“ಪ್ರಚಂಡ ಪುಟಾಣಿಗಳು’ ಮತ್ತೆ ಬಂದರು
ಮತ್ತೊಂದು ಮಕ್ಕಳ ಚಿತ್ರ ಶುರು
Team Udayavani, Mar 17, 2020, 7:01 AM IST
ಕನ್ನಡದಲ್ಲಿ ಮೊದಲಿನಿಂದಲೂ ಮಕ್ಕಳ ಸಿನಿಮಾಗಳ ಕಲರವ ಕೇಳುತ್ತಲೇ ಇದೆ. ಕನ್ನಡ ಚಿತ್ರರಂಗಕ್ಕೆ ಮಕ್ಕಳ ಸಿನಿಮಾಗಳ ಕೊಡುಗೆ ಕೂಡ ಅಪಾರವಾಗಿದೆ. ಆ ನಿಟ್ಟಿನಲ್ಲಿ ಈಗ ಮತ್ತೊಂದು ಮಕ್ಕಳ ಚಿತ್ರ ಸೆಟ್ಟೇರಿದೆ. ಆ ಚಿತ್ರದ ಹೆಸರು “ಪ್ರಚಂಡ ಪುಟಾಣಿಗಳು’. ಈ ಶೀರ್ಷಿಕೆ ಕೇಳಿದವರಿಗೆ 1981 ರಲ್ಲಿ ಗೀತಪ್ರಿಯ ನಿರ್ದೇಶನದಲ್ಲಿ ಮೂಡಿಬಂದಿದ್ದ “ಪ್ರಚಂಡ ಪುಟಾಣಿಗಳು’ ನೆನಪಾಗಬಹುದು.
ಆ ಚಿತ್ರದಲ್ಲಿ ಸುಂದರಕೃಷ್ಣ ಅರಸ್, ಟೈಗರ್ ಪ್ರಭಾಕರ್, ಸದಾಶಿವ ಬ್ರಹ್ಮಾವರ, ಮಾ. ರಾಮಕೃಷ್ಣ, ಮಾ. ಭಾನುಪ್ರಕಾಶ್ ಇತರರು ನಟಿಸಿದ್ದರು. ಆ ಚಿತ್ರ ಯಶಸ್ಸು ಪಡೆದಿತ್ತ. ಈಗ ಮತ್ತದೇ ಶೀರ್ಷಿಕೆಯಡಿ ಮಕ್ಕಳ ಚಿತ್ರ ಸೆಟ್ಟೇರಲಿದೆ. ಕಥೆ ಬಗ್ಗೆ ಹೇಳುವುದಾದರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 40 ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಜೊತೆಗೂಡಿ ಸವದತ್ತಿ, ಗೋಕಾಕ್, ಕಡೆಗೆ ಪ್ರವಾಸಕ್ಕೆಂದು ಹೊರಡುತ್ತಾರೆ.
ಆಕಸ್ಮಿಕ ನಿಧಿಕಳ್ಳರ ಗುಂಪಿಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ನಿಧಿಗಾಗಿ ಬಲಿಕೊಡಲೆತ್ನಿಸುವ ನಿಧಿಗಳ್ಳರ ಗುಂಪಿನಿಂದ ಮಕ್ಕಳು ಹೇಗೆ ಪಾರಾಗಿ ಬರುತ್ತಾರೆಂಬುದೇ ಚಿತ್ರದ ಕಥೆ. ಚಿತ್ರವನ್ನು ರಾಜೀವ್ ಕೃಷ್ಣ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಇವರದೇ. ಚಿತ್ರವನ್ನು ವಿ. ಸುನಿತ, ಎನ್.ರಘು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಅವಿನಾಶ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದು, ಮಾ.ಭರಮೇಶ್, ಮಾ.ಮನೀಶ್,
ಬೇಬಿ ನೇಹಾ, ಬ್ಯಾಂಕ್ ಜನಾರ್ದನ್, ಬಲರಾಂ ಪಾಂಚಾಲ್. ಕಾವ್ಯಾ ಪ್ರಕಾಶ್ ಇತರರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಆರ್.ಪ್ರಮೋದ್ ಛಾಯಾಗ್ರಹಣವಿದೆ. ಸುರೇಶ್ ಕಂಬಳಿ ಸಾಹಿತ್ಯವಿದೆ. ವಿನು ಮನಸು ಸಂಗೀತ ನೀಡಿದ್ದಾರೆ. ವಿನಯ್ ಆಲೂರು ಸಂಕಲನ ಮಾಡಿದರೆ, ಶಂಕರ್ ಸಾಹಸ ಮಾಡಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಹರಿಹರ ಹಾಗು ಸವದತ್ತಿಯಲ್ಲಿ ಸುಮಾರು 25 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.