ಪ್ರಥಮ ಕಾಣಿಕೆ 99 ಲಕ್ಷಕ್ಕೊಬ್ಬ!

ಕ್ರಿಕೆಟ್‌ ಬೆಟ್ಟಿಂಗ್‌ ಸುತ್ತ ಚಿತ್ರ

Team Udayavani, Feb 27, 2020, 7:01 AM IST

99-Lakshakkobba

ನೂರಕ್ಕೊಬ್ಬ, ಸಾವಿರಕ್ಕೊಬ್ಬ, ಲಕ್ಷಕ್ಕೊಬ್ಬ, ಕೋಟಿಗೊಬ್ಬ…. ಸಾಮಾನ್ಯವಾಗಿ ಈ ಪದಬಳಕೆ ಗೊತ್ತಿರುತ್ತೆ. ಇನ್ನು “ಕೋಟಿಗೊಬ್ಬ’, “ಕೋಟಿಗೊಬ್ಬ-2′, ಕೋಟಿಗೊಬ್ಬ 3′ ಅಂಥ ಚಿತ್ರಗಳೂ ಇವೆ. ಆದರೆ, “99 ಲಕ್ಷಕ್ಕೊಬ್ಬ’ ಎಂಬ ಸಿನಿಮಾ ಹೆಸರನ್ನೂ ಇಡಲಾಗಿದೆ ಅನ್ನೋದು ಈ ಹೊತ್ತಿನ ಸುದ್ದಿ. ಹೌದು, ಪ್ರಥಮ್‌ ಈ ಚಿತ್ರದ ಹೀರೋ. ಪ್ರಥಮ್‌ ಸಿನಿಮಾ ಅಂದಮೇಲೆ, ಅಲ್ಲಿ ಒಂದಷ್ಟು ಗಿಮಿಕ್‌ ಇದ್ದೇ ಇರುತ್ತೆ. ಸಿನಿಮಾ ಸದ್ದು ಮಾಡದಿದ್ದರೂ, ಶೀರ್ಷಿಕೆ ಸದ್ದಿಗೇನೂ ಕೊರತೆ ಇಲ್ಲ. ಇತ್ತೀಚೆಗೆ ಪ್ರಥಮ್‌ ತಮ್ಮ ಹುಟ್ಟಹಬ್ಬ ಆಚರಿಸಿಕೊಂಡರು.

ಅಂದು “99 ಲಕ್ಷಕ್ಕೊಬ್ಬ’ ಚಿತ್ರದ ಪೋಸ್ಟರ್‌ ಅನ್ನು ಅಭಿಷೇಕ್‌ ಅಂಬರೀಷ್‌ ಬಿಡುಗಡೆ ಮಾಡಿ ಶುಭ ಹಾರೈಸಿದರು. ತಮ್ಮ ಚಿತ್ರದ ಶೀರ್ಷಿಕೆ ಕುರಿತು ಮಾತನಾಡುವ ಪ್ರಥಮ್‌, “ಇದಕ್ಕೂ ಮುನ್ನ “ಕೋಟಿಗೊಬ್ಬ’ ಟೈಟಲ್‌ ಇಡಲು ಯೋಚಿಸಲಾಗಿತ್ತು. ಆದರೆ ಡಾ. ವಿಷ್ಣುವರ್ಧನ್‌, ಸುದೀಪ್‌ ಅವರಿಗೆ ಮಾತ್ರ ಈ ಟೈಟಲ್‌ ಸರಿಹೊಂದುತ್ತೆ. ಆದ್ದರಿಂದ ಅವರಿಗಿಂತ ಒಂದು ಲಕ್ಷ ಕಡಿಮೆ ಇರಬೇಕು ಅಂದುಕೊಂಡು, ಈ ಶೀರ್ಷಿಕೆ ಇಡಲಾಗಿದೆ.

ಇನ್ನು, ಇದೊಂದು ಕ್ರಿಕೆಟ್‌ ಬೆಟ್ಟಿಂಗ್‌ ಕುರಿತ ಕಥೆ ಹೊಂದಿದೆ. ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳು ಜಾಮಿಟ್ರಿ ಬಾಕ್ಸ್‌ ಇದ್ದರೆ ಅದನ್ನು ಎಲ್ಲರಿಗೂ ತೋರಿಸಿ ಖುಷಿ ಪಡುತ್ತಿದ್ದರು. ಆದರೆ ಈಗ ಕಾಲ ಬದಲಾದಂತೆ, ಇಂದು ಹುಡುಗರು ಕ್ರಿಕೆಟ್‌ ಮ್ಯಾಚ್‌ ಸಮಯದಲ್ಲಿ ನನ್ನದೊಂದು ಸಿಕ್ಸರ್‌ ಅಂಥ ಬೆಟ್ಟಿಂಗ್‌ ಕಟ್ಟುತ್ತಾರೆ. ಇದರಿಂದ ಏನೇನು ಅನಾಹುತಗಳು ಆಗುತ್ತದೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಮಹಾಭಾರತದ ಗುಣ ಲಕ್ಷಣಗಳನ್ನು ಇಟ್ಟುಕೊಂಡು, ಯಾರೂ ಹೇಳದ ಕಥೆಯನ್ನು ಇಲ್ಲಿ ಹೇಳುತ್ತಿದ್ದೇವೆ’ ಎಂಬುದು ಅವರ ಮಾತು.

“ಸ್ವಾರಸ್ಯ ಸಿನಿ ಕ್ರಿಯೇಶನ್ಸ್‌’ ಬ್ಯಾನರ್‌ನಲ್ಲಿ ನೀಲೇಶ್‌ “99 ಲಕ್ಷಕ್ಕೊಬ್ಬ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರದ್ಯೋತ್ತನ್‌ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಶೋಭರಾಜ್‌, ಉಮೇಶ್‌, ನಿಹಾರಿಕಾ ಶಣೈ ಮೊದಲಾದವರು ಅಭಿನಯಿಸುತ್ತಿದ್ದಾರೆ. ಚಿತ್ರದ ನಾಯಕಿ ಆಯ್ಕೆ ನಡೆದಿಲ್ಲ. ಬಾಲಿವುಡ್‌ ನಟಿಯೊಬ್ಬರನ್ನು ಕರೆತರುವ ಯೋಚನೆ ಚಿತ್ರತಂಡದ್ದು. ಏಪ್ರಿಲ್‌ ಮೊದಲ ವಾರ ಚಿತ್ರಕ್ಕೆ ಚಾಲನೆ ಸಿಗಲಿದೆ.

ಟಾಪ್ ನ್ಯೂಸ್

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು

ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

rahul gandhi

Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್‌ ಪಟ್ಟು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

1-robo-kidnap

Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.