ಪೊಲಿಟಿಷಿಯನ್ ಟೀಂಗೆ ರಕ್ಷಿತ್ ಶೆಟ್ಟಿ
Team Udayavani, Feb 13, 2017, 11:20 AM IST
ರಕ್ಷಿತ್ ಶೆಟ್ಟಿ “ಕಿರಿಕ್ ಪಾರ್ಟಿ’ ಸಿನಿಮಾ ಹಿಟ್ ಆದ ಖುಷಿಯಲ್ಲಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ತಮ್ಮ ಪರಂವಾ ಸ್ಟುಡಿಯೋ ಮೂಲಕ ಮಾಡಿದ ಚೊಚ್ಚಲ ಸಿನಿಮಾಕ್ಕೆ ಭರ್ಜರಿ ಯಶಸ್ಸು ಸಿಕ್ಕ ಹಿನ್ನೆಲೆಯಲ್ಲಿ ರಕ್ಷಿತ್ ಈಗ ಮತ್ತೂಂದು ಸಿನಿಮಾಕ್ಕೆ ಕೈ ಜೋಡಿಸಿದ್ದಾರೆ. ಹಾಗಂತ ರಕ್ಷಿತ್ ಶೆಟ್ಟಿ ಹೊಸ ಸಿನಿಮಾವನ್ನು ನಿರ್ಮಿಸುತ್ತಿದ್ದಾರಾ ಎಂದು ನೀವು ಕೇಳಬಹುದು. ಖಂಡಿತಾ ಇಲ್ಲ. ಈಗಾಗಲೇ “ಹಂಬಲ್ ಪೊಲಿಟಿಷಿಯನ್ ನೋಗರಾಜ್’ ಎಂಬ ಸಿನಿಮಾ ಆರಂಭವಾಗುವ ಬಗ್ಗೆ ನಿಮಗೆ ಗೊತ್ತೆ ಇದೆ.
“ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ನಿರ್ಮಿಸಿರುವ ಪುಷ್ಕರ್ ಫಿಲಂಸ್ ಹಾಗೂ ಆ ಸಿನಿಮಾವನ್ನು ನಿರ್ದೇಶಿಸಿದ ಹೇಮಂತ್ ಸೇರಿ “ಹಂಬಲ್ ಪೊಲಿಟಿಷಿಯನ್ ನೋಗರಾಜ್’ ಸಿನಿಮಾವನ್ನು ನಿರ್ಮಿಸಲು ಹೊರಟಿದ್ದರು. ಈಗ ನಿರ್ಮಾಣದಲ್ಲಿ ರಕ್ಷಿತ್ ಶೆಟ್ಟಿಯ ಪರಂವಾ ಸ್ಟುಡಿಯೋ ಕೂಡಾ ಕೈ ಜೋಡಿಸಿದೆ. ಅಲ್ಲಿಗೆ ಪುಷ್ಕರ್ ಫಿಲಂಸ್, ಪರಂವಾ ಸ್ಟುಡಿಯೋ ಹಾಗೂ ಹೇಮಂತ್ ಅವರ ಲಾಸ್ಟ್ ಆ್ಯಂಡ್ ಫೌಂಡ್ ಫಿಲಂಸ್ ಸೇರಿ “ಹಂಬಲ್ ಪೊಲಿಟಿಷಿಯನ್ ನೋಗರಾಜ್’ನನ್ನು ನಿರ್ಮಿಸುತ್ತಿವೆ.
