ಲೈಫ್ ಜೊತೆ ಪ್ರೇಮ್ ಸೆಲ್ಫಿ

Team Udayavani, Oct 18, 2017, 7:30 PM IST

Prem-(10).jpg

ಜಿಮ್‌ನಿಂದ ಆಗಷ್ಟೇ ಬಂದು ಕುಳಿತಿದ್ದರು ಪ್ರೇಮ್‌. ಸದ್ಯಕ್ಕೆ ಅವರು ರಿಲ್ಯಾಕ್ಸ್‌ ಮೂಡ್‌ನ‌ಲ್ಲಿದ್ದರು. ಇನ್ನು ಮೂರು ದಿನ ಬಿಟ್ಟರೆ ಮತ್ತೆ “ಲೈಫ್ ಜೊತೆಗೊಂದು ಸೆಲ್ಫಿ’ ಚಿತ್ರದ ಚಿತ್ರೀಕರಣ. ಅಷ್ಟರಲ್ಲಿ ಒಂದಿಷ್ಟು ಕೆಲಸಗಳನ್ನು ಮುಗಿಸಿಕೊಂಡು, ಚಿತ್ರೀಕರಣಕ್ಕೆ ರೆಡಿಯಾಗಬೇಕೆಂಬುದು ಅವರ ಯೋಚನೆ ಮತ್ತು ಯೋಜನೆ. ಅದಕ್ಕೆ ಕಾರಣವೂ ಇದೆ. “ಚೌಕ’ ನಂತರ ಅವರು ಸಾಕಷ್ಟು ಕಥೆ ಕೇಳಿದ್ದರಂತೆ.

ಅದರಲ್ಲಿ ಹಲವು ಕಥೆಗಳನ್ನು ಬೇಡ ಎಂದು ಬಿಟ್ಟಾಕಿ, ಒಳ್ಳೆಯ ಕಥೆಗಳಿಗೆ ಮಾತ್ರ ತನ್ನ ಮೊದಲ ಆದ್ಯತೆ ಎಂದು ತೀರ್ಮಾನ ಮಾಡಿ, ಆ ಪೈಕಿ ಸದ್ಯಕ್ಕೆ “ಲೈಫ್ ಜೊತೆಗೊಂದು ಸೆಲ್ಫಿ ಮಾತ್ರ ಒಪ್ಪಿಕೊಂಡಿದ್ದಾರೆ. “ಚೌಕ’ಗಿನ್ನ ಮುನ್ನ ಕಥೆ ಬೇರೆ ಇತ್ತು. ಆ ಚಿತ್ರ ಮಾಡಿದ ಮೇಲೆ ಜವಾಬ್ದಾರಿ ಜಾಸ್ತಿ ಆಗಿದೆ. ಆ ಚಿತ್ರದಲ್ಲಿ ಎರಡು ವಿಭಿನ್ನ ಶೇಡ್‌ಗಳಿರುವ ಪಾತ್ರವನ್ನು ಮಾಡಿದೆ. ಜನ ಮೆಚ್ಚಿಕೊಂಡಿದ್ದಾರೆ. ಹಾಗಾಗಿ ಇನ್ನು ಮುಂದೆ ಬೇರೆ ತರಹದ ಪಾತ್ರಗಳನ್ನು ಮಾಡುವುದಕ್ಕೆ ತೀರ್ಮಾನ ಮಾಡಿದ್ದೇನೆ.

“ಚೌಕ’ ನಂತರ ಎಂಟØತ್ತು ಸಿನಿಮಾಗಳನ್ನು ಒಪ್ಪಬಹುದಿತ್ತು. ಆದರೆ, ಸಿಕ್ಕಿದ್ದೆಲ್ಲಾ ಮಾಡೋಕೆ ಇಷ್ಟವಿಲ್ಲ. ಹಾಗಾಗಿ ಒಳ್ಳೆಯ ಕಥೆಗಳು ಮತ್ತು ಪಾತ್ರಗಳನ್ನು ಮಾಡಬೇಕು ಅಂತ ತೀರ್ಮಾನಿಸಿ ಹೊರಟಿದ್ದೇನೆ. ಅದರಲ್ಲಿ ಮೊದಲ ಹೆಜ್ಜೆ “ಲೈಫ್ ಜೊತೆಗೊಂದು ಸೆಲ್ಫಿ’ ….’ ಎಂದು ಪ್ರೇಮ್‌ ಒಂದೇ ಉಸಿರನಲ್ಲಿ ಹೇಳುತ್ತಾ ಹೋದರು. ಕಳೆದ ಕೆಲವು ವರ್ಷಗಳಲ್ಲಿ ಬದಲಾಗಿರುವ ಟ್ರೆಂಡ್‌ನ್ನು ಪ್ರೇಮ್‌ ಗಮನಿಸಿದ್ದಾರೆ.

