ಆ್ಯಕ್ಷನ್ ಪ್ಯಾಕ್ ಅರ್ಜುನ್ ಗೌಡ: ಅಖಾಡಕ್ಕೆ ಸಿದ್ದ
Team Udayavani, Mar 11, 2021, 8:53 AM IST
“ಈ ವರ್ಷದ ಆರಂಭದಲ್ಲೇ, “ಇನ್ಸ್‌ಪೆಕ್ಟರ್ ವಿಕ್ರಂ’ ಸಿನಿಮಾದ ಮೂಲಕ ನನಗೆ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಜನಕ್ಕೂ ಸಿನಿಮಾ ಇಷ್ಟವಾಗಿದೆ. ಅದೇ ಖುಷಿಯಲ್ಲಿ ಈಗ, “ಅರ್ಜುನ್ ಗೌಡ’ ಸಿನಿಮಾವನ್ನು ಆಡಿಯನ್ಸ್ ಮುಂದೆ ತರೋದಕ್ಕೆ ಪ್ಲ್ರಾನ್ ಮಾಡಿಕೊಳ್ಳುತ್ತಿದ್ದೇವೆ.
“ಇನ್ಸ್‌ಪೆಕ್ಟರ್ ವಿಕ್ರಂ’ ಸಿನಿಮಾದಂತೆಯೇ, “ಅರ್ಜುನ್ ಗೌಡ’ ಕೂಡ ಆಡಿಯನ್ಸ್‌ಗೆ ಖಂಡಿತ ಇಷ್ಟವಾಗಲಿದೆ. ಮನರಂಜನೆಗೆ ಎಲ್ಲೂ ಕೊರತೆಯಾಗದಂತೆ ಸಿನಿಮಾ ಮಾಡಿದ್ದೇವೆ’ ಹೀಗೆ ಹೇಳುತ್ತ ಮಾತಿಗಿಳಿದವರು ನಟ ಪ್ರಜ್ವಲ್ ದೇವರಾಜ್.
ಹೌದು, ಇತ್ತೀಚೆಗಷ್ಟೇ ನಟ ಪ್ರಜ್ವಲ್ ದೇವರಾಜ್ “ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರದ ಮೂಲಕ ವರ್ಷದ ಆರಂಭದಲ್ಲೇ ಪ್ರೇಕ್ಷಕರ ಮುಂದೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. “ಇನ್ಸ್‌ಪೆಕ್ಟರ್ ವಿಕ್ರಂ’ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಮುನ್ನಡೆಯುತ್ತಿದೆ. ಇದರ ಬೆನ್ನಲ್ಲೇ ಪ್ರಜ್ವಲ್ “ಅರ್ಜುನ್ ಗೌಡ’ ಚಿತ್ರದ ಮೂಲಕ ಮತ್ತೆ ಥಿಯೇಟರ್‌ಗೆ ಬರೋದಕ್ಕೆ ರೆಡಿಯಾಗುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ “ಅರ್ಜುನ್‌ಗೌಡ’ ಚಿತ್ರ ತೆರೆಗೆ ಬರಬೇಕಿತ್ತು. ಆದರೆ ಅನಿರೀಕ್ಷಿತವಾಗಿ ಬಂದ ಕೊರೊನಾ ಲಾಕ್ ಡೌನ್, ಅನಿವಾರ್ಯವಾಗಿ “ಅರ್ಜುನ್ ಗೌಡ’ನ ಬಿಡುಗಡೆಯನ್ನು ಕೆಲಕಾಲ ಮುಂದೂಡುವಂತೆ ಮಾಡಿತ್ತು.
ಇದನ್ನೂ ಓದಿ:ದರ್ಶನ್ ಅಭಿನಯದ ‘ರಾಬರ್ಟ್’ ಇಂದು ತೆರೆಗೆ
ಇದೀಗ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ, ಚಿತ್ರತಂಡ ಕೂಡ “ಅರ್ಜುನ್ ಗೌಡ’ನನ್ನು ಆದಷ್ಟು ಬೇಗ ತೆರೆಗೆ ಬರುವ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, “ಅರ್ಜುನ್ ಗೌಡ’ನ ಬಗ್ಗೆ ಒಂದಷ್ಟು ಮಾತನಾಡಲು ಮಾಧ್ಯಮಗಳ ಮುಂದೆ ಬಂದಿತ್ತು.
