ನಾನು ಕೇವಲ ನಟಿಯಲ್ಲ, ಉದ್ಯಮಿಯೂ ಆಗಿದ್ದೇನೆ: ಪೂಜಾ ಗಾಂಧಿ
Team Udayavani, Mar 1, 2021, 8:44 AM IST
ಕನ್ನಡ ಚಿತ್ರರಂಗದಲ್ಲಿ “ಮುಂಗಾರು ಮಳೆ’ ಚಿತ್ರದ ಮೂಲಕ ಸಿನಿಪ್ರಿಯ ಮನಗೆದ್ದಿದ್ದ ನಟಿ ಪೂಜಾ ಗಾಂಧಿ ಕಳೆದ ಎರಡು – ಮೂರು ವರ್ಷಗಳಿಂದ ಸಿನಿಮಾದಲ್ಲಿ ಎಲ್ಲೂ ಸುದ್ದಿಯಾಗಿರಲಿಲ್ಲ. “ದಂಡುಪಾಳ್ಯ-3′ ಸಿನಿಮಾದ ನಂತರ ಪೂಜಾ ಗಾಂಧಿ ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಅಲ್ಲಲ್ಲಿ ಕೇಳಿ ಬಂದರೂ, ಪೂಜಾ ಅಭಿನಯದ ಯಾವುದೇ ಸಿನಿಮಾಗಳೂ ಸೆಟ್ಟೇರಿರಲಿಲ್ಲ. ಅಂದಹಾಗೆ, ಸಿನಿಮಾದಿಂದ ಒಂದಷ್ಟು ಗ್ಯಾಪ್ ತೆಗೆದುಕೊಂಡಿದ್ದ ಪೂಜಾ ಗಾಂಧಿ ಇಷ್ಟು ಸಮಯ ಏನು ಮಾಡುತ್ತಿದ್ದರು ಅಂದ್ರೆ, ಅವರಿಂದ ಬರುವ ಉತ್ತರ “ಬಿಝಿನೆಸ್’
ಹೌದು, ಪೂಜಾಗಾಂಧಿ ಕಳೆದ ಮೂರು ವರ್ಷಗಳಿಂದ ಸಿನಿಮಾದ ಜೊತೆ ಜೊತೆಗೇ ಬಿಝಿನೆಸ್‌ನಲ್ಲೂ ತಮ್ಮನ್ನು ತೊಡಗಿಸಿಕೊಂಡಿ ದ್ದಾರಂತೆ. ಈಗ ಪೂಜಾಗಾಂಧಿ ಕೇವಲ ನಟಿ ಮಾತ್ರವಲ್ಲ, ಬದಲಾಗಿ ತನ್ನನ್ನು ಉದ್ಯಮಿ ಎಂದೂ ಗುರುತಿಸಿ ಕೊಳ್ಳುತ್ತಿದ್ದಾರೆ. ಈ ಬಗ್ಗೆ ಮಾತನಾಡುವ ಪೂಜಾ ಗಾಂಧಿ, “ಸುಮಾರು ಮೂರು ವರ್ಷದಿಂದ, ನಾನು ಸಿನಿಮಾದ ಜೊತೆ ಹಲವು ಹೊಸ ಕ್ಷೇತ್ರಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ.
ಅದರಲ್ಲಿ ಬಿಝಿನೆಸ್ ಕೂಡ ಒಂದು. ಈಗ ನಾನು ಕೇವಲ ನಟಿಯಲ್ಲ ಜೊತೆಗೆ ಉದ್ಯಮಿಯೂ ಆಗಿದ್ದೇನೆ. ಎರಡು ವರ್ಷಗಳ ಹಿಂದೆ ಮೆಡಿಕಲ್ ಸಪ್ಲೆç ಚೈನ್ ಎನ್ನುವ ಹೊಸ ಉದ್ಯಮವೊಂದನ್ನು ಪ್ರಾರಂಭಿಸಿದ್ದೇನೆ. ಔಷಧಗಳ ಸರಬರಾಜು, ವೈದ್ಯಕೀಯ ಪರಿಕರಗಳ ಸರಬರಾಜು ಮಾಡುವ ಉದ್ಯಮ ಇದಾಗಿದೆ. ನಾನೇ ಖುದ್ದಾಗಿ ಈ ಉದ್ಯಮವನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಸಿನಿಮಾದ ಜೊತೆಗೆ ಇಂಥದ್ದೊಂದು ಕಾರ್ಪೊರೆಟ್ ಲೈಫ್ ಅನ್ನು ಸಹ ಬಹಳ ಎಂಜಾಯ್ ಮಾಡುತ್ತಿದ್ದೇನೆ, ಇದು ಬಹಳ ಭಿನ್ನವಾದ ಕ್ಷೇತ್ರ ಇಲ್ಲೂ ಸಾಕಷ್ಟು ಕಲಿಯುತ್ತಿದ್ದೇನೆ’ ಎನ್ನುತ್ತಾರೆ.
ಇದನ್ನೂ ಓದಿ:ಭಾರತ- ಪಾಕ್ ಸ್ನೇಹಿತರನ್ನಾಗಿ ನೋಡುವುದೇ ನನ್ನ ಕನಸು: ಮಲಾಲಾ
ಇದೇ ವೇಳೆ ತಮ್ಮ ಮದುವೆ ಬಗ್ಗೆಯೂ ಮಾತನಾಡಿರುವ ಪೂಜಾ ಗಾಂಧಿ, “ಸದ್ಯಕ್ಕೆ ನಾನೀಗ “ಹ್ಯಾಪಿಲಿ ಸಿಂಗಲ್’ ಮುಂದೆ ಏನಾಗುತ್ತದೆಯೋ ನೋಡಬೇಕು. ಹಾಗೇನಾದರು ಇದ್ದರೆ ಖಂಡಿತವಾಗಿಯೂ ಎಲ್ಲರಿಗೂ ಹೇಳುತ್ತೇನೆ. ಎಲ್ಲದಕ್ಕೂ ಸಮಯ ಕೂಡಿಬರಬೇಕು. ಸದ್ಯಕ್ಕಂತೂ ಮದುವೆಯ ಬಗ್ಗೆ ಯಾವುದೇ ಯೋಚನೆ ಇಲ್ಲ’ ಎಂದಿದ್ದಾರೆ.
ಅಂದಹಾಗೆ, ಶೀಘ್ರದಲ್ಲಿಯೇ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ದರ್ಶನ ಕೊಡೋದಕ್ಕೆ ರೆಡಿಯಾ ಗಿರುವ ಪೂಜಾ ಗಾಂಧಿ, “ಸಂಹಾರಿಣಿ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಪೂಜಾ ಗಾಂಧಿ ಅಭಿನಯಿಸಿರುವ “ಸಂಹಾರಿಣಿ’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸದ್ಯ ಪ್ರಚಾರ ಕಾರ್ಯಗಳಿಗೆ ಚಿತ್ರತಂಡ ಚಾಲನೆ ನೀಡಿರುವ ಚಿತ್ರತಂಡ, ಇದೇ ಏಪ್ರಿಲ್‌ನಲ್ಲಿ ಚಿತ್ರವನ್ನು ತೆರೆಗೆ ತರಲು ಪ್ಲಾನ್ ಮಾಡಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.