ಮುಂಚಿನ ತರಹ ಫೈಟು, ಡ್ಯುಯೆಟ್ಟು ಎಲ್ಲಾ ಜನ ಇಷ್ಟಪಡುವುದಿಲ್ಲ ಮತ್ತು ಹೆಚ್ಚಾಗಿ ನೈಜ ಚಿತ್ರಗಳನ್ನು ಜನ ನಿರೀಕ್ಷೆ ಮಾಡುತ್ತಾರೆ ಎಂದು ಅರಿತುಕೊಂಡಿದ್ದಾರೆ. ಹಾಗಾಗಿ ಅಂತಹ ಚಿತ್ರಗಳು ಮತ್ತು ಪಾತ್ರಗಳಿಗೆ ಒತ್ತು ಕೊಡುವುದು ಅವರ ಚಿಂತನೆ. “ಕೆಲವು ವರ್ಷಗಳಿಂದ ನೋಡಿಕೊಂಡು ಬನ್ನಿ, ಜನ ಹೆಚ್ಚಾಗಿ ರಿಯಲಾಸ್ಟಿಕ್‌ ಸಿನಿಮಾಗಳನ್ನು ನೋಡುತ್ತಿದ್ದಾರೆಯೇ ಹೊರತು, ಆರ್ಟಿಫಿಷಿಯಲ್‌ ಚಿತ್ರಗಳನ್ನು ಇಷ್ಟಪಡುವುದಿಲ್ಲ. ಜನ ಈಗ ಫೈಟು, ಡ್ಯುಯೆಟ್ಟು ಎಲ್ಲ ನೋಡಲ್ಲ.

ಅದೇ ಕಾರಣಕ್ಕೂ ತೆಲುಗು, ತಮಿಳಿನಲ್ಲೂ ಅಬ್ಬರ ಕಡಿಮೆಯಾಗಿದೆ. ಬಹಳ ಪ್ರಾಕ್ಟಿಕಲ್‌ ಮತ್ತು ನೈಜ ಸಿನಿಮಾಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಜನಕ್ಕೆ ಎಲ್ಲಕ್ಕಿಂತ ಹೆಚ್ಚಾಗಿ ಒಂದು ಕಥೆ ಕನೆಕ್ಟ್ ಆಗಬೇಕು. ಅಂತಹ ಕಥೆಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಅಂತಹ ಕಥೆಗಳನ್ನ ನಾನು ಹುಡುಕುತ್ತಿದ್ದೀನಿ’ ಎಂದು ತಮ್ಮ ಆದ್ಯತೆಯನ್ನು ವಿವರಿಸುತ್ತಾರೆ. ಪ್ರೇಮ್‌ ಬಳಿ ಕಥೆ ಹೇಳ್ಳೋಕೆ ಬರೋರಲ್ಲಿ ಹೊಸಬರೇ ಹೆಚ್ಚಂತೆ.

“ಬಹುತೇಕ ಹೊಸಬರೇ ಚಿತ್ರ ಮಾಡೋಣ ಅಂತ ಬರುತ್ತಿದ್ದಾರೆ. ಕೆಲವರು ತುಂಬಾ ಒಳ್ಳೆಯ ಕಥೆಗಳನ್ನು ಮಾಡಿಕೊಂಡು ಬಂದಿರುತ್ತಾರೆ. ಆದರೆ, ಬರೀ ಕಥೆ ಇದ್ದರೆ ಸಿನಿಮಾ ಆಗುವುದಿಲ್ಲ. ಅದಕ್ಕೆ ಬ್ಯಾಕಪ್‌ ಆಗಿ ಒಳ್ಳೆಯ ನಿರ್ಮಾಪಕರು ಇರಬೇಕು. ನಾನು ಗಮನಿಸಿರುವಂತೆ ಎಷ್ಟೋ ಬಾರಿ ಒಳ್ಳೆಯ ಕಥೆಗಳಿಗೆ ಒಳ್ಳೆಯ ನಿರ್ಮಾಪಕರಿರುವುದಿಲ್ಲ, ಒಳ್ಳೆಯ ನಿರ್ಮಾಪಕರಿಗೆ ಒಳ್ಳೆಯ ಕಥೆಗಳು, ಚಿತ್ರಗಳು ಸಿಗುವುದಿಲ್ಲ. ಎಷ್ಟೋ ನಿರ್ಮಾಪಕರಿಗೆ ಸಿನಿಮಾ ಬಗ್ಗೆ ಗೊತ್ತಿರುವುದೇ ಇಲ್ಲ.