“ಯಾವುದೇ ಕ್ಯಾರೆಕ್ಟರ್ ಆದ್ರೂ, ಅದರಲ್ಲಿ ಸ್ವಲ್ಪ ಕಾಮಿಡಿ ಎಲಿಮೆಂಟ್ಸ್ ಇದೆ ಆಡಿಯನ್ಸ್‌ಗೆ ಹೆಚ್ಚು ಇಷ್ಟವಾಗುತ್ತೆ. “ಅರ್ಜುನ್ ಗೌಡ’ದಲ್ಲೂ ಕೂಡ ನನ್ನ ಕ್ಯಾರೆಕ್ಟರ್ ಹಾಗೇ ಇದೆ. ಇದೊಂದು ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಸಿನಿಮಾವಾದ್ರೂ, ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಇದರಲ್ಲಿ ನಿರೀಕ್ಷಿಸಬಹುದು’ ಎನ್ನುವುದು ಪ್ರಜ್ವಲ್ ಮಾತು.
“ಅರ್ಜುನ್ ಗೌಡ’ ನಿರ್ಮಾಪಕ ರಾಮು ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ 39ನೇ ಚಿತ್ರ. “ಅರ್ಜುನ್ ಗೌಡ’ನ ಬಗ್ಗೆ ಮಾತನಾಡುವ ರಾಮು, “ಇದು ಯಾವುದೇ ಸಿನಿಮಾದ ರಿಮೇಕ್ ಅಲ್ಲ. ಇದೊಂದು ಕಂಪ್ಲೀಟ್ ಸ್ವಮೇಕ್ ಸಿನಿಮಾ. ಪ್ರಜ್ವಲ್ ದೇವರಾಜ್ ಅವರೊಂದಿಗೆ ಇದು ನನ್ನ ಮೂರನೇ ಸಿನಿಮಾ. ಆಡಿಯನ್ಸ್‌ಗೆ ಇಷ್ಟವಾಗುವಂಥ ಕಂಟೆಂಟ್ ಇಟ್ಟುಕೊಂಡು ಒಂದೊಳ್ಳೆ ಸಿನಿಮಾ ಸಿನಿಮಾ ಮಾಡಿದ್ದೇವೆ. ಈಗಾಗಲೇ ಸಿನಿಮಾದ ಸೆನ್ಸಾರ್ ಕೂಡ ಆಗಿದ್ದು, ಇದೇ ಏಪ್ರಿಲ್ – ಮೇ ತಿಂಗಳಿನಲ್ಲಿ “ಅರ್ಜುನ್ ಗೌಡ’ ರಿಲೀಸ್ ಮಾಡುವ ಯೋಚನೆ ಇದೆ’ ಎಂದಿದ್ದಾರೆ.
“ಅರ್ಜುನ್ ಗೌಡ’ ಚಿತ್ರಕ್ಕೆ ಲಕ್ಕಿ ಶಂಕರ್ ನಿರ್ದೇಶನವಿದೆ. ಚಿತ್ರದ ಬಗ್ಗೆ ಮಾತನಾಡುವ ಶಂಕರ್, “ಇದೊಂದು ಕಂಪ್ಲೀಟ್ ಆ್ಯಕ್ಷನ್, ರೊಮ್ಯಾಂಟಿಕ್, ಥ್ರಿಲ್ಲರ್ ಸಿನಿಮಾ. ಒಂದೊಳ್ಳೆ ಆ್ಯಕ್ಷನ್ ಸಿನಿಮಾ ಮಾಡಬೇಕೆಂಬ ಕನಸು ಈ ಸಿನಿಮಾ ಮೂಲಕ ನನಸಾಗಿದೆ. ಒಂದು ಲೈನ್ ಕಥೆ ಕೇಳಿದ ಕೂಡಲೇ ಪ್ರಜ್ವಲ್ ಇಷ್ಟಪಟ್ಟು ಈ ಸಿನಿಮಾ ಒಪ್ಪಿಕೊಂಡರು. ಎಂಟರ್‌ಟೈನ್ಮೆಂಟ್ ಜೊತೆಗೆ ಇಂದಿನ ಯೂಥ್ಸ್ಗೆ ಕನೆಕ್ಟ್ ಆಗುವಂತ ಕೆಲ ವಿಷಯಗಳನ್ನೂ ಸಿನಿಮಾದಲ್ಲಿ ಹೇಳಿದ್ದೇವೆ. 6 ಭರ್ಜರಿ ಫೈಟ್ಸ್, 4 ಹಾಡು ಚಿತ್ರದಲ್ಲಿದೆ. ಆದಷ್ಟು ಬೇಗ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ನಾವು ಕಾತುರರಾಗಿದ್ದೇವೆ’ ಎಂದರು.
ಚಿತ್ರದ ನಾಯಕಿ ಪ್ರಿಯಾಂಕಾ ತಿಮ್ಮೇಶ್, ಸಂಗೀತ ನಿರ್ದೇಶಕ ಧರ್ಮವಿಶ್, ಛಾಯಾಗ್ರಹಕ ಜೈಆನಂದ್ ಚಿತ್ರದ ಬಗ್ಗೆ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.