ಪ್ರೇಮ್ ಹೊಸ ಚಿತ್ರಏಕಲವ್ಯ; ರಕ್ಷಿತಾ ಸಹೋದರ ರಾಣಾ ಲಾಂಚ್
Team Udayavani, Apr 1, 2019, 6:44 PM IST
ನಟಿ ರಕ್ಷಿತಾ ಸಹೋದರ ರಾಣಾ ಹೀರೋ ಆಗಿ ಲಾಂಚ್ ಆಗಲಿದ್ದು, ಆ ಚಿತ್ರವನ್ನು ಪ್ರೇಮ್ ನಿರ್ದೇಶಿಸಲಿದ್ದಾರೆಂಬ ಸುದ್ದಿಯನ್ನು ನೀವು ಓದಿದ್ದೀರಿ. ಮಾರ್ಚ್ 31 ರಂದು ರಕ್ಷಿತಾ
ಹುಟ್ಟುಹಬ್ಬ ದಿನ ಅವರ ಸಹೋದರನ ಸಿನಿಮಾ ಲಾಂಚ್ ಆಗಿದೆ. ಜೊತೆಗೆ ಟೈಟಲ್ ಕೂಡಾ ಬಿಡುಗಡೆಯಾಗಿದೆ. ಹಾಗಾದರೆ, ಪ್ರೇಮ್ ಈ ಬಾರಿ ಯಾವ ಟೈಟಲ್‌ನಡಿ ಸಿನಿಮಾ ಮಾಡುತ್ತಾರೆಂಬ ಕುತೂಹಲಕ್ಕೆ ಉತ್ತರ “ಏಕಲವ್ಯ’. ಹೌದು, ರಾಣಾ ನಾಯಕರಾಗಿರುವ ಚಿತ್ರಕ್ಕೆ ಪ್ರೇಮ್ “ಏಕಲವ್ಯ’ ಎಂದು ಹೆಸರಿಟ್ಟಿದ್ದಾರೆ.
ಹಾಗಂತ ಕಥೆಗೂ, ಟೈಟಲ್‌ಗೂ ಏನು ಸಂಬಂಧ ಎಂದು ನೀವು ಕೇಳಿದರೆ ಅದಕ್ಕೆ ಉತ್ತರವಿಲ್ಲ. ಏಕೆಂದರೆ ಪ್ರೇಮ್ ಯಾರಿಗೂ ಕಥೆ ಬಿಟ್ಟುಕೊಡೋದಿಲ್ಲ. ಅಂದಹಾಗೆ, ಟೈಟಲ್ ಡಿಸೈನ್ ನೋಡಿದಾಗ ನಿಮಗೆ “ಏಕ್ ಲವ್ ಯಾ’ ಎಂದು ಕಾಣುತ್ತದೆ. ಆದರೆ ಸಿನಿಮಾದ ಶೀರ್ಷಿಕೆ “ಏಕಲವ್ಯ’. ಲವ್ ಇಸ್ ಆಲ್ ಯು ನೀಡ್ ಎಂಬ ಟ್ಯಾಗ್‌ಲೈನ್ ಕೂಡಾ ಇದೆ.
ತಮ್ಮ ಹುಟ್ಟುಹಬ್ಬದಂದೇ ಸಹೋದರನ ಸಿನಿಮಾ ಲಾಂಚ್ ಆಗಬೇಕೆಂಬುದು ರಕ್ಷಿತಾ ಆಸೆಯಾಗಿತ್ತಂತೆ. ಅದರಂತೆ ಅದ್ಧೂರಿಯಾಗಿ ಲಾಂಚ್ ಆಗಿದ್ದಾರೆ ರಾಣಾ . ರಾಣಾ ಕೂಡಾ
ಸಿನಿಮಾಕ್ಕೆ ಬೇಕಾದ ಸಾಕಷ್ಟು ತಯಾರಿ ನಡೆಸಿದ್ದಾರೆ. ನಟನೆ, ಫೈಟ್, ಡ್ಯಾನ್ಸ್ … ಹೀಗೆ ಎಲ್ಲದರಲ್ಲೂ ಪಕ್ಕಾ ಆಗಿದ್ದಾರೆ. ಇದಕ್ಕಿಂತ ಹೆಚ್ಚಾಗಿ “ದಿ ವಿಲನ್’ ಸಿನಿಮಾ ಸೆಟ್‌ನಲ್ಲಿ ರಾಣಾ ನಟನೆ ಕಲಿತಿದ್ದಾರಂತೆ.
ಅದು ಹೇಗೆ ಎಂದು ನೀವು ಕೇಳಬಹುದು. “ದಿ ವಿಲನ್’ ಚಿತ್ರದಲ್ಲಿನ ಸುದೀಪ್ ಪಾತ್ರದ ನಟನೆಯನ್ನು ಸುದೀಪ್ ಮಾಡುವ ಮೊದಲು ರಾಣಾ ಮಾಡುತ್ತಿದ್ದರಂತೆ. ಸ್ವತಃ ಸುದೀಪ್ ಕೂಡಾ ರಾಣಾ ಬೆನ್ನುತಟ್ಟಿ, “ಮೊದಲು ನೀನು ಮಾಡಿ ತೋರಿಸು’ ಎನ್ನುತ್ತಿದ್ದರಂತೆ. ಹಾಗಾಗಿ, ಪ್ರೇಮ್ ಸೆಟ್‌ನಲ್ಲೇ ರಾಣಾ ನಟನೆಯನ್ನು ಕಲಿತಿದ್ದಾರೆನ್ನಬಹುದು.
ಎಲ್ಲಾ ಓಕೆ, ಚಿತ್ರದಲ್ಲಿ ನಾಯಕಿ ಯಾರು ಎಂದು ನೀವು ಕೇಳಬಹುದು. ಪ್ರೇಮ್, ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ ಎನ್ನುತ್ತಾರೆ. “ಇಲ್ಲಿವರೆಗೆ ನಾನು ನಾಯಕಿ
ವಿಚಾರದಲ್ಲಿ ಯಾರೊಂದಿಗೂ ಮಾತುಕತೆ ನಡೆಸಿಲ್ಲ. ಈ ಬಾರಿ ಪಕ್ಕಾ ಕನ್ನಡದ ಹುಡುಗಿಯನ್ನೇ ನಾಯಕಿಯನ್ನಾಗಿಸುತ್ತೇನೆ. ಹೊಸ ಮುಖಗಳಿಗೆ ಮೊದಲ ಆದ್ಯತೆ’ ಎನ್ನುವುದು ಪ್ರೇಮ್ ಮಾತು. ಈ ಸಿನಿಮಾವನ್ನು ಪ್ರೇಮ್ ಹಾಗೂ ರಕ್ಷಿತಾ ತಮ್ಮ ಹೋಂಬ್ಯಾನರ್‌ನಲ್ಲೇ ನಿರ್ಮಿಸುತ್ತಿದ್ದಾರೆ. ರಕ್ಷಿತಾ ಫಿಲಂ ಫ್ಯಾಕ್ಟರಿನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.