ಪ್ರೇಮ್ ಕಣ್ಣಲ್ಲಿ ‘ಲವ್’ ಡ್ರೀಮ್
Team Udayavani, Feb 23, 2022, 9:20 AM IST
ಪ್ರೇಮ್ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಅವರ ಕುತೂಹಲಕ್ಕೆ ಕಾರಣ “ಏಕ್ ಲವ್ ಯಾ’. ಹೌದು, ಪ್ರೇಮ್ ನಿರ್ದೇಶನದ “ಏಕ್ ಲವ್ ಯಾ’ ಚಿತ್ರ ಫೆ.24ರಂದು ತೆರೆಕಾಣುತ್ತಿದೆ. ಸಹಜವಾಗಿಯೇ ಪ್ರೇಮ್ ಈ ಚಿತ್ರದ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಕಾರಣ ಕಥೆ ಹಾಗೂ ಮೇಕಿಂಗ್. ಆ್ಯಕ್ಷನ್, ಸೆಂಟಿಮೆಂಟ್ ಸಿನಿಮಾಗಳನ್ನು ಮಾಡಿರುವ ಪ್ರೇಮ್ “ಏಕ್ ಲವ್ ಯಾ’ದಲ್ಲಿ ಔಟ್ ಅಂಡ್ ಔಟ್ ಲವ್‌ಸ್ಟೋರಿಯನ್ನು ಕಟ್ಟಿಕೊಟ್ಟಿದ್ದಾರೆ.
ಸಾಮಾನ್ಯವಾಗಿ ಸ್ಟಾರ್‌ಗಳ ಜೊತೆ ಸಿನಿಮಾ ಮಾಡುವ ಪ್ರೇಮ್, ಈ ಬಾರಿ ಸಂಪೂರ್ಣ ಹೊಸಬರನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಸಖತ್ ಹಿಟ್ ಆಗಿದೆ. ಟ್ರೇಲರ್ ನೋಡಿದವರಿಗೆ ಪ್ರೇಮ್ ಲವ್‌ಸ್ಟೋರಿಗೆ ಮರಳಿರೋದು ಎದ್ದು ಕಾಣುತ್ತದೆ. ಹಾಗಂತ ರೆಗ್ಯುಲರ್ ಲವ್‌ಸ್ಟೋರಿಯಲ್ಲ. ಒಂದಷ್ಟು ಹೊಸ ಅಂಶಗಳೊಂದಿಗೆ “ಏಕ್ ಲವ್ ಯಾ’ ಚಿತ್ರವನ್ನು ಕಟ್ಟಿಕೊಟ್ಟಂತಿದೆ. “ಈ ಹುಡುಗರು ಹೆಂಗ್ ಗೊತ್ತೇನೋ, ದಿನಕ್ಕೊಂದು ಗಾಡಿ ಟೆಸ್ಟ್ ಡ್ರೈವ್ ನೋಡೋ ತರಹ ದಿನಕ್ಕೊಂದು ಹುಡುಗಿನ ನೋಡಿ, ಓಡಿ ಬಿಟ್ ಬಿಡ್ತಾರೆ’ ಎಂಬ ರಚಿತಾ ರಾಮ್ ಅವರ ಡೈಲಾಗ್‌ನೊಂದಿಗೆ ಆರಂಭವಾಗುವ ಈ ಟ್ರೇಲರ್‌ನಲ್ಲಿ ಭರ್ಜರಿ ಆ್ಯಕ್ಷನ್ ದೃಶ್ಯಗಳು ಇವೆ. ಅಲ್ಲಿಗೆ ಲವ್ ಕಂ ಆ್ಯಕ್ಷನ್ ಸಿನಿಮಾ ಎಂದು ಅಂದಾಜಿಸಬಹುದು. ಚಿತ್ರದಲ್ಲಿ ಪ್ರೀತಿ, ಬ್ರೇಕಪ್, ಅದರ ತೀವ್ರತೆ .. ಹೀಗೆ ಅನೇಕ ಅಂಶಗಳನ್ನು ಕಟ್ಟಿಕೊಟ್ಟಂತಿದೆ.
ಇದನ್ನೂ ಓದಿ: ನಟಿ ರಶ್ಮಿಕಾ ಮಂದಣ್ಣ ಜತೆ ಮದುವೆ ವದಂತಿಗೆ ತೆರೆ
ಇನ್ನು, ಚಿತ್ರದ ಬಿಡುಗಡೆಯಾಗಿರುವ ಎಲ್ಲಾ ಹಾಡುಗಳು ಹಿಟ್‌ಲಿಸ್ಟ್ ಸೇರಿವೆ. ಆರಂಭದಲ್ಲಿ ಬಿಟ್ಟ ಹುಡುಗಿಯರ ಬ್ರೇಕಪ್ ಸಾಂಗ್ ಆಗಿ ಹೊರಬಂದ “ಎಣ್ಣೆಗೂ ಹೆಣ್ಣಿಗೂ…’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅದರ ಬೆನ್ನಲ್ಲೇ ಈಗ ಹುಡುಗರ ಬ್ರೇಕಪ್ ಸಾಂಗ್ ರಿಲೀಸ್ ಆದ “ಒಂದು ಊರಲಿ..ಕೊನೆ ಬೀದಿಲಿ, ಇದ್ಲು ಒಬ್ಬಳು ಮುದ್ದು ದೇವತೆ…’ ಎಂದು ಆರಂಭವಾಗುವ ಹಾಡು ಸಿನಿಪ್ರೇಮಿಗಳ ಮನಗೆದ್ದಿದೆ. ಇದರ ಜೊತೆಗೆ “ಡೇಟ್ ಮಾಡೋಣ ಇಲ್ಲ, ಮೀಟ್ ಮಾಡೋಣ’ ಹಾಡು ಕೂಡಾ ಹಿಟ್ ಆಗಿದ್ದು, ಸಿನಿಮಾದ ಕ್ರೇಜ್ ಹೆಚ್ಚಿಸಿದೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ.
ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ರಾಣಾ ನಾಯಕರಾಗಿ ನಟಿಸಿದ್ದಾರೆ. ರಚಿತಾ ರಾಮ್, ರೀಷಾ ಸೇರಿದಂತೆ ಅನೇಕರು ನಟಿಸಿದ್ದಾರೆ. ರಕ್ಷಿತಾ ಫಿಲಂ ಫ್ಯಾಕ್ಟರಿಯಡಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Vijay Hazare Trophy: ಅರುಣಾಚಲ ಎದುರಾಳಿ; ರಾಜ್ಯಕ್ಕೆ 4ನೇ ಜಯದ ನಿರೀಕ್ಷೆ
Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!
Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.