ಪರಂವಾ ಸ್ಟುಡಿಯೋ ಮೂಲಕ ನಿರ್ಮಾಣವಾದ “ಕಿರಿಕ್ ಪಾರ್ಟಿ’ ಚಿತ್ರಕ್ಕೆ ಪುಷ್ಕರ್ ಫಿಲಂಸ್ ಕೈ ಜೋಡಿಸಿ ಶೇ 30 ಪಾರ್ಟ್‌ನರ್‌ಶಿಪ್ ಪಡೆದಿದ್ದು ನಿಮಗೆ ಗೊತ್ತೇ ಇದೆ. ಈಗ “ಕಿರಿಕ್ ಪಾರ್ಟಿ’ ಚಿತ್ರ ಭರ್ಜರಿ ಹಿಟ್ ಆಗಿರುವ ಮೂಲಕ ಪುಷ್ಕರ್ ಫಿಲಂಸ್‌ನ ಮಲ್ಲಿಕಾರ್ಜುನ್ ಖುಷಿಯಾಗಿದ್ದಾರೆ. “ಕಿರಿಕ್ ಪಾರ್ಟಿ ಇವತ್ತಿಗೂ 80ಕ್ಕೂ ಹೆಚ್ಚು ಸ್ಕ್ರೀನ್‌ನಲ್ಲಿ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್ ವಿಷಯದಲ್ಲಿ “ಕಿರಿಕ್ ಪಾರ್ಟಿ’ ಹಿಂದೆ ಬಿದ್ದಿಲ್ಲ.
ಚಿತ್ರದ ಟಿವಿ ರೈಟ್ಸ್‌ಗೂ ಬೇಡಿಕೆ ಇದ್ದು, “ಕಿರಿಕ್ ಪಾರ್ಟಿ’ಯ ಒಟ್ಟು ಬಿಝಿನೆಸ್ 30 ಕೋಟಿ ದಾಟುತ್ತದೆ’ ಎನ್ನುತ್ತಾರೆ ಮಲ್ಲಿಕಾರ್ಜುನ್. ಈಗ ಅವರ ನಿರ್ಮಾಣದ “ಹಂಬಲ್ ಪೊಲಿಟಿಷಿಯನ್ ನೋಗರಾಜ್’ ಜೊತೆ ರಕ್ಷಿತ್ ಶೆಟ್ಟಿಯ ಪರಂವಾ ಸ್ಟುಡಿಯೋ ಕೈ ಜೋಡಿಸಿರುವುದು ಕೂಡಾ ಅವರಿಗೆ ಖುಷಿ ತಂದಿದೆಯಂತೆ. “ಹಂಬಲ್ ಪೊಲಿಟಿಷಿಯನ್ ನೋಗ್‌ರಾಜ್’ ಚಿತ್ರವನ್ನು ಸಾದ್ ಖಾನ್ ನಿರ್ದೇಶನ ಮಾಡುತ್ತಿದ್ದು, ಡ್ಯಾನಿಶ್ ಸೇಟ್ ನಾಯಕರಾಗಿ ನಟಿಸುತ್ತಿದ್ದಾರೆ.
ಚಿತ್ರದಲ್ಲಿ ಶ್ರುತಿ ಹರಿಹರನ್ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಫೆಬ್ರವರಿ 14 ರಂದು ಚಿತ್ರದ ಮುಹೂರ್ತ ನಡೆಯಲಿದ್ದು, 27ರಿಂದ ಚಿತ್ರೀಕರಣ ಆರಂಭವಾಗಲಿದೆ. ಇದಲ್ಲದೇ ಪುಷ್ಕರ್ ಫಿಲಂಸ್‌ನಿಂದ ಸದ್ಯದಲ್ಲೇ ಮತ್ತೂಂದು ಸಿನಿಮಾ ಕೂಡಾ ಶುರುವಾಗಲಿದೆ. “ಕಿರಿಕ್ ಪಾರ್ಟಿ’ಯಲ್ಲಿ ಪ್ರಮುಖ ಪಾತ್ರ ಮಾಡಿದ್ದ ನಟನೊಬ್ಬ ಇಲ್ಲಿ ನಾಯಕರಾಗಿ ನಟಿಸಲಿದ್ದು, ಕಾರ್ತಿಕ್ ಎನ್ನುವವರು ನಿರ್ದೇಶಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.