ಕನ್ನಡ ಸಿನಿಮಾ ಆ್ಯಪ್‌ಗೆ ತಯಾರಿ

ಬುಕ್‌ ಮೈ ಶೋಗೆ ಪರ್ಯಾಯವಾಗಿ ನಮ್ಮ ಚಿತ್ರ ಡಾಟ್‌ ಕಾಮ್‌ ಶುರು

Team Udayavani, Feb 19, 2020, 7:04 AM IST

kannada-cinema

ಬುಕ್‌ ಮೈ ಶೋ ವಿರುದ್ಧ ಹಲವು ನಿರ್ಮಾಪಕರು, ನಿರ್ದೇಶಕರಿಂದ ಕೇಳಿಬಂದಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ನಿರ್ಮಾಪಕರ ಸಂಘ ಶೀಘ್ರವೇ “ನಮ್ಮ ಚಿತ್ರ ಡಾಟ್‌ ಕಾಮ್‌’ ಆ್ಯಪ್‌ ಶುರು ಮಾಡುವ ಮೂಲಕ ನಿರ್ಮಾಪಕರ ಸಮಸ್ಯೆ ಬಗೆಹರಿಸಲು ಮುಂದಾಗಿದೆ. ಇತ್ತೀಚೆಗಷ್ಟೇ ಒಳ್ಳೆಯ ಸಿನಿಮಾಗಳಿಗೂ ಬುಕ್‌ ಮೈ ಶೋನಿಂದ ಅನ್ಯಾಯ ಆಗುತ್ತಿದೆ ಎಂಬ ಆರೋಪ ಜೋರಾಗಿಯೇ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ನಿರ್ಮಾಪಕರ ಸಂಘ ಆದಷ್ಟ ಬೇಗ “ನಮ್ಮ ಚಿತ್ರ ಡಾಟ್‌ ಕಾಮ್‌’ ಆ್ಯಪ್‌ ಹೊರತಂದು ಆ ಮೂಲಕ ನಿರ್ಮಾಪಕರ ಪರ ನಿಲ್ಲುವ ಭರವಸೆ ನೀಡಿದೆ. ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಸಂಘದ ಅಧ್ಯಕ್ಷ ಪ್ರವೀಣ್‌ ಕುಮಾರ್‌, “ಬುಕ್‌ ಮೈ ಶೋ ನಡೆಸುವ ವ್ಯಕ್ತಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಕನ್ನಡದ ಬಹುತೇಕ ಸಿನಿಮಾಗಳಿಗೆ ಬೆಂಬಲ ನೀಡದೆ, ಕಡೆಗಣಿಸಲಾಗುತ್ತಿದೆ.

ಹೀಗಾಗಿ “ನಮ್ಮ ಚಿತ್ರ ಡಾಟ್‌ ಕಾಮ್‌’ ಎಂಬ ಹೊಸ ಆ್ಯಪ್‌ ಹೊರತಂದು, ಆ ಮೂಲಕ ಕನ್ನಡ ಸಿನಿಮಾ ನಿರ್ಮಾಪಕರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಾಗುವುದು. ಈಗಾಗಲೇ ಈ ಆ್ಯಪ್‌ ಕುರಿತು ಮಾತುಕತೆ ನಡೆದಿದೆ. ನಾವೇ ಸಾಫ್ಟ್ವೇರ್‌ ರೆಡಿ ಮಾಡಿ, ಅದನ್ನು ಸರ್ಕಾರಕ್ಕೆ ಕೊಡುತ್ತಿದ್ದೇವೆ. ಆದರೆ, ಆ ಆ್ಯಪ್‌ ನಿರ್ವಹಣೆಯನ್ನು ನಾವು ವಹಿಸಿಕೊಳ್ಳುತ್ತೇವೆ. ಇದು ನಿರ್ಮಾಪಕರ ಪರ ಇರಲಿದೆ.