75 ಪರ್ಸೆಂಟ್‌ ಓಕೆ ಆದರೂ, ಒಂದು ಚಿತ್ರ ಮಾಡುವುದಕ್ಕೆ ಮುನ್ನುಗ್ಗಬಹುದು. ಆದರೆ, ಎಷ್ಟೋ ಚಿತ್ರಗಳಲ್ಲಿ ಎಲ್ಲವೂ ಸರಿಯಾಗಿದೆ ಅಂತ ಅನಿಸುವುದಿಲ್ಲ. ಸುಮ್ಮನೆ ಕಮಿಟ್‌ ಆದರೆ, ಅವರ ದುಡೂx ಹಾಳು, ನನ್ನ ಸಮಯಾನೂ ಹಾಳು ಅನ್ನೋ ಕಾರಣಕ್ಕೆ ನಾನು ಒಪ್ಪುವುದೇ ಇಲ್ಲ’ ಎನ್ನುತ್ತಾರೆ ಪ್ರೇಮ್‌. ಪ್ರೇಮ್‌ ಹೇಳುವಂತೆ ಅಪ್‌ಡೇಟ್‌ ಆಗದಿರುವುದೇ ಇದಕ್ಕೆಲ್ಲಾ ಕಾರಣವಂತೆ. “ಎಷ್ಟೋ ಜನ ಬಂದು ಕಥೆ ಹೇಳುತ್ತಾರೆ. ಅವರ್ಯಾರೂ ಅಪ್‌ಡೇಟ್‌ ಆಗಿರುವುದಿಲ್ಲ.

ಇವತ್ತಿನ ಸ್ಟೈಲ್‌, ನೇಟಿವಿಟಿಯ ಬಗ್ಗೆ ಯೋಚಿಸುವುದಿಲ್ಲ. ಸುಮ್ಮನೆ ಏನೋ ಮಾಡಿಕೊಂಡು ಬರುತ್ತಾರೆ. ನನಗೆ ಹೊಸಬರು, ಹಳಬರು ಅಂತ ಏನಿಲ್ಲ. ಸಿನಿಮಾ ಅಂದರೆ ನನ್ನ ಒಬ್ಬನ ಬದುಕು ಅಲ್ಲ. ಒಂದು ಸಿನಿಮಾ ಅಂದರೆ ಎಲ್ಲರಿಗೂ ಅದು ಕೆರಿಯರ್‌ ಆಗಿರುತ್ತದೆ. ಹಾಗಾಗಿ ಅದಕ್ಕೆ ನಿಷ್ಠರಾಗಿರಬೇಕು. ಒಂದು ಸಿನಿಮಾ ಸಿಗುತ್ತದೆ ಎಂದರೆ ಯಾರನ್ನೋ ಕಷ್ಟಕ್ಕೆ ಸಿಕ್ಕಿಸುವುದಕ್ಕೆ ನನಗೆ ಇಷ್ಟ ಇಲ್ಲ. ಒಂದು ಸಿನಿಮಾ ಅಂದರೆ ಮಿನಿಮಮ್‌ ಒಂದಿಷ್ಟು ಕೋಟಿ ಬೇಕು.

