‘ಜಂಟಲ್ ಮ್ಯಾನ್’ ಅವತಾರದಲ್ಲಿ ಬರ್ತಿದ್ದಾರೆ ಪ್ರಜ್ವಲ್ ದೇವರಾಜ್..!
ಈಗಾಗಲೇ ಟ್ರೇಲರ್ ನೋಡಿದವರಿಗೆ ಪ್ರಜ್ವಲ್ ಸಿನಿಮಾದಲ್ಲಿ ಹೇಗಿದ್ದಾರೆಂಬ ಅಂದಾಜು ಗೊತ್ತಾಗಿದೆ
Team Udayavani, Jan 4, 2020, 2:42 PM IST
ಬೆಂಗಳೂರು: ಸ್ಲೀಪಿಂಗ್ ಸಿಂಡ್ರೋಮ್ ಅನ್ನೋದು ಬಹಳ ಅಪರೂಪದ ಕಾಯಿಲೆ. ದಿನದ 18 ಗಂಟೆಗಳ ಕಾಲ ನಿದ್ದೆ ಮಾಡುತ್ತಾ, ಉಳಿದ 6 ಗಂಟೆಗಳ ಕಾಲ ಮಾತ್ರ ಪ್ರಪಂಚವನ್ನು ನೋಡುವಂತ ಅಪರೂಪದ ಕಾಯಿಲೆಯದು. ಆ ಕಾಯಿಲೆ ಮೇಲೆ ಸಿನಿಮಾವೊಂದು ರೆಡಿಯಾಗಿದ್ದು, ಡೈನಾಮಿಕ್ ಪ್ರಿನ್ಸ್ ‘ಜಂಟಲ್ ಮ್ಯಾನ್’ ಆಗಿ ಅಭಿನಯಿಸಿದ್ದಾರೆ.
ಡೈನಾಮಿಕ್ ಪ್ರಿನ್ಸ್ ಪ್ರಹ್ವಲ್ ದೇವರಾಜ್ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ, ಡಿಫ್ರೆಂಟ್ ಪಾತ್ರಗಳಲ್ಲಿ ತೆರೆ ಮೇಲೆ ಬರೋದಕ್ಕೆ ರೆಡಿಯಾಗಿದ್ದಾರೆ. ಅದೇ ರೀತಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ಚಿತ್ರವೇ ಈ ‘ಜಂಟಲ್ ಮ್ಯಾನ್’. ಈಗಾಗಲೇ ಟ್ರೇಲರ್ ನೋಡಿದವರಿಗೆ ಪ್ರಜ್ವಲ್ ಸಿನಿಮಾದಲ್ಲಿ ಹೇಗಿದ್ದಾರೆಂಬ ಅಂದಾಜು ಗೊತ್ತಾಗಿದೆ. ಆದ್ರೆ ಸಿಕ್ಕ ಸಿಕ್ಕಲ್ಲಿ ನಿದ್ದೆ ಮಾಡುವ ಪ್ರಜ್ವಲ್ ಪ್ರೀತಿ, ಫೈಟ್, ಊಟ, ಎಂಜಾಯ್ ಮೆಂಟ್ ಎಲ್ಲವನ್ನು ಹೇಗೆ ನಿಭಾಯಿಸ್ತಾರೆ ಅನ್ನೋ ಪ್ರಶ್ನೆ ಜೊತೆಗೆ ಕುತೂಹಲವೂ ಮೂಡಿದೆ. ಹೀಗಾಗಿ ನಿದ್ದೆ ರಾಜನ ‘ಜಂಟಲ್ ಮ್ಯಾನ್’ಗಾಗಿ ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ.
ಈಗಾಗಲೇ ಸಿನಿಮಾದ ಡಯತಲಾಗ್ ಗಳು ಮೀಮ್ಸ್ ಗಳಾಗಿ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ. ಈ ಮೀಮ್ಸ್ ಗಳೇ ಸಿನಿಮಾದ ಬಗ್ಗೆ ಕುತೂಹಲವನ್ನು ಹುಟ್ಟು ಹಾಕಿವೆ. ಕೆಲ ಜಾಹೀರಾತುಗಳಲ್ಲೂ ‘ಜಂಟಲ್ ಮ್ಯಾನ್’ ಡೈಲಾಗಳದ್ದೇ ಸದ್ದು ಜೋರಾಗಿದೆ.
ಸಧ್ಯ ರಿಲೀಸ್ ಗೆ ರೆಡಿಯಾಗಿರುವ ‘ಜಂಟಲ್ ಮ್ಯಾನ್’ ಜಿ. ಸಿನಿಮಾಸ್ ಬ್ಯಾನರ್ ನಲ್ಲಿ ಗುರುದೇಶ ಪಾಂಡೆ ನಿರ್ಮಾಣ ಮಾಡಿದ್ದಾರೆ. ಜಡೇಶ್ ಕುಮಾರ್ ನಿರ್ದೇಶನ ಮಾಡಿದ್ದು, ಸ್ಲೀಪಿಂಗ್ ಸಿಂಡ್ರೋಮ್ ಕಾಯಿಲೆಯಿಂದ ಬಳಲುತ್ತಿರುವ ಪಾತ್ರದಲ್ಲಿ ಹಲವು ಡಿಫ್ರೆಂಟ್ ಪಾತ್ರಗಳನ್ನು ನಿರ್ವಹಿಸಿರುವ ಪ್ರಜ್ವಲ್ ಗೆ ನಿಶ್ವಿಕಾ ನಾಯಕಿಯಾಗಿದ್ದಾರೆ. ತಬಲ ನಾಣಿ, ಅರುಣಾ ಬಾಲರಾಜ್, ಸಾಧು ಕೋಕಿಲಾ ಸೇರಿದಂತೆ ಬಹುತೇಕರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.