![Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು](https://www.udayavani.com/wp-content/uploads/2025/02/BASSI-415x234.jpg)
![Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು](https://www.udayavani.com/wp-content/uploads/2025/02/BASSI-415x234.jpg)
Team Udayavani, Jan 29, 2025, 12:15 PM IST
ಪ್ರಜ್ವಲ್ ದೇವರಾಜ್ ನಟನೆಯ “ಗಣ’ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದ್ದು, ಜ.31ರಂದು ತೆರೆ ಕಾಣುತ್ತಿದೆ. ಹೈದರಾಬಾದ್ ಮೂಲದ ಪಾರ್ಥು ಎಂಬುವವರು ತಮ್ಮ ಚೆರಿ ಕ್ರಿಯೇಷನ್ಸ್ ಬ್ಯಾನರ್ ಮೂಲಕ ಗಣ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹರಿಪ್ರಸಾದ್ ಜಕ್ಕ ಈ ಸಿನಿಮಾದ ನಿರ್ದೇಶಕರು.
ಗಣ ಸಿನಿಮಾ ಎಂಬುದು ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ. ಆ ಎರಡು ಕಾಲಘಟ್ಟಕ್ಕೆ ಸೇತುವೆ ಆಗಿರುವುದು ಲ್ಯಾಂಡ್‌ಲೈನ್ ಫೋನ್. ಒಮ್ಮೆ 1993ರ ಕಾಲಘಟ್ಟಕ್ಕೆ ಕಥೆ ಸಾಗಿದರೆ, ಇನ್ನೊಮ್ಮೆ ಪ್ರಸ್ತುತತೆಗೆ ಹೊರಳುತ್ತದೆ. ಹೀಗೆ ಟೈಮ್ ಟ್ರಾವೆಲಿಂಗ್ ಹಿನ್ನೆಲೆಯಲ್ಲಿ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವ ಸಿನಿಮಾ ಈ ಗಣ ಎನ್ನುವುದು ತಂಡದ ಮಾತು. ಈ ಸಿನಿಮಾದಲ್ಲಿ ಪ್ರಜ್ವಲ್ ನಾಯಕನಾಗಿ ನಟಿಸಿದರೆ, ಯಶಾ ಶಿವಕುಮಾರ್, ವೇದಿಕಾ ನಾಯಕಿಯರಾಗಿ ನಟಿಸಿದ್ದಾರೆ.
“ನಾನು ತೆಲುಗು ಮೂಲದವನು, ಗಣ ನನ್ನ ಮೊದಲ ಸಿನಿಮಾ. ಈ ಸಿನಿಮಾ ಕೈ ಹಿಡಿದರೆ, ಇನ್ನೂ ಒಂದಷ್ಟು ಕನ್ನಡ ಸಿನಿಮಾಗಳನ್ನು ಮಾಡುವ ಬಯಕೆ ಇದೆ. ಜನವರಿ 31ರಂದು ನಮ್ಮ ಸಿನಿಮಾ ರಿಲೀಸ್ ಆಗುತ್ತಿದೆ. ಕನ್ನಡ ನಾಡಿನ ಪ್ರೇಕ್ಷಕರು ನಮ್ಮ ಸಿನಿಮಾವನ್ನು ಮೆಚ್ಚಿ ಅಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ನಿರ್ಮಾಪಕ ಪಾರ್ಥು.
ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಜೈ ಆನಂದ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಸತೀಶ್ ಎ. ಕಲಾ ನಿರ್ದೇಶನವಿದೆ.
ಪಾತ್ರವರ್ಗ ದಲ್ಲಿ ಪ್ರಜ್ವಲ್ ದೇವರಾಜ್, ಯಶಾ ಶಿವಕುಮಾರ್, ವೇದಿಕಾ ಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್ ಪೇಟೆ, ನಟಿಸಿದ್ದಾರೆ.
Mr. Rani Movie Review: ʼಮಿಸ್ಟರ್.ರಾಣಿʼ ನೋಡಿ ಮನಸ್ಸು ಹಗುರಾಗಿಸಿ.. ಹೇಗಿದೆ ಸಿನಿಮಾ?
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Katapadi: ಮುಕ್ಕಾಲು ಎಕರೆಯಲ್ಲಿ 8 ಟನ್ ಸೌತೆ, ಅಂಗಳದಿಂದಲೇ ಮಾರಾಟ!
Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು
Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್ ಪತ್ರಿಕೆ
Mangaluru: ನದಿ-ಕಡಲು ಸಂಗಮದ ಸನಿಹದಲ್ಲೇ ಪ್ರವಾಸಿ ಸೇತುವೆ!
ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ
You seem to have an Ad Blocker on.
To continue reading, please turn it off or whitelist Udayavani.