ಹಿಂದಿ ಆಲ್ಬಂನಲ್ಲಿ ಪ್ರಣೀತಾ, ಕುಣಿತ!
Team Udayavani, Jun 16, 2018, 10:57 AM IST
ನಟಿ ಪ್ರಣೀತಾ “ಲೀಡರ್’ ನಂತರ ಯಾವ ಚಿತ್ರ ಒಪ್ಪಿಕೊಂಡರು ಎಂಬ ಪ್ರಶ್ನೆ ಇತ್ತು. ಈಗಾಗಲೇ ತೆಲುಗು, ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದ ಪ್ರಣೀತಾ ಸದ್ದಿಲ್ಲದೆ ಈಗ ಬಾಲಿವುಡ್ ಅಂಗಳಕ್ಕೂ ಜಿಗಿದಿದ್ದಾರೆ. ಹಾಗಂತ, ಅವರೇನೂ ಹಿಂದಿ ಚಿತ್ರದಲ್ಲಿ ನಟಿಸುತ್ತಿಲ್ಲ. ಆದರೆ, ಹಿಂದಿ ವೀಡಿಯೋ ಆಲ್ಬಂ ಸಾಂಗ್ವೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಹೌದು, ಪ್ರಣೀತಾ ಅವರು “ಲೀಡರ್’ ನಂತರ ಸಾಕಷ್ಟು ಕಥೆ ಕೇಳಿದ್ದುಂಟು.
ಆದರೆ, ಯಾವ ಕಥೆಯೂ ಅವರಿಗೆ ಇಷ್ಟವಾಗದ ಕಾರಣ, ಈ ಮಧ್ಯೆ ಒಳ್ಳೆಯ ಕಥೆಗಳನ್ನು ಎದುರು ನೋಡುತ್ತಿದ್ದರು. ಆ ಬೆನ್ನಲ್ಲೇ ಅವರಿಗೆ ಹಿಂದಿಯ ಆಲ್ಬಂ ಸಾಂಗ್ನಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಹಾಗಾಗಿ ಪ್ರಣೀತಾ ಆ ಹಿಂದಿ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡು ಹಿಂದಿರುಗಿದ್ದೂ ಆಗಿದೆ. ಈ ಹಿಂದೆ ವಿದ್ಯಾಬಾಲನ್ ಅಭಿನಯದ “ತುಮಾರಿ ಸುಲು’ ಚಿತ್ರವನ್ನು ನಿರ್ದೇಶಿಸಿದ್ದ ಸುರೇಶ್ ತ್ರಿವೇಣಿ ಅವರು, “ಚನ್ ಕಿತ್ತನ್’ ಹೆಸರಿನ ವೀಡಿಯೋ ಆಲ್ಬಂ ನಿರ್ದೇಶಿಸುವ ಯೋಚನೆ ಮಾಡಿ, ಆ ಹಾಡಲ್ಲಿ ಪ್ರಣೀತಾ ಅವರನ್ನು ನಟಿಸಲು ಇಂಟ್ರೆಸ್ಟ್ ಇದೆಯಾ ಅಂತ ಕೇಳಿದ್ದಾರೆ.
ಒಳ್ಳೆಯ ತಂಡ ಅನಿಸಿದ ಕೂಡಲೇ ಪ್ರಣೀತಾ ಖುಷಿಯಿಂದಲೇ ಗ್ರೀನ್ಸಿಗ್ನಲ್ ಕೊಟ್ಟಿದ್ದಾರೆ. ಈಗಾಗಲೇ ಮೂರು ದಿನಗಳ ಕಾಲ ಲಡಾಕ್ ಹಾಗೂ ಸಿಕ್ಕಿಂ ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಣ ಕೂಡ ನಡೆದಿದೆ. ಅಂದಹಾಗೆ, ಈ ವೀಡಿಯೋ ಆಲ್ಬಂನಲ್ಲಿ ಬಾಲಿವುಡ್ ನಟ ಆಯುಷ್ಮಾನ್ ಖುರೇನಾ ನಟಿಸಿದ್ದಾರೆ. ಅವರದು ಇಲ್ಲಿ ಕಾಪ್ ಅವತಾರ ತಾಳಿರುವ ಪಾತ್ರ. ಅವರ ಜೋಡಿಯಾಗಿ ಪ್ರಣೀತಾ ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ರೋಚಕ್ ಕೊಹ್ಲಿ ಸಂಯೋಜಿಸಿದ್ದಾರೆ.
ಇದೊಂದು ಪಂಜಾಬಿ ಶೈಲಿಯ ಹಾಡು ಎಂಬುದು ಪ್ರಣೀತಾ ಮಾತು. ಇದೇ ಮೊದಲ ಸಲ ಬಾಲಿವುಡ್ ಆಲ್ಬಂ ವೀಡಿಯೋ ಹಾಡಲ್ಲಿ ಕಾಣಿಸಿಕೊಂಡಿರುವ ಪ್ರಣೀತಾ, ಹಿಂದಿ ಚಿತ್ರಕ್ಕೇನಾದರೂ ಸಹಿ ಮಾಡಿದ್ದಾರಾ? ಈ ಪ್ರಶ್ನೆಗೆ, “ಸದ್ಯಕ್ಕೆ ಹಾಗೇನೂ ಇಲ್ಲ. ಒಳ್ಳೆಯ ಹಾಡು, ತಂಡ ಎಂಬ ಕಾರಣಕ್ಕೆ ನಟಿಸಿ ಬಂದಿದ್ದೇನೆ. ಸದ್ಯಕ್ಕೆ ನಾನು ತೆಲುಗಿನ “ಹೆಲೋ ಗುರು ಪ್ರೇಮ ಕೋಸಮೆ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಕನ್ನಡದಲ್ಲಿ ಹೊಸ ಬಗೆಯ ಕಥೆಗಳನ್ನು ಕೇಳುತ್ತಿದ್ದೇನಷ್ಟೇ’ ಎಂದು ಹೇಳಿ ಸುಮ್ಮನಾಗುತ್ತಾರೆ ಪ್ರಣೀತಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.