Prajwal Devaraj; ಸಿಂಪ್ಲಿ ಸೂಪರ್… ನಿರ್ಮಾಪಕ ಸ್ನೇಹಿ ನಟ
ಪ್ರಜ್ವಲ್ ಕೈ ತುಂಬಾ ಸಿನಿಮಾ
Team Udayavani, Aug 5, 2023, 10:27 AM IST
ಪ್ರಜ್ವಲ್ ದೇವರಾಜ್ ಅವರ ಕೈಯಲ್ಲಿರುವ ಸಿನಿಮಾಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಒಂದಕ್ಕಿಂತ ಒಂದು ಸಿನಿಮಾಗಳ ಪಾತ್ರಗಳು ಭಿನ್ನವಾಗಿವೆ. ಲವ್, ಆ್ಯಕ್ಷನ್, ಸೆಂಟಿಮೆಂಟ್…
ಹೀಗೆ ವಿಭಿನ್ನ ಪಾತ್ರಗಳಲ್ಲಿ ಪ್ರಜ್ವಲ್ ಪ್ರೇಕ್ಷಕರಿಗೆ ದರ್ಶನ ನೀಡಲಿದ್ದಾರೆ. “ಮಾಫಿಯಾ’ ಒಂದು ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾವಾಗಿದ್ದು, ಪ್ರಜ್ವಲ್ ಈ ಚಿತ್ರದಲ್ಲಿ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾ ಚಿತ್ರೀಕರಣ ಮುಗಿಸಿರುವ ಪ್ರಜ್ವಲ್, ಆ ಚಿತ್ರದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಈ ತಿಂಗಳಾಂತ್ಯಕ್ಕೆ ತೆರೆಗೆ ಬರಬಹುದು. ಇನ್ನು, “ಗಣ’ ಪ್ರಜ್ವಲ್ ಕೆರಿಯರ್‌ನಲ್ಲಿ ವಿಭಿನ್ನ ಸಿನಿಮಾವಾಗಲಿದೆಯಂತೆ. ಮುಖ್ಯವಾಗಿ ಈ ಚಿತ್ರ ಎರಡು ಕಾಲಘಟ್ಟಗಳ ನಡುವೆ ನಡೆಯುವ ಸಿನಿಮಾ. ಈ ಚಿತ್ರದಲ್ಲಿ ಪ್ರಜ್ವಲ್ ಎರಡು ಶೇಡ್‌ಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇದರ ಜೊತೆಗೆ “ಜಾತರ’ ಎಂಬ ಹೊಸ ಸಿನಿಮಾವೂ ಸೆಟ್ಟೇರಿದೆ. ಇದು ಪ್ಯಾನ್ ಇಂಡಿಯಾ ಚಿತ್ರ. ಈ ಮೂಲಕ ಪ್ರಜ್ವಲ್ ಬೇರೆ ಭಾಷೆಗಳಿಗೂ ಕಾಲಿಡುತ್ತಿದ್ದಾರೆ. ಇನ್ನು, “ತತ್ಸಮ ತದ್ಭವ’ ಎಂಬ ಸಿನಿಮಾದಲ್ಲಿ ಪ್ರಜ್ವಲ್ ಪೊಲೀಸ್ ಆಫೀಸರ್ ಆಗಿ ನಟಿಸಿದ್ದಾರೆ.
ನನ್ನ ಸಿನಿಮಾಗಳೆಲ್ಲವೂ ಒಂದು ರೇಂಜ್‌ಗೆ ಹೋಗಿವೆ. ನಿರ್ಮಾಪಕರೂ ಹ್ಯಾಪಿಯಾಗಿದ್ದಾರೆ…
ದಶಕ ದಾಟಿ ಮುಂದುವರೆಯುತ್ತಿರುವ ಖುಷಿ:
ದಿನದಿಂದ ದಿನಕ್ಕೆ ಹೆಚ್ಚುತಿರುವ ಕಾಂಪಿಟೇಶನ್ ಮಧ್ಯೆ ಚಿತ್ರರಂಗದಲ್ಲಿ ಒಂದಷ್ಟು ವರ್ಷ ನೆಲೆಯೂರುವುದು ಸವಾಲಿನ ಕೆಲಸ. ಆ ವಿಚಾರದಲ್ಲಿ ಪ್ರಜ್ವಲ್ ಅದೃಷ್ಟವಂತ ಎಂದರೆ ತಪ್ಪಿಲ್ಲ. ಏಕೆಂದರೆ ಪ್ರಜ್ವಲ್ ಚಿತ್ರರಂಗಕ್ಕೆ ಬಂದು 15 ವರ್ಷ ದಾಟಿದೆ. 2007ರಲ್ಲಿ “ಸಿಕ್ಸರ್’ ಚಿತ್ರದ ಮೂಲಕ ಎಂಟ್ರಿಕೊಟ್ಟ ಪ್ರಜ್ವಲ್ ಅಲ್ಲಿಂದ ಇಲ್ಲಿವರೆಗೆ ಸತತವಾಗಿ ಸಿನಿಮಾ ಮಾಡುತ್ತಾ ಬರುತ್ತಿದ್ದಾರೆ.
