಬಂದಿದೆ.
ಚಿತ್ರತಂಡದ ಈ ನಿರ್ದಾರಕ್ಕೆ ಉತ್ತರ ನೀಡಿರುವ ನಟ ಸಂಜಯ್ ದತ್ ನನಗೆ ಸರಳವಾದ ಸಾಹಸಮಯ ದೃಶ್ಯಗಳನ್ನು ಮಾಡುವಂತೆ ಹೇಳಿ ನನ್ನನ್ನು ಮುಜುಗರಕ್ಕೆ ಈಡು ಮಾಡಬೇಡಿ. ನಾನು ಚಿತ್ರದ ಕಥೆಯಲ್ಲಿ ಯಾವ ರೀತಿಯ ಪಾತ್ರವಿದೆಯೋ ಹಾಗೆಯೇ ನಟಿಸುತ್ತೇನೆ . ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಚಿತ್ರದಲ್ಲಿನ ಯಾವುದೇ ಸಾಹಸಮಯ ದೃಶ್ಯಗಳಲ್ಲಿ ಬದಲಾವಣೆ ಮಾಡುವುದು ಬೇಡ. ನನ್ನ ಪಾತ್ರದ ಎಲ್ಲಾ ಸಾಹಸ ದೃಶ್ಯಗಳನ್ನು ನಾನೇ ಮಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆ ಇಟ್ಟ ಶವೋಮಿ ಎಂಐ 11
ಸಂಜಯ್ ದತ್ ಅವರ ಆರೋಗ್ಯದ ಹಿನ್ನೆಲೆಯಲ್ಲಿ ನಟ ಯಶ್ ಸಂಜಯ್ ದತ್ ಅವರು ಇರುವ ಸ್ಥಳಗಳಲ್ಲಿ ಧೂಳು ಇರದ ರೀತಿ ನೋಡಿಕೊಳ್ಳಿ ಮತ್ತು ಅವರು ನಟಿಸುವುದಕ್ಕಿಂತ ಮೊದಲು ಆ ಜಾಗವನ್ನು ಸ್ಯಾನಿಟೈಸ್ ಮಾಡಿ ಎಂದಿದ್ದರು. ಆದರೆ ಇದಕ್ಕೆ ಒಪ್ಪಿಗೆ ನೀಡದ ನಟ ಸಂಜಯ್ ದತ್, ಪ್ರೇಕ್ಷಕರು ತುಂಬಾ ಬುದ್ದಿವಂತರು ಅವರಿಗೆ ದೃಶ್ಯಗಳಲ್ಲಿ ಚೀಟಿಂಗ್ ಮಾಡಿರುವುದು ಗೊತ್ತಾಗುತ್ತದೆ. ಹಾಗಾಗಬಾರದು ನಾನು ಕಥೆಯಲ್ಲಿ ನನ್ನ ಪಾತ್ರ ಹೇಗಿದೆ ಹಾಗೆಯೇ ನಟಿಸುತ್ತೇನೆ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.