ದಯವಿಟ್ಟು ನನ್ನನ್ನು ಬಿಟ್ಟು ಬಿಡಿ, ನನ್ನ ಹೇಳಿಕೆ ತಿರುಚಬೇಡಿ
Team Udayavani, Oct 29, 2018, 11:19 AM IST
ಕನ್ನಡ ಚಿತ್ರರಂಗದಲ್ಲಿ “ಮಿ ಟೂ’ ವೇದಿಕೆಯಡಿ ಮೊದಲು ಧ್ವನಿ ಎತ್ತಿದ್ದು ನಟಿ ಸಂಗೀತಾ ಭಟ್. ಸುಮಾರು 15 ದಿನಗಳ ಹಿಂದೆ ಸಂಗೀತಾ ಬಟ್, ಚಿತ್ರರಂಗದ ತನ್ನ ಹತ್ತು ವರ್ಷದ ಕೆರಿಯರ್‌ನಲ್ಲಿ ಅನುಭವಿಸಿದ ಕೆಲವು ನೋವುಗಳನ್ನು ಫೇಸ್‌ಬುಕ್‌ನಲ್ಲಿ ಹೇಳಿಕೊಳ್ಳುವ ಮೂಲಕ ದೊಡ್ಡ ಸಂಚಲಕ್ಕೆ ನಾಂದಿಯಾಡಿದ್ದರು. ಹಾಗಂತ ಸಂಗೀತಾ ಯಾವುದೇ ನಟ, ನಿರ್ದೇಶಕ, ನಿರ್ಮಾಪಕನ ಹೆಸರು ಹೇಳದೇ ಕೇವಲ ಕೆಟ್ಟ ಅನುಭವವನ್ನಷ್ಟೇ ಹಂಚಿಕೊಂಡಿದ್ದರು. ಆದರೆ ಬೇರೆ ರೂಪ ಪಡೆದುಕೊಂಡಿದ್ದು, ಸ್ವತಃ ಸಂಗೀತಾ ಭಟ್ ಅದರಿಂದ ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ.
ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು, ಸಂಗೀತಾ ಭಟ್ ಫೇಸ್‌ಬುಕ್ ಸ್ಟೇಟಸ್ ಇಟ್ಟುಕೊಂಡು ಯಾರ್ಯಾರೋ ನಟ, ನಿರ್ದೇಶಕರ ಹೆಸರುಗಳನ್ನು ಊಹಿಸಿಕೊಂಡು ಸುದ್ದಿ ಮಾಡುತ್ತಿದ್ದಾರೆ. ಇದು ಸಂಗೀತಾ ಭಟ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಷ್ಟೇ ಅಲ್ಲದೇ, “ಮಿ ಟೂ’ ವೇದಿಕೆಯಡಿ ಸಂಗೀತಾ ತಮಗಾದ ಕೆಟ್ಟ ಅನುಭವ ಹಂಚಿಕೊಂಡ ದಿನದಿಂದ, ಆಕೆ ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಫೋಟೋ ಹಾಕಿದರೂ, ಅದಕ್ಕೆ ತೀರಾ ಕೆಟ್ಟ ಕಾಮೆಂಟ್ ಹಾಕಲಾಗುತ್ತಿದೆಯಂತೆ.
ಇದರಿಂದ ನೊಂದಿರುವ ಸಂಗೀತಾ ಭಟ್, ಫೇಸ್‌ಬುಕ್‌ನಲ್ಲಿ ವಿಡಿಯೋ ಮಾಡಿ, “ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ, ನಾನು ಯಾವುದೇ ನಟ, ನಿರ್ದೇಶಕ, ನಿರ್ಮಾಪಕನ ಹೆಸರನ್ನು ಹೇಳಿಲ್ಲ. ನನಗೆ ತೊಂದರೆ ಕೊಡಬೇಡಿ’ ಎಂದು ಕಣ್ಣೀರಿಟ್ಟಿದ್ದಾರೆ. ಜೊತೆಗೆ, “ನನಗೆ ಯಾರ ಸಹಾಯವೂ ಬೇಡ, ನಾನು ಕೂಡಾ ಯಾರನ್ನೂ ಬೆಂಬಲಿಸುತ್ತಿಲ್ಲ, ಯಾವುದೇ ಕ್ಯಾಂಪೇನ್‌ನಲ್ಲೂ ಇಲ್ಲ’ ಎಂದು ನೇರವಾಗಿ ಹೇಳಿಕೊಂಡಿದ್ದಾರೆ.
