ಪ್ರಶಾಂತ್ ನೀಲ್ ವ್ಯಾಕ್ಸಿನೇಶನ್: ಫೋಟೋಗೆ ನೆಟ್ಟಿಗರ ಫನ್ನಿ ಕಾಮೆಂಟ್ಸ್
Team Udayavani, Jun 9, 2021, 2:15 PM IST
ಬೆಂಗಳೂರು: ಬೆಂಗಳೂರು: ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಸಿನಿಮಾ ಮಂದಿ ಕೊರೊನಾ ವ್ಯಾಕ್ಸಿನೇಶನ್ ತೆಗೆದುಕೊಳ್ಳುತ್ತಿದ್ದು, ತಮ್ಮ ಅಭಿಮಾನಿಗಳಿಗೂ ವ್ಯಾಕ್ಸಿನೇಶನ್ ತೆಗೆದುಕೊಳ್ಳುವಂತೆ ಮನವಿ ಮಾಡುತ್ತಿದ್ದಾರೆ. ಇತ್ತೀಚೆಗೆ “ಉಗ್ರಂ’ ಮತ್ತು “ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಕೊರೊನಾ ಮೊದಲ ಡೋಸ್ ವ್ಯಾಕ್ಸಿನೇಶನ್ ಪಡೆದುಕೊಂಡಿದ್ದಾರೆ.
ಬಳಿಕ ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಪ್ರಶಾಂತ್ ನೀಲ್, “ಕೊನೆಗೂ ನಾನು ಲಸಿಕೆಯನ್ನು ಪಡೆದುಕೊಂಡಿದ್ದೇನೆ. ನೀವು ಕೂಡ ಇನ್ನೂ ಲಸಿಕೆ ಪಡೆದುಕೊಂಡಿಲ್ಲವಾದರೆ, ಆದಷ್ಟು ಬೇಗ ಸಮಯ ನಿಗದಿ ಮಾಡಿಕೊಳ್ಳಿ. ನೀವು ಮತ್ತು ನಿಮ್ಮ ಕುಟುಂಬದವರು ಲಸಿಕೆ ಪಡೆದುಕೊಳ್ಳಿ’ ಎಂದು ಮನವಿ ಮಾಡಿದ್ದಾರೆ.
ಜೊತೆಗೆ ತಾನು ವ್ಯಾಕ್ಸಿನೇಶನ್ ಪಡೆದುಕೊಳ್ಳುತ್ತಿರುವ ಪೋಟೋವನ್ನು ಪ್ರಶಾಂತ್ ನೀಲ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ತಾನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿರುವ ಫೋಟೋದಲ್ಲಿ ಇಂಜೆಕ್ಷನ್ ಹಾಕುತ್ತಿರುವ ಸಮಯದಲ್ಲಿ ಭಯಪಟ್ಟಿರುವಂತೆ ಕಾಣುವ ಪ್ರಶಾಂತ್ ನೀಲ್ ಮುಖ ಮುಚ್ಚಿಕೊಂಡಿದ್ದರು. ಹಾಗಾಗಿ ಈ ಫೋಟೋಗೆ ಟ್ವಿಟ್ಟರ್‌ನಲ್ಲಿ ಒಂದರ ಹಿಂದೊಂದು ಹಾಸ್ಯ ಚಟಾಕಿಗಳು, ಫನ್ಸಿ ಕಾಮೆಂಟ್ಸ್ ಹರಿದುಬರುತ್ತಿದೆ.
ಇದನ್ನೂ ಓದಿ: ಹಳೆಯದನ್ನು ಬಿಟ್ಟು ಬಿಡೋಣ… ಮುಗಿದ ಅಧ್ಯಾಯ ಕೆದಕಬೇಡಿ: ರಕ್ಷಿತ್ ಮನವಿ
“ಸಿನಿಮಾದಲ್ಲಿ ಅಷ್ಟು ಹಿಂಸಾಚಾರ ತೋರಿಸುವ ನಿಮಗೆ ಇಂಜೆಕ್ಷನ್ ಅಂದ್ರೆ ಭಯನಾ?’ ಎಂದು ನೆಟ್ಟಿಗರೊಬ್ಬರು ಕೇಳಿದರೆ, “ಬಹುಶಃ ನರ್ಸ್ ಕಂಡ್ರೆ ನಾಚಿಕೆ ಇರಬೇಕು. ಅದ್ಕೆ ಒಂದು ರೋಮ್ಯಾನ್ಸ್ ಸಿನಿಮಾ ಮಾಡಿ’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
“ಮಚ್ಚು ಇಲ್ಲ, ಕೊಡಲಿ ಇಲ್ಲ, ಸೂತ್ತಿಗೆ ಅಂತೂ ಅಲ್ಲವೇ ಅಲ್ಲ. ಆದರೂ ಒಂದು ಸೊಜಿಗೆ ಇಷ್ಟು ಭಯವೇ. ಜಸ್ಟ್ ಕಿಡ್ಡಿಂಗ್. ಪೋಸ್ ತುಂಬಾ ಚೆನ್ನಾಗಿದೆ. ಹೆಂಗಾದ್ರೂ “ಕೆಜಿಎಫ್-2′ ರಿಲೀಸ್ ಮಾಡಿ. ತಡೆಯೊಕ್ಕಾಗ್ತಾ ಇಲ್ಲ’ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ ಪ್ರಶಾಂತ್ ನೀಲ್ ವ್ಯಾಕ್ಸಿನೇಶನ್ ಫೋಟೋ ದಿನವಿಡೀ ನೆಟ್ಟಿಗರಿಂದ ಭರ್ಜರಿ ಕಾಮೆಂಟ್ಸ್ ಪಡೆದುಕೊಂಡಿದ್ದಂತೂ ಸುಳ್ಳಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Commission: 60 ಪರ್ಸೆಂಟ್ ಕಮಿಷನ್: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.