ಸರಿಯಾಗಿ ಪ್ಲಾನ್‌ ಮಾಡಿಕೊಂಡು ಬಂದರೆ ಓಕೆ. ನಾಳೆ ಆ ಹಣ ಸಿಕ್ಕಿಕೊಂಡರೆ, ಆಗ ಬರೀ ನನಗೆ ಕೆಟ್ಟ ಹೆಸರು ಬರುವುದಷ್ಟೇ ಅಲ್ಲ, ಚಿತ್ರರಂಗಕ್ಕೆ ಕೆಟ್ಟ ಹೆಸರು ಬರುತ್ತದೆ. ಸಿನಿಮಾದವರು ಸರಿ ಇಲ್ಲ ಎಂದು ಹೇಳಿಕೊಂಡು ಓಡಾಡಿದರೆ, ಅದರಿಂದ ಎಲ್ಲರಿಗೂ ಕೆಟ್ಟ ಹೆಸರು ಬರುತ್ತದೆ. ಹಾಗಾಗಿ ನಿರ್ದೇಶಕರಾಗಲೀ, ನಿರ್ಮಾಪಕರಾಗಲೀ ಮೊದಲು ಸರಿಯಾಗಿ ಹೋಂವರ್ಕ್‌ ಮಾಡಿಕೊಂಡು ಬರಬೇಕು. ನನ್ನ ಹತ್ತಿರ ಬರುವವರಿಗೆಲ್ಲಾ ಇದೇ ಹೇಳುತ್ತೇನೆ.

ಬರೀ ಹೆಸರು, ಜನಪ್ರಿಯತೆ, ಆಕರ್ಷಣೆಗೆ ಸಿನಿಮಾ ಮಾಡಬೇಡಿ, ಪೇಪರ್‌ನಲ್ಲಿ ಫೋಟೋ ಬರುತ್ತೆ ಅಂತ ಮಾಡಬೇಡಿ ಎಂದು ಹೇಳುತ್ತೇನೆ. ಕೆಲವರು ವಾಪಸ್ಸು ಬರುತ್ತಾರೆ. ಇನ್ನೂ ಕೆಲವರು ಅಲ್ಲೇ ಬ್ಯಾಕೌಟ್‌ ಆಗುತ್ತಾರೆ’ ಎನ್ನುತ್ತಾರೆ ಪ್ರೇಮ್‌. ಸಿನಿಮಾ ಅನ್ನೋದು ಯಾವತ್ತೂ ರಿಸ್ಕಾ ಎನ್ನುವುದು ಪ್ರೇಮ್‌ ಅಭಿಪ್ರಾಯ. “ಇಲ್ಲಿಗೆ ಬಂದ ಮೇಲೆ ರಿಸ್ಕ್ ಗ್ಯಾರಂಟಿ. ಎಷ್ಟೇ ಜಾಗರೂಕತೆ ವಹಿಸಿದರೂ 25 ಪರ್ಸೆಂಟ್‌ ರಿಸ್ಕ್ ಇದ್ದೇ ಇರುತ್ತದೆ.

ರಿಸ್ಕ್ ತೆಗೆದುಕೊಳ್ಳೋದು ಪರವಾಗಿಲ್ಲ ಎಂದರೆ ಓಕೆ. ಇಲ್ಲ ಕಷ್ಟ. ಬರೀ ಸಿನಿಮಾ ಮಾಡೋದಷ್ಟೇ ಅಲ್ಲ, ಅದನ್ನು ಜನರಿಗೆ ಮುಟ್ಟಿಸಬೇಕು. ಹಾಗೆ ಮುಟ್ಟಿಸಿದರೆ, ಜನ ಒಳ್ಳೆಯ ಮಾತಾಡಿದರೆ ಆಗ ಒಂದು ವಾರದಲ್ಲಿ ಎತ್ತಬಹುದು. ಇಲ್ಲ ಕಷ್ಟವಾಗುತ್ತೆ. ಇದೆಲ್ಲಕ್ಕೂ ಬೇಕಾಗಿರುವುದು ಒಳ್ಳೆಯ ಹೋಂವರ್ಕ್‌ ಮತ್ತು ಪ್ಲಾನಿಂಗ್‌. ಎಷ್ಟು ಹೋಂವರ್ಕ್‌ ಮತ್ತು ಪ್ಲಾನಿಂಗ್‌ ಮಾಡುತ್ತೇವೋ ಅಷ್ಟು ಒಳ್ಳೆಯದು. ಆದರೆ, ಆಗಲೇ ಹೇಳಿದ್ನಲ್ಲಾ. ಎಷ್ಟೋ ಜನ ಒಳ್ಳೆಯ ಕಥೆ ಮಾಡಿಕೊಂಡು ಬರ್ತಾರೆ, ಅವರಿಗೆ ಒಳ್ಳೆಯ ನಿರ್ಮಾಪಕರು ಸಿಗುವುದಿಲ್ಲ.

