ಪ್ರೇಮಿಗಳ ದಿನಕ್ಕೆ ಪೊಗರು ಆಡಿಯೋ
ದಾವಣಗೆರೆಯಲ್ಲಿ ಅದ್ಧೂರಿ ಸಮಾರಂಭ
Team Udayavani, Feb 10, 2021, 12:40 PM IST
ಇತ್ತೀಚೆಗಷ್ಟೇ ಧ್ರುವ ಸರ್ಜಾ ಅಭಿನಯದ “ಪೊಗರು’ ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡಿದೆ. ಇದೇ ಫೆ. 19ಕ್ಕೆ “ಪೊಗರು’ ಚಿತ್ರ ಕನ್ನಡ, ತೆಲುಗು, ತಮಿಳಿನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಇದರ ನಡುವೆಯೇ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, “ಪೊಗರು’ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಕಸರತ್ತಿನಲ್ಲಿ ನಿರತವಾಗಿದೆ.
ಇದೇ ವೇಳೆ ಇನ್ಸ್ಟಾಗ್ರಾಂನಲ್ಲಿ ಲೈವ್ ಮೂಲಕ ಪ್ರೇಕ್ಷಕರ ಮುಂದೆ ಬಂದ ನಟ ಧ್ರುವ ಸರ್ಜಾ, ಚಿತ್ರದ ಪ್ರಮೋಷನ್ ಮತ್ತಿತರ ವಿಷಯಗಳ ಬಗ್ಗೆ ಅಭಿಮಾನಿಗಳ ಜೊತೆ ಒಂದಷ್ಟು ಮಾತನಾಡಿದ್ದಾರೆ. “ಫೆಬ್ರವರಿ 14 ಪ್ರೇಮಿಗಳ ದಿನದಂದು ದಾವಣಗೆರೆಯಲ್ಲಿ “ಪೊಗರು’ ಸಿನಿಮಾ ಆಡಿಯೋ ರೀಲಿಸ್ ಮಾಡಲಿದ್ದೇವೆ’ ಎಂದಿರುವ ಧ್ರುವಸರ್ಜಾ, “ನಮ್ಮ ಸಿನಿಮಾದ ಆಡಿಯೋ ರಿಲೀಸ್ ವೇಳೆ ಸಾಕಷ್ಟು ವರ್ಷಗಳಿಂದ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದೆ ಇರುವ ಸೆಲೆಬ್ರಿಟಿ ಸ್ಟಾರ್‌ಗಳು ಒಂದೇ ಕಡೆಕಾಣಿಸಿಕೊಳ್ಳಲಿದ್ದಾರೆ’ ಎಂದು ಹೇಳಿದ್ದಾರೆ. “ತುಂಬಾ ದೊಡ್ಡ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಆಯೋಜಿಸಲಾಗಿದೆ.
ಇದನ್ನೂ ಓದಿ : ಸಂಹಾರಿಣಿಯಾಗಿ ಪೂಜಾ ಗಾಂಧಿ ರೀ ಎಂಟ್ರಿ
ಸಿನಿಮಾ ಕುರಿತಾಗಿ ಸಾಕಷ್ಟು ಸರ್‌ಪ್ರೈಸ್ ಇರಲಿದೆ. “ಪೊಗರು’ ಸಿನಿಮಾದ ಕಲಾವಿದರು ಹಾಗೂ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹಲವು ವರ್ಷಗಳಿಂದ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದೆ ಇರುವ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಒಂದೆ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳನ್ನು ನಾವು ಕಾರ್ಯಕ್ರಮದಲ್ಲಿ ಹೇಳಲಿದ್ದೇವೆ. ಫೆಬ್ರವರಿ 19 ರಂದು ಸಿನಿಮಾ ರಿಲೀಸ್ ಆಗುತ್ತಿದ್ದು, ಸಿನಿಮಾ ರಿಲೀಸ್ ದಿನ ನಾವೆಲ್ಲ ಎಲ್ಲಿರುತ್ತೇವೆ ಅನ್ನೋ ವಿಷಯವನ್ನು ಈ ಕಾರ್ಯಕ್ರಮದಲ್ಲಿ ಹೇಳುತ್ತೇವೆ’ ಎಂದಿದ್ದಾರೆ ಧ್ರುವ.
ಇನ್ನು ಲೈವ್‌ನಲ್ಲಿ, “ಒಂದು ನಿಮಿಷದ ಟ್ರೇಲರ್, ಮೇಕಿಂಗ್ ವೀಡಿಯೋ ಅಥವಾ ಇಂಟ್ರೊಡಕ್ಷನ್ ಸಾಂಗ್ ಬಿಡಬೇಕಾ ಎಂಬ ವಿಚಾರವನ್ನು ಅಭಿಮಾನಿಗಳಾದ ನಿಮಗೆ ಬಿಡುತ್ತೇನೆ. ನೀವು ಹೇಳಿದ ಹಾಗೆ ನಮ್ಮ ಚಿತ್ರತಂಡ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ’ ಎಂದು ಆಯ್ಕೆಯನ್ನು ಪ್ರೇಕ್ಷಕರಿಗೇ ಬಿಟ್ಟಿದ್ದಾರೆ ಧ್ರುವ ಸರ್ಜಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.