ಸಂಗೀತಾ ಭಟ್ ವಿಡಿಯೋದಲ್ಲಿ ಏನು ಹೇಳಿದ್ದಾರೆಂಬುದರ ಪೂರ್ಣಪಾಠ ಇಲ್ಲಿದೆ: “ಕೆಲವು ವಾಹಿನಿಗಳಲ್ಲಿ, ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ನಾನು ನಟ, ನಿರ್ದೇಶಕರ ಹೆಸರನ್ನು ಹೇಳಿದ್ದೇನೆಂಬಂತೆ ಸ್ಟೋರಿ ಮಾಡಲಾಗುತ್ತಿದೆ. ನಾನು ಯಾವ ನಟನ ವಿರುದ್ಧವೂ ಆರೋಪ ಮಾಡಿಲ್ಲ. ಚಿತ್ರರಂಗದಲ್ಲಿ ನಾನು ಪಟ್ಟಂತಹ ಕಷ್ಟಗಳನ್ನು ನನ್ನ ಸ್ನೇಹಿತರಲ್ಲಿ ಹೇಳಿಕೊಂಡಿದ್ದೆ ಅಷ್ಟೇ. ನಾನು ನನ್ನ ಪೋಸ್ಟ್‌ಗಳಲ್ಲಿ ಯಾವ ನಟನ, ನಿರ್ದೇಶಕನ, ನಿರ್ಮಾಪಕನ ಬಗ್ಗೆ ಯಾವುದೇ ಆರೋಪ ಮಾಡಿಲ್ಲ.
ಅವರಿಗೆ ತೊಂದರೆಯಾಗುವ ರೀತಿಯಾಗಲೀ ಅಥವಾ ಅವರ ಫೇಮ್‌ನ ಡಿಫೇಮ್ ಮಾಡಲು ನಾನು ಆ ಪೋಸ್ಟ್ ಹಾಕಿಲ್ಲ ಎಂದು ಇಲ್ಲಿ ಸ್ಪಷ್ಟಪಡಿಸುತ್ತಿದ್ದೇನೆ. ಆದರೆ, ಆ ಪೋಸ್ಟ್ ಇಟ್ಟುಕೊಂಡು ಏನೇನೋ ಬೆಳವಣಿಗೆಗಳು ನಡೆಯುತ್ತಿವೆ. ಚಿತ್ರರಂಗದಲ್ಲಿ ನಾನು 10 ವರ್ಷ ತುಂಬಾ ಕಷ್ಟಪಟ್ಟೆ. ಈಗ ಒಂದು ವರ್ಷದಿಂದ ಚಿತ್ರರಂಗದಿಂದ ದೂರವಿದ್ದೇನೆ. ಇನ್ನಾದ್ರೂ ರಿಯಲ್ ಜೀವನ ನೋಡಬೇಕೆಂದು ಚಿತ್ರರಂಗ ತೊರೆದಿದ್ದೇನೆ. ಹೀಗಿರುವಾಗ ನನಗೆ ಪ್ರಚಾರದ ಅಗತ್ಯವಿಲ್ಲ. ನಾನು ಪ್ರಚಾರಕ್ಕಾಗಿ ಆ ಪೋಸ್ಟ್ ಹಾಕಿಲ್ಲ.
ಆ ಪೋಸ್ಟ್ ಹಾಕಿದ ಮೇಲೆ ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದೇನೆ. ನನ್ನ ಜೀವನವನ್ನು ನಾನು ಬದುಕಬೇಕೆಂದು ಆಸೆ ಪಡ್ತಾ ಇದ್ದೀನಿ. ಯಾಕೆ ನೀವೆಲ್ಲಾ ಅದಕ್ಕೆ ಬಿಡ್ತಾ ಇಲ್ಲ. ನಾನು ಒಂದು ಫೊಟೋ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ರೆ, ತುಂಬಾ ಅಶ್ಲೀಲವಾಗಿ, ಒಂದು ಹೆಣ್ಣಿಗೆ ಕೇಳಬಾರದಂತಹ ಮೆಸೇಜ್‌ಗಳನ್ನು ಕಳಿಸ್ತೀರಾ. ಯಾಕೆ, ನಾನು ಯಾರ ಫ್ಯಾಮಿಲಿ ನೋವು ಮಾಡೋ ತರಹ ಪೋಸ್ಟ್ ಮಾಡಿದೆಂತ. ನಾನು ಮನುಷ್ಯಳು. ಕಾಮನ್ ಮ್ಯಾನ್ ಆಗಿ ಬದುಕಬೇಕೆಂದು 10 ವರ್ಷ ಆದ ಮೇಲೆ ಡಿಸೈಡ್ ಮಾಡಿದ್ದೀನಿ.