ಈ ಆ್ಯಪ್‌ ಹೇಗೆ ಕಾರ್ಯನಿರ್ವಹಿಸುತ್ತೆ ಅಂದರೆ, ಪ್ರತಿ ಸಿನಿಮಾಗೂ ಒಂದು ಕೋಡ್‌ ನಂಬರ್‌ ಇರುತ್ತೆ. ಅದನ್ನು ನಿರ್ಮಾಪಕರಿಗೂ ಹಾಗು ಸರ್ಕಾರಕ್ಕೂ ಕೊಡಲಾಗುತ್ತೆ. ತಮ್ಮ ಆ್ಯಪ್‌ನಲ್ಲಿ ಕೋಡ್‌ ನಂಬರ್‌ ಮೂಲಕ ಎಲ್ಲಿಂದ ಬೇಕಾದರೂ, ರಿಲೀಸ್‌ ಆಗುವ ತಮ್ಮ ಚಿತ್ರಗಳ ಗಳಿಕೆ ಎಷ್ಟಾಯಿತು. ಎಷ್ಟು ಜನ ಬಂದರು ಎಂಬಿತ್ಯಾದಿ ವಿಷಯ ತಿಳಿಯಬಹುದು. ಅಲ್ಲಿ ಎಲ್ಲವೂ ಮುಕ್ತವಾಗಿರುತ್ತೆ.

ಇನ್ನು, ಜಿಎಸ್‌ಟಿ ಬಗ್ಗೆಯೂ ನಮ್ಮ ಸಂಘ ಸರ್ಕಾರದ ಗಮನಸೆಳೆದಿದೆ. ಶೇ.9 ರಷ್ಟು ಜಿಎಸ್‌ಟಿ ನಾಲ್ಕು ತಿಂಗಳ ಬಳಿಕ ಅದು ನಿರ್ಮಾಪಕರಿಗೆ ಹಿಂದಿರುಗಬೇಕು ಎಂಬ ಬಗ್ಗೆ ಮಾತುಕತೆ ನಡೆದಿದೆ. ಈ ಎರಡು ವಿಷಯಗಳು ಮುಂದಿನ ತಿಂಗಳಲ್ಲಿ ಬಗೆಹರಿದು, ಆದೇಶ ಬರಲಿದೆ. ಒಟ್ಟಾರೆ, ಬುಕ್‌ ಮೈ ಶೋ ನಂಬಿ ಕೂರುವ ಯಾವುದೇ ಪರಿಸ್ಥಿತಿ ಎದುರಾಗದಂತೆಯೇ, “ನಮ್ಮ ಚಿತ್ರ ಡಾಟ್‌ ಕಾಮ್‌’ ಆ್ಯಪ್‌ ತಯಾರಾಗುತ್ತಿದೆ’ ಎಂದು ವಿವರ ಕೊಡುತ್ತಾರೆ ಪ್ರವೀಣ್‌ಕುಮಾರ್‌.

ಈ ಹಿಂದೆ ಬುಕ್‌ ಮೈ ಶೋನ ಧೋರಣೆ ಗಮನಿಸಿ, ಮಂಡಳಿಯಲ್ಲಿ ಕರೆಸಿ ಚರ್ಚಿಸಲಾಗಿತ್ತು. ಹಣ ಕೊಟ್ಟವರಿಗೊಂದು, ಕೊಡದವರಿಗೊಂದು ರೀತಿ ಪ್ರಚಾರ ಕೊಡುತ್ತಿತ್ತು. ಆಗ ನೀವು ವಿಮರ್ಶೆ ಬರೆಯೋ ಆಗಿಲ್ಲ. ಟಿಕೆಟ್‌ ಕ್ಲೋಸ್‌, ಹೌಸ್‌ಫ‌ುಲ್‌ ಅಂತ ಹಾಕುವಂತಿಲ್ಲ ಎಂದು ಹೇಳಲಾಗಿತ್ತು. ಆದರೂ, ಮಂಡಳಿಯ ಮಾತಿಗೆ ಬೆಲೆ ಕೊಡದೆ, ಪುನಃ ಕನ್ನಡ ಸಿನಿಮಾಗಳ ಪಾಲಿಗೆ ಸಮಸ್ಯೆಯಾಗಿದೆ. ಇದಕ್ಕೆ ಶೀಘ್ರ ಕಡಿವಾಣ ಹಾಕುತ್ತಿದ್ದೇವೆ. ಈ ಕುರಿತು ಮಾರ್ಚ್‌ ಎರಡನೇ ಶನಿವಾರ ನಿರ್ಮಾಪಕರ ಬೃಹತ್‌ ಸಭೆ ನಡೆಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ.

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

Vijay Raghavendra is in Rudrabhishekam Movie

Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್‌ ರಾಘವೇಂದ್ರ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.