ಈ ಬಗ್ಗೆ ಮಾತನಾಡುವ ಪ್ರಜ್ವಲ್ ದೇವರಾಜ್, “ಇಷ್ಟು ವರ್ಷಗಳ ಜರ್ನಿ ಸಹಜವಾಗಿಯೇ ಖುಷಿ ಕೊಡುತ್ತದೆ. ಏಕೆಂದರೆ, ಒಬ್ಬ ನಟ ಹತ್ತು ವರ್ಷ ಪೂರೈಸುವುದೇ ದೊಡ್ಡ ಸಾಧನೆ. ಅದರಲ್ಲೂ 15 ವರ್ಷ ಮುಗಿಸಿ, ಇಂದಿಗೂ ಮೂರ್‍ನಾಲ್ಕು ಚಿತ್ರಗಳು ಕೈಯಲ್ಲಿವೆ ಅಂದರೆ ಅದಕ್ಕಿಂತ ಸಂತೋಷ ಬೇಕಾ? ನಿಜಕ್ಕೂ ನನಗೆ ಹೆಮ್ಮೆ ಎನಿಸುತ್ತಿದೆ. ಇದು ನನ್ನೊಬ್ಬನಿಂದ ಆಗಿದ್ದಲ್ಲ. ನಿರ್ದೇಶಕ,ನಿರ್ಮಾಪಕರು ಹಾಗು ಎಲ್ಲಾ ಚಿತ್ರಗಳ ಚಿತ್ರತಂಡದ ಪ್ರೋತ್ಸಾಹ ಸಹಕಾರದಿಂದ ಆಗಿರುವಂಥದ್ದು’ ಎನ್ನುವುದು ಪ್ರಜ್ವಲ್ ಮಾತು.
ನಾನು ಕಂಫರ್ಟ್ ಆಗಿದ್ದರೆ..
ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಿರುವ ಬಗ್ಗೆ ಪ್ರಜ್ವಲ್ ದೇವರಾಜ್‌ಗೆ ಖುಷಿ ಇದೆ. ನಾವು ಕಂಫರ್ಟ್ ಆಗಿದ್ದಾಗ ಮಾತ್ರ ಇದು ಸಾಧ್ಯ ಎನ್ನುವುದು ಅವರ ಮಾತು. “ನಾವು ಕಂಫರ್ಟಬಲ್ ಆಗಿದ್ದರೆ ಮಾತ್ರ ಒಂದರ ಮೇಲೊಂದು ಚಿತ್ರಗಳಲ್ಲಿ ಮಾಡಲು ಸಾಧ್ಯ. ಈಗ ಕನ್ನಡ ಚಿತ್ರರಂಗದ ಮಾರ್ಕೆಟ್ ವಿಸ್ತರಿಸಿದೆ. ಹೆಚ್ಚೆಚ್ಚು ಚಿತ್ರಗಳು ಸಹ ಹುಡುಕಿ ಬರುತ್ತಿವೆ. ನಮಗೂ ಅದರಿಂದಾಗಿ ಹೆಚ್ಚು ಜವಾಬ್ದಾರಿಯೂ ಹೆಚ್ಚಿದೆ. ಅದನ್ನು ಎಚ್ಚರಿಕೆಯಿಂದ ಉಳಿಸಿಕೊಂಡು ಹೋಗಬೇಕೆಂಬ ಅರಿವೂ ಇದೆ. ನನಗೆ ಸಿಗುವ ತಂಡ ಕೂಡ ಹಾಗೇ ಇರುವುದರಿಂದ ಒಂದರ ಮೇಲೊಂದು ಚಿತ್ರಗಳಾಗುತ್ತಿವೆಯಷ್ಟೇ’ ಎನ್ನುತ್ತಾರೆ.