ನಾನು ನನ್ನ ಪೋಸ್ಟ್‌ನಲ್ಲಿ ಯಾರ ಮೇಲೂ ಆಪಾದನೆ ಮಾಡಿಲ್ಲ. ಎಷ್ಟೋ ಜನ ಇಂಡಸ್ಟ್ರಿಯವರು ನನ್ನ ಸ್ಟೋರಿನ ಇಟ್ಕೊಂಡು ಅವರ ವೆಪನ್ ಆಗಿ ಬಳಸುತ್ತಿದ್ದಾರೆ. ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ. ನನಗೆ ಪ್ರಚಾರ ಬೇಕಿಲ್ಲ. ಖುಷಿಯಾಗಿರಲು ನಿರ್ಧರಿಸಿದ್ದೇನೆ. ಥೆರಪಿ ಶುರು ಮಾಡಿದ್ದೇನೆ. ಅನೇಕರು ಫೇಸ್‌ಬುಕ್‌ಗಳಲ್ಲಿ ನನ್ನ ಸ್ಟೇಟ್‌ಮೆಂಟ್ ಬಳಸಿ ನಿಮ್ಮ ಮೆಂಡ್‌ಗೆ ಬಂದ ಹೆಸರನ್ನು ಬಳಸಿ, ಅದನ್ನು ಕನೆಕ್ಟ್ ಮಾಡುತ್ತಿದ್ದಾರೆ. ಅದನ್ನು ಮಾಡಬೇಡಿ. ಇದರಿಂದ ನನಗೆ ತೊಂದರೆಯಾಗುತ್ತಿದೆ. ಜೊತೆಗೆ ಇದರಿಂದ ಎಷ್ಟೋ ಜನರ ಹೆಸರು ಕೂಡಾ ಹಾಳಾಗುತ್ತದೆ.
ನನಗೆ ಆದ ನೋವನ್ನು ಮತ್ತೆ ಹೋಗಿ ಸರಿ ಮಾಡೋಕ್ಕಾಗಲ್ಲ. ಇಲ್ಲಿಗೆ ಬಿಟ್ಟು ಬಿಡಿ. ನನ್ನ ಹೆಸರನ್ನು ಎಳೆದು ತರಬೇಡಿ. ಜೊತೆಗೆ ಯಾರ ಹೆಸರನ್ನು ಕೇಳಬೇಡಿ. ನೀವು ಹೆಸರು ಕೇಳ್ಳೋದು ನಿಮ್ಮ ಎಂಟರ್‌ಟೈನ್‌ಮೆಂಟ್‌ಗೊಸ್ಕರ, ನನಗೆ ಸಹಾಯ ಮಾಡಲು ಅಲ್ಲ. ನಾನು ಯಾರಲ್ಲೂ ಸಹಾಯ ಕೇಳಲಿ. ನಾನು, ನನ್ನ ಗಂಡ, ನನ್ನ ಫ್ಯಾಮಿಲಿ ಇಷ್ಟು ಜನ ಅಷ್ಟೇ ನಿಂತಿದ್ದೀವಿ. ನಮಗೆ ಫೈಟ್ ಮಾಡುವ, ಯಾರಿಗೂ ನೋವು ಕೊಡುವ ಉದ್ದೇಶವಿಲ್ಲ. ನಾವು ಯಾವ ಪ್ರತಿಭಟನೆಯಲ್ಲಾಗಲೀ, ಕ್ಯಾಂಪೇನ್‌ನಲ್ಲಾಗಲೀ ಇಲ್ಲ. ನನಗೆ ಯಾರ ಸಪೋರ್ಟ್ ಬೇಡ, ಅದರ ಅಗತ್ಯವೂ ಇಲ್ಲ. ಇದನ್ನು ಇಲ್ಲಿಗೆ ಬಿಟ್ಟುಬಿಡಿ …
* ನಾನು ಯಾವುದೇ ನಟ, ನಿರ್ದೇಶಕ, ನಿರ್ಮಾಪಕನ ಹೆಸರನ್ನು ಹೇಳಿಲ್ಲ. ನನಗೆ ತೊಂದರೆ ಕೊಡಬೇಡಿ.
* ನಮಗೆ ಫೈಟ್ ಮಾಡುವ, ಯಾರಿಗೂ ನೋವು ಕೊಡುವ ಉದ್ದೇಶವಿಲ್ಲ.
* ಇಂಡಸ್ಟ್ರಿಯವರು ನನ್ನ ಸ್ಟೋರಿನ ಇಟ್ಕೊಂಡು ಅವರ ವೆಪನ್ ಆಗಿ ಬಳಸುತ್ತಿದ್ದಾರೆ.
* ನಾವು ಯಾವ ಪ್ರತಿಭಟನೆಯಲ್ಲಾಗಲೀ, ಕ್ಯಾಂಪೇನ್‌ನಲ್ಲಾಗಲೀ ಇಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.