ಅಭಿನಯದ ಮಧ್ಯೆ ಮಧ್ಯೆ ಕಸರತ್ತು


Team Udayavani, Aug 28, 2017, 2:42 PM IST

Kurukshetra-(1).jpg

ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರದ ಚಿತ್ರೀಕರಣ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸತತವಾಗಿ ನಡೆಯುತ್ತಿದೆ. ಚಿತ್ರದ ಪ್ರಮುಖ ದೃಶ್ಯಗಳನ್ನು ನಿರ್ದೇಶಕ ನಾಗಣ್ಣ ಅವರು ತಮ್ಮ ತಂಡದೊಂದಿಗೆ ಸೆರೆಹಿಡಿಯುವುದರಲ್ಲಿ ಬಿಝಿಯಾಗಿದ್ದಾರೆ. ಚಿತ್ರದ ಪ್ರಮುಖ ಕಲಾವಿದರ ಅಭಿನಯದ ಹಲವು ದೃಶ್ಯಗಳ ಚಿತ್ರೀಕರಣ ನಡೆಯುತ್ತಲೇ ಇದೆ.

ಈ ಮಧ್ಯೆ ಕೆಲವು ಪ್ರಮುಖ ಕಲಾವಿದರು ಅಭಿನಯದ ಮಧ್ಯೆ ಮಧ್ಯೆ ಜಿಮ್‌ನಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಅದರಲ್ಲೂ ದುರ್ಯೋಧನ ಪಾತ್ರ ನಿರ್ವಹಿಸುತ್ತಿರುವ ದರ್ಶನ್‌, ಭೀಮನ ಪಾತ್ರ ಮಾಡುತ್ತಿರುವ ದಾನಿಶ್‌ ಅಖ್ತರ್‌ ಸೈಫಿ, ಅರ್ಜುನನ ಪಾತ್ರ ಮಾಡುತ್ತಿರುವ ಸೋನು ಸೂದ್‌, ಕರ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅರ್ಜುನ್‌ ಸರ್ಜಾ, ದುಶ್ಯಾಸನನಾಗಿ ಅಭಿನಯಿಸುತ್ತಿರುವ ರವಿಚೇತನ್‌ ಮುಂತಾದವರು ತೆರೆಯ ಮೇಲೆ ಕಟ್ಟುಮಸ್ತಾಗಿ ಕಾಣಿಸಿಕೊಳ್ಳಬೇಕೆಂದು ಕಸರತ್ತು ನಡೆಸುವುದರ ಜೊತೆಗೆ ಸತತವಾಗಿ ಬೆವರು ಹರಿಸುತ್ತಿದ್ದಾರೆ.

ಇನ್ನು ದರ್ಶನ್‌ ಸೇರಿದಂತೆ ಎಲ್ಲಾ ಕಲಾವಿದರು ಸಹ ಮೀಸೆ ತೆಗೆದಿದ್ದಾರೆ. ಸೋಮವಾರದಿಂದ ಚಿತ್ರತಂಡವನ್ನು ರವಿಚಂದ್ರನ್‌ ಸೇರಿಕೊಂಡಿದ್ದು, ಅವರು ಸಹ ಮೀಸೆ ತೆಗೆಯುವುದರ ಜೊತೆಗೆ ಸಾಕಷ್ಟು ತೂಕವನ್ನು ಇಳಿಸಿಕೊಂಡು ಸ್ಲಿಮ್‌ ಆಗಿದ್ದಾರೆ. ಅವರು ಇದೇ ಮೊದಲ ಬಾರಿಗೆ ಪೌರಾಣಿಕ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಅವರು ತೆರೆಯ ಮೇಲೆ ಹೇಗೆ ಕಾಣಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

“ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್‌, ದುರ್ಯೋಧನನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಕ್ಕಂತೆ ಅಂಬರೀಶ್‌, ರವಿಚಂದ್ರನ್‌, ಅರ್ಜುನ್‌ ಸರ್ಜಾ, ಸಾಯಿಕುಮಾರ್‌, ಶಶಿಕುಮಾರ್‌, ರವಿಶಂಕರ್‌, ಶ್ರೀನಾಥ್‌, ಜಿ.ಕೆ. ಶ್ರೀನಿವಾಸಮೂರ್ತಿ, ಲಕ್ಷ್ಮೀ, ಸ್ನೇಹ, ಹರಿಪ್ರಿಯಾ, ನಿಖೀಲ್‌ ಕುಮಾರ್‌ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

ಚಿತ್ರಕ್ಕೆ ಹೆಸರಾಂತ ತಂತ್ರಜ್ಞರ ತಂಡವನ್ನು ಕಲೆ ಹಾಕಲಾಗಿದ್ದು, ಜಯನನ್‌ ವಿನ್ಸೆಂಟ್‌ ಛಾಯಾಗ್ರಹಣ, “ಕಿಂಗ್‌ ಸಾಲೋಮನ್‌’ ರವಿ ಸಾಹಸ, ಹರಿಕೃಷ್ಣ ಸಂಗೀತ, ಜೊ.ನಿ.ಹರ್ಷ ಸಂಕಲನ ಚಿತ್ರಕ್ಕಿದೆ. ಜಿ.ಕೆ. ಭಾರವಿ ಅವರು ಚಿತ್ರಕಥೆಯನ್ನು ರಚಿಸಿದ್ದು, ಯೋಜನಾ ನಿರ್ದೇಶಕರಾಗಿ ಜಯಶ್ರೀದೇವಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಹಿರಿಯ ನಿರ್ದೇಶಕ ನಾಗಣ್ಣ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಟಾಪ್ ನ್ಯೂಸ್

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

1-USAA

America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್‌

mob

Bengaluru; ಮೊಬೈಲ್‌ಗಾಗಿ ಜಗಳ ಮಾಡಿದ ಮಗನ ಹೊಡೆದು ಕೊಂ*ದ ಅಪ್ಪ !

Dinesh-Gundurao

Covid Scam: ನ್ಯಾ.ಕುನ್ಹಾ ವರದಿಯಲ್ಲಿ ಕೋವಿಡ್‌ ಅವ್ಯವಹಾರ ಉಲ್ಲೇಖ: ದಿನೇಶ್‌ ಗುಂಡೂರಾವ್‌

1-manipura

Manipur ಉದ್ವಿಗ್ನ: ಇಬ್ಬರು ಸಚಿವರು,ಐವರು ಶಾಸಕರ ಮನೆಗಳಿಗೆ ಬೆಂಕಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

Daali dhananjay starrer Zebra movie

Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್‌ ಸಾಥ್‌

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

8

ಗಂಭೀರ್‌ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್‌ ಪೇನ್‌

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.