ಪ್ರಜ್ವಲ್ ಕನಸು:
ನಟ ಪ್ರಜ್ವಲ್ ಅವರಿಗೊಂದು ಕನಸಿದೆ. ಅದೇನೆಂದರೆ ಅವರ ತಂದೆ ದೇವರಾಜ್ ಮಾಡಿದಂತಹ “ಹುಲಿಯಾ’ ತರಹದ ಸಿನಿಮಾ ಮಾಡಬೇಕು ಎನ್ನುವುದು. “ನನ್ನ ತಂದೆ ಮಾಡಿದ “ಹುಲಿಯಾ’ ರೀತಿಯ ಚಿತ್ರ ಮಾಡಬೇಕು ಎಂದೆನಿಸಿರುವುದು ನಿಜ. ಆ ಚಿತ್ರದ ಶೀರ್ಷಿಕೆ ಕೇಳಿದರೆ ಸಾಕು ಮೈಯೆಲ್ಲಾ ರೋಮಾಂಚನವಾಗುತ್ತೆ. ಪ್ರತಿಯೊಬ್ಬ ನಟ ಕೂಡ ಅಂಥದ್ದೊಂದು ಪಾತ್ರ ಮಾಡಬೇಕು ಎಂದು ಬಯಸುತ್ತಾನೆ. ಆದರೆ, ನನಗೆ ಅಂಥದ್ದೊಂದು ವಯಸ್ಸು ಆಗಬೇಕು. ಪ್ರಬುದ್ಧತೆ ಇರುವ ಪಾತ್ರವದು. ಅವಕಾಶ ಸಿಕ್ಕರೆ ಖಂಡಿತ ಅಂಥದ್ದೊಂದು ಪಾತ್ರ ನಿರ್ವಹಿಸುತ್ತೇನೆ’ ಎಂದು ಕನಸಿನ ಬಗ್ಗೆ ಹೇಳುತ್ತಾರೆ.
ಸಂಬಂಧ ಮುಖ್ಯ: ತಮ್ಮ ಇಷ್ಟು ವರ್ಷದ ಸಿನಿಮಾ ಜರ್ನಿಯಲ್ಲಿ ಪ್ರಜ್ವಲ್ ಸಾಕಷ್ಟು ಮಾಗಿದ್ದಾರೆ. ಸಿನಿಮಾದ ಸೋಲು-ಗೆಲುವಿಗಿಂತ ಸಂಬಂಧಗಳು ಮುಖ್ಯ ಎಂಬ ಸತ್ಯ ಅರ್ಥವಾಗಿದೆ. “ಒಬ್ಬ ನಟನಿಗೆ ಸಕ್ಸಸ್ ಬಹಳ ಮುಖ್ಯ. ಹಾಗಂತ ನನಗೆ ಸಕ್ಸಸ್ ಇಲ್ಲ ಎಂಬ ಫೀಲ್ ಯಾವತ್ತೂ ಅನಿಸಿಲ್ಲ. ಮೊದಲ ಅಭಿನಯದ “ಸಿಕ್ಸರ್’ ಸಕ್ಸಸ್ ಆಗಿತ್ತು. ಆಮೇಲೆ ಒಂದೇ ರೀತಿಯಲ್ಲಿ ಚಿತ್ರಗಳು ಮೈಲೇಜ್ ಕೊಡಲು ಶುರುಮಾಡಿದವು. ಹೇಗೋ ಈಗ ಗಾಡಿ ನಡೆಯುತ್ತಿದೆ. ನನ್ನ ಕೆರಿಯರ್ ಕೂಡ ಸೂ¾ತ್ ಆಗಿಯೇ ನಡೆಯುತ್ತಿದೆ. ಎಲ್ಲರಿಗೂ ಒಂದಲ್ಲ, ಒಂದು ದಿನ ಯಶಸ್ಸು ಸಿಕ್ಕೇ ಸಿಗುತ್ತದೆ. ಇಲ್ಲಿ ಅಂತ ಅಲ್ಲ, ಎಲ್ಲಾ ರಂಗದಲ್ಲೂ ಸೋಲು-ಗೆಲುವು ಇದ್ದೇ ಇರುತ್ತೆ. ನಾನು ಆ ವಿಷಯದಲ್ಲಿ ಅದೃಷ್ಟವಂತ. ನನ್ನ ಸಿನಿಮಾಗಳು ತುಂಬಾ ಪ್ಲಾಪ್ ಆಗಿಲ್ಲ. ಒಂದು ರೇಂಜ್‌ಗೆ ಹೋಗಿವೆ. ನಿರ್ಮಾಪಕರೂ ಹ್ಯಾಪಿಯಾಗಿದ್ದಾರೆ. ಅದು ಸಂತೋಷ. ಇಲ್ಲಿ ಸೋಲು-ಗೆಲುವಿಗಿಂತ ಸಂಬಂಧ ಮುಖ್ಯವಾಗುತ್ತೆ. ನಂಬಿಕೆಯೂ ಇರಬೇಕಾಗುತ್ತದೆ’ ಎನ್ನುತ್ತಾರೆ.