ತುಕಾಲಿ ಕಥೆಗೆ ಒಳ್ಳೆಯ ನಿರ್ಮಾಪಕರು ಸಿಕ್ಕಿಬಿಡುತ್ತಾರೆ. ಅವರು ಫ್ಯಾನ್ಸಿ ದುಡ್ಡು ಕೊಡೋದಕ್ಕೂ ರೆಡಿ. ಆದರೆ, ಅದರಿಂದ ಅವರೂ ಹಾಳು. ನಾವೂ ಹಾಳು. ಅವರಿಗೆ ಬುದ್ಧಿ ಹೇಳಿ ಕಳಿಸುವಷ್ಟರಲ್ಲಿ ಸುಸ್ತಾಗಿ ಬಿಟ್ಟಿರುತ್ತೇವೆ’ ಎಂದು ನಗುತ್ತಾರೆ ಪ್ರೇಮ್‌. ಈ ಮಧ್ಯೆ ಅವರ ಅಭಿನಯದ “ದಳಪತಿ’ ಬಿಡುಗಡೆಗೆ ಸಿದ್ಧವಾಗಿದೆ. ಆ ಚಿತ್ರ ಶುರುವಾಗಿದ್ದು ಮೂರು ವರ್ಷಗಳ ಹಿಂದೆ. ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಇದಲ್ಲದೆ ಇನ್ನೂ ಒಂದೆರೆಡು ಕಥೆಗಳನ್ನು ಓಕೆ ಮಾಡಿಟ್ಟಿದ್ದಾರಂತೆ ಪ್ರೇಮ್‌. “ಲೈಫ್ ಜೊತೆಗೊಂದು ಸೆಲ್ಫಿ’ ಚಿತ್ರದ ನಂತರ ಆ ಚಿತ್ರಗಳು ಶುರುವಾಗಲಿದೆ.

ಸಿನಿಮಾ ಜೊತೆಗೆ ಕೃಷಿ
ಮುಂದಿನ ದಿನಗಳಲ್ಲಿ ಸಿನಿಮಾ ಜೊತೆಗೆ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಪ್ರೇಮ್‌ ಐಡಿಯಾ. “ಸಿನಿಮಾ ಜೊತೆಜೊತೆಗೆ ಜಮೀನು ತಗೊಂಡು ಕೃಷಿ ಮಾಡುವ ಯೋಚನೆ ಇದೆ. ಇಲ್ಲೇ ಬೆಂಗಳೂರು ಸುತ್ತಮುತ್ತ ಎಲ್ಲಾದರೂ ಜಮೀನು ಕೊಂಡುಕೊಳ್ಳುವ ಯೋಚನೆ ಇದೆ. ಇನ್ನು ಮುಂದೆ ಭೂಮಿ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಈಗಲಾದರೂ ನಮಗೆ ಬೆಳೆದುಕೊಳ್ಳುವಷ್ಟು ಒಂದು ಸಣ್ಣ ಜಮೀನು ಮಾಡುವ ಯೋಚನೆ ಇದೆ. ಹಾಗಂತ ಅದರಿಂದ ಸಿನಿಮಾಗೆ ತೊಂದರೆ ಆಗುವುದಿಲ್ಲ. ಒಳ್ಳೆಯ ಸ್ನೇಹಿತರಿದ್ದಾರೆ. ಅವರು ನೋಡಿಕೊಳ್ಳುತ್ತಾರೆ. ನನಗೆ ಸಮಯ ಇದ್ದಾಗ ಹೋಗಿ ಬರಿ¤àನಿ’ ಎನ್ನುತ್ತಾರೆ ಪ್ರೇಮ್‌.

ಟಾಪ್ ನ್ಯೂಸ್

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Sathish Ninasam: ಅಶೋಕನಿಗೆ ನೀನಾಸಂ ಸತೀಶ್‌ ಸಾಥ್‌

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

Sandalwood: ಸ್ಪಾನ್ಸರ್ಸ್ ಇ‌ದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್‌

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್‌ ಬಗ್ಗೆ ರಮ್ಯಾ ಮಾತು

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

Toxic Movie: ಫ್ಯಾನ್ಸ್‌ ನಶೆಯೇರಿಸಿದ ಯಶ್‌; ಹಾಲಿವುಡ್‌ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.