ಕನ್ನಡ ಚಿತ್ರರಂಗದಲ್ಲಿ ಕೆಲವು ಹೀರೋಗಳು ನಿರ್ಮಾಪಕರಿಗೆ ಹೆಚ್ಚು ಹೊರೆಯಾಗದೇ, ಮಾತಿಗೆ ತಕ್ಕಂತೆ ಸಿನಿಮಾ ಮಾಡುತ್ತಾರೆ. ನಿರ್ಮಾಪಕ, ನಿರ್ದೇಶಕರು ಕೂಡಾ ಅಷ್ಟೇ, ಅಂತಹ ಹೀರೋಗಳಿಗೆ ನೀಟಾಗಿ ಪ್ಲ್ರಾನ್ ಮಾಡಿ ಸಿನಿಮಾ ಮಾಡಿದರೆ ಕೈ ಸುಡದೇ ಹಾಕಿದ ಬಂಡವಾಳ ವಾಪಾಸ್ ಪಡೆಯುವುದು ಕಷ್ಟದ ಮಾತಲ್ಲ. ಅಂತಹ ಸಾಲಿನಲ್ಲಿ ಸಿಗುವ ಹೀರೋ ಪ್ರಜ್ವಲ್ ದೇವರಾಜ್. ಚಿತ್ರರಂಗಕ್ಕೆ ಬಂದು 15 ವರ್ಷ ಕಳೆದರೂ ಪ್ರಜ್ವಲ್ ಬೇಡಿಕೆ ಕಡಿಮೆಯಾಗಿಲ್ಲ. ಆವತ್ತಿನಿಂದ ಇವತ್ತಿನವರೆಗೆ ಒಂದೇ ಗ್ರಾಫ್ ಮೆಂಟೇನ್ ಮಾಡುತ್ತಾ ಬರುತ್ತಿರುವ ಪ್ರಜ್ವಲ್ ನಿರ್ಮಾಪಕರ ಪಾಲಿಗೆ ತುಂಬಾ “ಸಪೋರ್ಟಿವ್ ಹೀರೋ’. ಅದೇ ಕಾರಣದಿಂದ ಪ್ರಜ್ವಲ್‌ಗೆ ಇಷ್ಟು ವರ್ಷಗಳಲ್ಲಿ ಸಿನಿಮಾಕೊರತೆ ಕಾಡಿಲ್ಲ. ಸಿನಿಮಾ ಮೇಲೆ ಸಿನಿಮಾ ಮಾಡುತ್ತಾ ಬಿಝಿಯಾಗಿಯೇ ಇದ್ದಾರೆ. ಸದ್ಯ ಪ್ರಜ್ವಲ್ ಕೈಯಲ್ಲಿ ಮೂರ್‍ನಾಲ್ಕು ಸಿನಿಮಾಗಳಿವೆ. “ಮಾಫಿಯಾ’, “ಗಣ’, “ಜಾತರ’, “ತತ್ಸಮ ತದ್ಭವ’ ಜೊತೆಗೆ ಇನ್ನೊಂದೆರಡು ಚಿತ್ರಗಳು ಕೂಡಾ ಪ್ರಜ್ವಲ್ ಬತ್ತಳಿಕೆಯಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.